ಕರ್ನಾಟಕ

ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಸರು ಸೂಚಿಸಿದ ಹೆಚ್​ ವಿಶ್ವನಾಥ್​..!

Pinterest LinkedIn Tumblr


ಬೆಂಗಳೂರು: ಜೆಡಿಎಸ್​ನ ಮುಂದಿನ ರಾಜ್ಯಾಧ್ಯಕ್ಷರ ನೇಮಕ ವಿಚಾರವಾಗಿ ಹೆಚ್​ ವಿಶ್ವನಾಥ್​ ಪ್ರತಿಕ್ರಿಯಿಸಿದ್ದು, ಎರಡ್ಮೂರು ದಿನದಲ್ಲಿ ಹೊಸಬರ ನೇಮಕ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಯಾರನ್ನು ಅಧ್ಯಕ್ಷರನ್ನಾಗಿ ಮಾಡಿದ್ರೂ ಓಕೆ. ನಾವೇ ಪಕ್ಷದ ಧ್ವಜ ನೀಡಿ ಗೌರವಿಸುತ್ತೇವೆ ಎಂದು ಅವರು ನುಡಿದರು.

ಅಲ್ಲದೇ ಸಿಎಂ ಗ್ರಾಮವಾಸ್ತವ್ಯ ಮೆಚ್ಚುವಂತಹದ್ದು ಇದನ್ನ ಅವರು ಮುಂದುವರಿಸಬೇಕು. ಮತ್ತಷ್ಟು ವಿಸ್ತರಿಸಬೇಕು ಎಂದು ಹೆಚ್​ ವಿಶ್ವನಾಥ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ರಾಜ್ಯದಲ್ಲಿ ಮಧ್ಯಂತರ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಅಂತಹ ವಾತಾವರಣವೇನು ಇಲ್ಲ. ನಮ್ಮ ದೊಡ್ಡವರು ಪಕ್ಷ ಸಂಘಟನೆಗೆ ಸಿದ್ಧರಾಗಿದ್ದೇವೆಂದಿದ್ದಾರೆ. ಚುನಾವಣೆಗೆ ಸಿದ್ಧ ಅಂತ ಹೇಳಿದ್ದಾರೆಯೇ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಧುಬಂಗಾರಪ್ಪ ಪರ ಹೆಚ್​. ವಿಶ್ವನಾಥ್ ಬ್ಯಾಟಿಂಗ್!

ಸದ್ಯ ಮಧು ಬಂಗಾರಪ್ಪ ಯುವ ಘಟಕದ ಅಧ್ಯಕ್ಷರಾಗಿದ್ದವರು. ಅವರಿಗೆ ಪಕ್ಷ ಸಂಘಟನೆ ಅನುಭವವಿದೆ. ಹೆಚ್.ಡಿ ಕುಮಾರಸ್ವಾಮಿಯವರೂ ಅನುಭವವಿರುವವರೇ, ಫಾರೂಕ್ ಅವರೂ ಹಿರಿಯರು ಆದರೆ, ಮಧುಬಂಗಾರಪ್ಪ ನೇಮಕ ಮಾಡಿದರೆ ಔಚಿತ್ಯ ಎಂದು ಹೆಚ್​ ವಿಶ್ವನಾಥ್​ ತಿಳಿಸಿದರು.

Comments are closed.