ಮಾತಿನ ಶೈಲಿಯಿಂದ ಹುಡುಗೀಯರನ್ನು ಯಾಮಾರಿಸಿದವನು ಆಗಿದ್ದು ಎರಡು ಮದುವೆ . ಜೊತೆಗೊಂದು ಲೀವಿಂಗ್ ಟುಗೆದರ್ ಸಂಬಂಧ. ಇಬ್ಬರ ಹೆಂಡಿರ ಗಂಡನ ಮತ್ತೊಂದು ಮದುವೆಗೆ ಬ್ರೇಕ್ ಬಿದ್ದಿದೆ.
ಪ್ರವೀಣ್ ವೃತ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್.. ಗಾರ್ಮೆಂಟ್ಸ್ ಒಂದ್ರಲ್ಲಿ ವಾಚ್‌ಮೆನ್ ಆಗಿರೋ ಈತ, ಕಳೆದ 2 ವರ್ಷಗಳಿಂದ ಗಾರ್ಮೆಂಟ್ಸ್ ಯವತಿ ಪದ್ಮಾವತಿ ಹಿಂದೆ ಬಿದ್ದಿದ್ದ. ನಿನ್ನನ್ನೇ ಮದ್ವೆಯಾಗ್ತೀನಿ ಅಂತ ನಂಬಿಸಿ, ಅವಳ ಪೋಷಕರ ಜೊತೆಯೂ ಮಾತನಾಡಿದ್ದ. ಜೊತೆಗೆ ಲಿವಿಂಗ್ ರಿಲೀಶನ್‌ಶಿಪ್ ಇಟ್ಕೊಂಡು ಎರಡು ಬಾರಿ ಅಬಾರ್ಷನ್ ಕೂಡ ಮಾಡಿಸಿದ್ದನಂತೆ. ಕಡೆಗೆ ಹಸೆಮಣೆ ಏರಲು ಸಿದ್ಧತೆ ನಡೆಸುತ್ತಿರುವಾಗ ಪತ್ನಿಯರ ವಿಚಾರ ಪದ್ಮಾವತಿಗೆ ಗೊತ್ತಾಗಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಸದ್ಯ ಈ ವಿಚಾರ ಪ್ರವೀಣ್‌ನ ಮೊದಲ ಪತ್ನಿಗೆ ಗೊತ್ತಾಗಿದ್ದು, ಆತನಿಂದ ಜೀವನಾಂಶ ಕೊಡಿಸಿ, ಅವನ ಸಹವಾಸವೇ ಬೇಡ ಅಂದಿದ್ದಾಳೆ. ಈ ಸಂಬಂಧ ಪದ್ಮಾವತಿ ಚಂದ್ರಾಲೇಔಟ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾಳೆ.
ಪ್ರವೀಣನ ಮೂರನೇ ಮದ್ವೆಗೆ ಬ್ರೇಕ್ ಬಿದ್ದಿದೆ. ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡ್ಕೊಂಡು ಮೂವರ ಜೊತೆ ಹೇಗೆ ಸಂಸಾರ ಮಾಡ್ತಿದ್ದ, ಹಣ ಹೇಗೆ ಹೊಂದಿಸ್ತಿದ್ದ ಎಂದು ಪೊಲೀಸರೂ ಆಶ್ಚರ್ಯ ಪಡುತ್ತಿದ್ದಾರೆ.
Comments are closed.