ಕರ್ನಾಟಕ

ಪ್ಲಾಸ್ಟಿಕ್​​ ರಾಶಿ ಮುಂದೇ ಆಹಾರ ಹುಡುಕಿದ ಆನೆ!

Pinterest LinkedIn Tumblr


ಎಷ್ಟೇ ಕಾನೂನು ನಿಬಂಧನೆಗಳು ಜಾರಿಗೆ ಬಂದರೂ ಸಹ ಪ್ಲಾಸ್ಟಿಕ್ ಉಪಯೋಗ ಮಾತ್ರ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಇನ್ನೂ ಭೂಮಿಯ ಮೇಲೆ ಕರಗದ ಪ್ಲಾಸ್ಟಿಕ್ ರಾಶಿಯನ್ನು ಪ್ರಾಣಿಗಳು ಆಹಾರವಾಗಿ ಸೇವಿಸಿ ಜೀವವನ್ನೆ ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ರಾಶಿ ದೊರೆತ ಸುದ್ದಿ ವೈರಲ್ ಆದ ಬೆನ್ನಲ್ಲೇ, ಇದೀಗಾ ಆನೆಯೊಂದು ಪ್ಲಾಸ್ಟಿಕ್ ರಾಶಿ ಮುಂದೇ ಆಹಾರವನ್ನು ಅರಸುತ್ತಾ ನಿಂತ ಪೋಟೋವೊಂದು ವೈರಲ್​ ಆಗಿದ್ದು, ಇದು ಪ್ರಾಣಿಸಂಕುಲದ ಮನಕಲಕುವ ಕತೆ ಹೇಳುವಂತಿದೆ.

ಪ್ಲಾಸ್ಟಿಕ್ ಉಪಯೋಗದಿಂದ ಇಡೀ ಪರಿಸರವೇ ನಾಶವಾಗುತ್ತಿದೆ. ಇದರ ಜೊತೆಗೆ ಸಸ್ಯಾಹಾರಿ ಪ್ರಾಣಿಗಳೂ ಸಹ ಪ್ಲಾಸ್ಟಿಕ್ ನನ್ನು ಆಹಾರವಾಗಿ ಸೇವಿಸಿ, ತನ್ನ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದೆ. ಈ ಪ್ಲಾಸ್ಟಿಕ್ ಪ್ರಾಣಿಗಳ ಜೀವಕ್ಕೆ ಯಾವ ರೀತಿ ತುತ್ತು ತಂದಿಕ್ಕುತ್ತಿದೆ ಎಂಬುವುದಕ್ಕೆ ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್ ಒಂದು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಪ್ಲಾಸ್ಟಿಕ್ ಕಸದ ರಾಶಿಯ ಮುಂದೆ ಆನೆಯೊಂದು ನಿಂತುಕೊಂಡು ತನ್ನ ಆಹಾರ ಎಲ್ಲಿದೆ ಎಂದು ಹುಡುಕುತ್ತಿದೆ. ಈ ಫೋಟೋ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು. ಎಲ್ಲರ ಮನಕಲುಕುವಂತಿದೆ.

ಇತ್ತೀಚೆಗಷ್ಟೇ ಪ್ರವೀಣ್ ಕಸ್ವಾನ್ ಎಂಬ ಅರಣ್ಯಧಿಕಾರಿ ಆನೆಯೊಂದು ತನ್ನ ಸತ್ತ ಮರಿಯನ್ನು ಬಾಯಿಯಲ್ಲಿ ಇಟ್ಟುಕೊಂಡು ಅಂತ್ಯಸಂಸ್ಕಾರಕ್ಕೆ ತೆರಳುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಶೇರ್ ಮಾಡಿದ್ದರು. ಇದೀಗ ಅದೇ ಅಧಿಕಾರಿ ಇಂತಹ ಮನಃಕಲಕುವ ವಿಡಿಯೋವನ್ನು ಶೇರ್ ಮಾಡಿದ್ದು, ಮನುಕುಲದ ಸ್ವಾರ್ಥವನ್ನು ಪ್ರಾಣಿಗಳು ಪಶ್ನೆ ಮಾಡುವಂತಿದೆ.

ನಗರಗಳು ಹೆಚ್ಚಾದಂತೆ ಕಸದ ರಾಶಿಗಳು ಹೆಚ್ಚಾಗುತ್ತಿದೆ ಜೊತೆಗೆ ಪ್ಲಾಸ್ಟಿಕ್ ಬಳಕೆದಾರರು ಸಹ ಹೆಚ್ಚಾಗುತ್ತಿದ್ದಾರೆ. ನಗರದ ಕಸವನೆಲ್ಲಾ ಅರಣ್ಯ ಪ್ರದೇಶಗಳಿಗೆ ಹೋಗಿ ವಿಸ್ತಾರವಾದ ಜಾಗ ಹುಡುಕಿ ಸುರಿಯುತ್ತಾರೆ. ಅರಣ್ಯದಲ್ಲಿ ಇರುವ ಪ್ರಾಣಿಗಳು ಹೊಟ್ಟೆ ತುಂಬಿಸಿಕೊಳ್ಳಲು ಆಹಾರವನ್ನು ಹುಡುಕುತ್ತಾ ಕಸದ ರಾಶಿ ಬಳಿಗೆ ಬಂದು ಪ್ಲಾಸ್ಟಿಕ್​ನ್ನು ಸೇವಿಸಿ ತನ್ನ ಜೀವಕ್ಕೆ ಸಂಚಕಾರವನ್ನು ತಂದುಕೊಳ್ಳುತ್ತಿದೆ. ಹೀಗೆ ಮಾನವ ಸೃಷ್ಟಿತ ಪ್ಲಾಸ್ಟಿಕ್ ಹಾಗೂ ರಾಶಿ ಕಸವು ಮುಗ್ದ ಜೀವಿಗಳ ಜೀವಕ್ಕೆ ಕುಂದು ತರುತ್ತಿದೆ, ಎಂದು ಪ್ರವೀಣ್ ಕಸ್ವಾನ್ ಟ್ವೀಟ್ ಮಾಡಿದ್ದು, ಜನರು ತಮ್ಮ ಅಂತಃಸಾಕ್ಷಿಯನ್ನು ಪ್ರಶ್ನಿಸುವಂತಿದೆ.

Comments are closed.