ನವದೆಹಲಿ: ಮಾನ್ಸೂನ್ ಮಾರುತಗಳು ಇನ್ನೆರೆಡು ದಿನಗಳಲ್ಲಿ ಮಧ್ಯ ಭಾರತವನ್ನು ಪ್ರವೇಶಿಸಲಿವೆ. ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಗುಜರಾತ್ ಹಾಗೂ ಮಹಾರಾಷ್ಟ್ರಕ್ಕೆ ಮುಂಗಾರು ಮಳೆ ನಾಳೆ ವೇಳೆಗೆ ಕಾಲಿಡಲಿದೆ.
ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿಯೂ ಸಹ ಮುಂಗಾರು ಮಳೆ ತನ್ನ ಆರ್ಭಟವನ್ನು ತೋರಿಸಲಿದೆ. ಮಂಗಳೂರು, ಮೈಸೂರು ಭಾಗಗಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎನ್ನಲಾಗಿದೆ. ಕಡಲೂರು, ಪಾಸಿಘಾಟ್, ಅಗರ್ತಲಾ ಮೊದಲಾದ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ವಾಯು ಚಂಡಮಾರುತ ಅಪ್ಪಳಿಸಿದ ಪರಿಣಾಮ ಈ ಬಾರಿ ಮುಂಗಾರು ಪ್ರವೇಶ ತಡವಾಯಿತು ಎಂಬುದು ಹವಾಮಾನ ಇಲಾಖಾ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಮಹಾರಾಷ್ಟ್ರ-ಗುಜರಾತ್ನ ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತದ ಪರಿಣಾಮ ಮಳೆಯಾಗಿದೆ.
ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ಮಾತ್ರ ಮಳೆಯಾಗಿದೆ. ವಾಯು ಚಂಡಮಾರುತ ಸೋಮವಾರ ಸಂಜೆ ಗುಜರಾತ್ ಕರಾವಳಿ ತೀರವನ್ನು ಹಾಯ್ದು ಹೋಗಲಿದ್ದು, ಅದರ ಪ್ರಭಾವ ಕುಗ್ಗಲಿದೆ. ಹೀಗಾಗಿ ವಾಯು ಚಂಡಮಾರುತ ಮಾನ್ಸೂನ್ ಮಾರುತಗಳು ಅರೇಬಿಯನ್ ಸಮುದ್ರದ ಕಡೆಗೆ ಸಾಗಲು ದಾರಿ ಮಾಡಿಕೊಡುತ್ತದೆ ಎನ್ನಲಾಗಿದೆ.
ಮಾನ್ಸೂನ್ ಮಾರುತಗಳು ಜೂನ್ 8 ರಂದು ಕೇರಳವನ್ನು ಪ್ರವೇಶಿಸಿದ್ದವು. ವಾಯು ಚಂಡಮಾರುತದಿಂದಾಗಿ ಮುಂಗಾರು ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಇನ್ನೆರೆಡು ಮೂರು ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮುಂಗಾರು ಮಳೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ, ತಮಿಳುನಾಡು, ಉತ್ತರ ಬಂಗಾಳ, ಸಿಕ್ಕಿಂನಲ್ಲಿ ಭಾರೀ ಮಳೆಯಾಗಲಿದೆ.
Comments are closed.