ಕರ್ನಾಟಕ

ಆಪರೇಷನ್ ಕಮಲ ಮಾಡುವುದಾದರೆ ಬಳ್ಳಾರಿಯಿಂದಲೇ ಆರಂಭಿಸುತ್ತೇವೆ: ಈಶ್ವರಪ್ಪ

Pinterest LinkedIn Tumblr

ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಹೀನಾಯ ಸೋಲನ್ನು ಅನುಭವಿಸಿದ ನಂತರ ಸಮ್ಮಿಶ್ರ ಸರ್ಕಾರದ ಅನೇಕ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ನಾವೇನಾದರೂ ಆಪರೇಷನ್ ಕಮಲ ಮಾಡುವುದಾದರೆ ಬಳ್ಳಾರಿಯಿಂದಲೇ ಆರಂಭಿಸುತ್ತೇವೆ ಎಂದು ಬಿಜೆಪಿ ನಾಯಕ ಕೆ.ಎಸ್​. ಈಶ್ವರಪ್ಪ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಇಂದು ಆಪರೇಷನ್ ಕಮಲದ ಕುರಿತು ಪ್ರಸ್ತಾಪಿಸಿರುವ ಈಶ್ವರಪ್ಪ, ಸಮ್ಮಿಶ್ರ ಸರ್ಕಾರದ ಆಡಳಿತಕ್ಕೆ ಜನ ಬೇಸತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಲ್ಲಿಯೂ ಹೊಂದಾಣಿಕೆಯಿಲ್ಲ. ಹೀಗಾಗಿ ಅಲ್ಲಿರುವ ಶಾಸಕರೇ ನಮ್ಮನ್ನು ಸಂಪರ್ಕ ಮಾಡುತ್ತಿದ್ದಾರೆ. ಆಪರೇಷನ್ ಕಮಲ ಶುರುವಾದರೆ ಬಳ್ಳಾರಿಯಿಂದಲೇ ಆರಂಭವಾಗೋದು ಎಂದು ಬಾಂಬ್ ಹಾಕಿದ್ದಾರೆ.

ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಪರಭಾರೆ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ, ಈ ಪ್ರಕರಣದಲ್ಲಿ ಸರ್ಕಾರದ ಪ್ರಮುಖ ರಾಜಕಾರಣಿಗಳು ಭಾಗಿಯಾಗಿದ್ದಾರೆ. ಜಿಂದಾಲ್, ಐಎಂಎ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ. ಈ ಬಗ್ಗೆ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಮೌನ ಮುರಿಯಲಿ ಎಂದಿದ್ದಾರೆ.

ಜಿಂದಾಲ್ ವಿಚಾರವಾಗಿ ಸಿಎಂ ಕುಮಾರಸ್ವಾಮಿ ಬಿಜೆಪಿಯನ್ನು ಚರ್ಚೆಗೆ ಕರೆದ ವಿಚಾರವಾಗಿ ಹೇಳಿಕೆ ನೀಡಿರುವ ಈಶ್ವರಪ್ಪ, ಮೊದಲು ಜಿಂದಾಲ್​ಗೆ ಕೊಟ್ಟಿರುವ ಜಮೀನನ್ನು ವಾಪಾಸ್ ಪಡೆಯಲಿ. ಬಳಿಕ ಸಿಎಂ ಕುಮಾರಸ್ವಾಮಿ ಬಿಜೆಪಿಯನ್ನು ಚರ್ಚೆಗೆ ಕರೆಯಲಿ. ಅಲ್ಲಿಯವರೆಗೂ ನಾವು ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಸವಾಲು ಹಾಕಿದ್ದಾರೆ.

Comments are closed.