ಕರ್ನಾಟಕ

ದೇವೇಗೌಡರ ಸೋಲಿಗೆ ಜೀರೋ ಟ್ರಾಫಿಕ್​ ಕಾರಣ’ –ಕಾಂಗ್ರೆಸ್​ ಮಾಜಿ ಶಾಸಕ ಕೆ.ಎನ್​ ರಾಜಣ್ಣ

Pinterest LinkedIn Tumblr


ತುಮಕೂರು: ತುಮಕೂರು ಕಾಂಗ್ರೆಸ್ ಭದ್ರಕೋಟೆ ಬಿಜೆಪಿ ಕೆಲವೇ ಕ್ಷೇತ್ರಕ್ಕೆ ಸೀಮಿತ ಆದರೂ ಜಿ.ಎಸ್​ ಬಸವರಾಜು ಗೆಲುವು ಕಂಡಿದ್ದಾರೆ ಅವರಿಗೆ ಅಭಿನಂದನೆ ಹೇಳುತ್ತೇನೆ ಎಂದು ಕಾಂಗ್ರೆಸ್​ ಮಾಜಿ ಶಾಸಕ ಕೆ.ಎನ್​ ರಾಜಣ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತುಮಕೂರಲ್ಲಿ ಸೋಮವಾರ ಮಾತನಾಡಿದ ಅವರು, ಜಿ.ಎಸ್​ ಬಸವರಾಜು ೨೦ ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ ನಾಯಕರ ಸಂಪರ್ಕ ಹೆಚ್ಚು, ಬಿಜೆಪಿಗಿಂತ. ಅವರ ವೈಯಕ್ತಿಕ ಸಂಪರ್ಕದಿಂದ ಸಹಾಯ ಪಡೆದು ಗೆದ್ದಿದ್ದಾರೆ ಎಂದು ಅವರು ತಿಳಿಸಿದರು.

ಸದ್ಯ ನಾನು ಕಾಂಗ್ರೆಸ್ ತೊರೆದು ಹೊಗುವ ಪ್ರಶ್ನೆಯೆ ಇಲ್ಲ, ಮೈತ್ರಿ ಸೋಲಿಗೆ ಝೀರೋ ಟ್ರಾಫಿಕ್ ಕಾರಣ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರನ್ನು ಜೀಯೋ ಟ್ರಾಫಿಕ್​ಗೆ ಹೋಲಿಕೆ ಮಾಡಿ ವ್ಯಂಗ್ಯ ಮಾಡಿದ್ದಾರೆ.

ಇನ್ನು ಒಂದು ವಾರದಲ್ಲಿ ಜೀರೋ ಟ್ರಾಫಿಕ್ ಕೆಳಕ್ಕೆ ಇಳಿಯಲಿದೆ. ಕೇಂದ್ರದಲ್ಲಿ ಮೋದಿ ಪ್ರಮಾಣವಚನ ಸ್ವೀಕರಿಸುವ ವರೆಗೂ ಮೈತ್ರಿ ಇರಲಿದೆ ನಂತರ ಮೈತ್ರಿ ಸರ್ಕಾರ ಉರುಳಲಿದೆ ಎಂದು ಕೆ.ಎನ್ ರಾಜಣ್ಣ ಭವಿಷ್ಯ ನುಡಿದರು.

ಡಿಸಿಎಂಗೆ ನಾನು ಸಹಕಾರ ಮಾಡಿದ್ದೆ ಅವನಿಗೆ, ನನ್ನ ಸಹಕಾರದಿಂದ ಗೆದ್ದು ಬಂದಾ ಅವನು, ಉಪಕಾರ ಸ್ಮರಣೆ ಇಲ್ಲ ಅವನಿಗೆ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್​ ವಿರುದ್ಧ ಮಾಜಿ ಕಾಂಗ್ರೆಸ್​ ಶಾಸಕ ಕೆ.ಎನ್ ರಾಜಣ್ಣ ಏಕವಚದಲ್ಲೇ ವಾಗ್ದಾಳಿ ನಡೆಸಿದರು.

Comments are closed.