ಟೈಮ್ಸ್ ನೌ-ವಿಎಂಆರ್ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 306 ಸ್ಥಾನ ಪಡೆದುಕೊಂಡು ಸರಕಾರ ರಚಿಸಲಿದೆ ಎಂದಿದೆ.
ರಾಜ್ಯದಲ್ಲಿ ಕಳೆದ ಬಾರಿ ಮತದಾನೋತ್ತರ ಸಮೀಕ್ಷೆ ಏನು ಹೇಳಿತ್ತು ಮತ್ತು ಫಲಿತಾಂಶ ಏನಾಗಿತ್ತು ಎಂಬ ಕುರಿತು ವಿವರ ಇಲ್ಲಿದೆ.
ರಾಜ್ಯದ 28 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 20, ಜೆಡಿಎಸ್ 1 ಮತ್ತು ಕಾಂಗ್ರೆಸ್ 7 ಸ್ಥಾನ ಪಡೆದುಕೊಳ್ಳಲಿದೆ ಎಂದು ಟೈಮ್ಸ್ ನೌ-ಒಆರ್‌ಜಿ ಎಕ್ಸಿಟ್ ಪೋಲ್ ಹೇಳಿತ್ತು.
ಮತದಾನೋತ್ತರ ಸಮೀಕ್ಷೆ: 2014ರಲ್ಲಿ ಏನಾಗಿತ್ತು?
ಬಳಿಕ ಫಲಿತಾಂಶ ಪ್ರಕಟಗೊಂಡು, ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಸ್ಥಾನಗಳಲ್ಲಿ ಜಯಗಳಿಸಿತ್ತು.