ಕಳೆದ ಐದು ತಿಂಗಳ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿ ಸಯ್ಯದ್ ಫೈರೋಜ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಗಾಂಜಾ ಕೇಸ್‌ನಲ್ಲಿ ಸಿಕ್ಕಿಬಿದ್ದಾತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ.ನಿಗೂಢ ಸಾವಿನ ಬೆನ್ನುಬಿದ್ದ ಪೊಲೀಸರಿಗೂ ಸತ್ಯ ಮರೀಚಿಕೆಯಾಗಿತ್ತು. ಕೊನೆಗೆ ವೈದ್ಯರು ನೀಡಿದ ಪೋಸ್ಟ್ ಮಾರ್ಟಂ ರಿಪೋರ್ಟ್ ಇಡೀ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.
ಗಾಂಜಾ ಪೆಡ್ಲರ್ ಸಯ್ಯದ್ ಫೈರೋಜ್ ಸಾವಿನ ಬಳಿಕ ಆತನ ಕುಟುಂಬಸ್ಥರು ಆತನದ್ದು ಆಕಸ್ಮಿಕ ಸಾವಲ್ಲ ಕೊಲೆ ಅಂತಾ ಬೀದಿಗಿಳಿದು ಪ್ರತಿಭಟನೆ ನಡೆಸಿದ್ರು.ಕೊನೆಗೂ ಪೊಲೀಸರಿಂದ ಬಯಲಾಗದ ನಿಗೂಢ ಸಾವಿನ ರಹಸ್ಯ ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಪೋಸ್ಟ್ ಮಾರ್ಟಂ ರಿಪೋರ್ಟ್‌ನಿಂದ ಬಯಲಾಗಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಫೈರೋಜ್ ಸಾವು ಸಹಜವಲ್ಲ ಆತನ ದೇಹದ ಮೇಲಿನ ಗಾಯಾಗಳ ಹಿನ್ನಲೆ ಅನಾರೋಗ್ಯದಿಂದ ಬಳಲಿ ಮೃತಪಟ್ಟಿದ್ದಾನೆಂದು ಉಲ್ಲೇಖಿಸಲಾಗಿದೆ.
ವಿಕ್ಟೋರಿಯಾ ವೈದ್ಯರ ಮರಣೋತ್ತರ ಪರೀಕ್ಷೆ ವರದಿ ಹಿನ್ನೆಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ವಿಚಾರಣಾಧೀನ ಖೈದಿ ಸಯ್ಯದ್ ಫೈರೋಜ್ ಕೊಲೆ ಆರೋಪದಡಿ ಎಫ್ ಐ ಆರ್ ದಾಖಲಾಗಿದೆ. ಈ ಕೇಸ್ ನಲ್ಲಿ ಜೈಲಿನ ಅಧಿಕಾರಿಗಳು, ಜೈಲು ಸಿಬ್ಬಂದಿ ಹಾಗೂ ಕೆಲ ಇತರೆ ವಿಚಾರಣಾಧೀನ ಕೈದಿಗಳನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.
ಒಟ್ನಲ್ಲಿ ವೈದ್ಯರ ರಿಪೋರ್ಟ್ ಬಳಿಕವಾದ್ರು ಫೈರೋಜ್ ಕುಟುಂಬಸ್ಥರಿಗೆ ನ್ಯಾಯ ಸಿಗುತ್ತಾ… ಕೊಲೆ ಆರೋಪಿಗಳು ಅಂದರ್ ಆಗ್ತರಾ ಕಾದುನೋಡಬೇಕಿದೆ.
Comments are closed.