ಕರ್ನಾಟಕ

ವಿನಾಶದ ಅಂಚಿನಲ್ಲಿ ಹೂಳೆತ್ತುವ ಹೆಸರಲ್ಲಿ ವಿಕ್ಟೋರಿಯಾ ಮಹಾರಾಣಿ ಕಟ್ಟಿಸಿದ ಕೆರೆ

Pinterest LinkedIn Tumblr


ಗದಗ: ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಐತಿಹಾಸಿಕ ವಿಕ್ಟೋರಿಯಾ ಕೆರೆಯಲ್ಲಿ ಜೆಸಿಬಿ, ಹಿಟಾಚಿಗಳ ಘರ್ಜನೆ…! ನಾ ಮುಂದು ತಾ ಮುಂದು ಎಂದು ಭೋರ್ಗರೆಯುತ್ತಿರುವ ಹೊಗುತ್ತಿರುವ ಟ್ಯ್ರಾಕ್ಟರ್‌ಗಳು..! ರೈತರ ಹೆಸರಲ್ಲಿ ಐತಿಹಾಸಿಕ ಕೆರೆಯ ಮಣ್ಣು ಪ್ರಳಯಾಂತಕರಿಂದ ಲೂಟಿ..! ಕಾನೂನು ಬಾಹಿರವಾಗಿ ಕೆರೆ ಮಣ್ಣು ಲೂಟಿಮಾಡಿದರೂ ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು…!

ಈ ಐತಿಹಾಸಿಕ ಕೆರೆ ಒಡಲು ಲೂಟಿಯಾಗುತ್ತಿರೋದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ. ಈ ಕೆರೆ ನಿರ್ಮಾಣ ಮಾಡಿದ್ದು ವಿಕ್ಟೋರಿಯಾ ಮಹಾರಾಣಿ. ಈ ಐತಿಹಾಸಿಕ ಕೆರೆಯ ಮೇಲೆ ಇಟ್ಟಂಗಿ ಭಟ್ಟಿ ಮಾಲಿಕರ ಕೆಂಗಣ್ಣು ಬಿದ್ದಿದೆ. ಇಲ್ಲಿ ಇಟ್ಟಿಗೆ ತಯಾರಕರದ್ದೇ ದರ್ಭಾರ್ ಆಗಿದೆ. ರೈತರ ಹೆಸರಿನಲ್ಲಿ, ಕೆರೆ ಹೂಳೆತ್ತುವ ನೆಪದಲ್ಲಿ ಮಣ್ಣು ದಂಧೆಕೊರರು ಹಗಲು ದರೋಡೆಗೆ ಮುಂದಾಗಿದ್ದಾರೆ.

ಈ ಡಂಬಳ ಗ್ರಾಮದ ಹೆಸರಾಂತ ವಿಕ್ಟೋರಿಯಾ ರಾಣಿ ಕೆರೆಯ ಮಣ್ಣಿಗೆ ಭಾರಿ ಬೇಡಿಕೆ ಇದೆ. ಕಪ್ಪತ್ತಗುಡ್ಡದ ನೀರು ಈ ಕೆರೆಗೆ ಬರುತ್ತಿರುವುದರಿಂದ ಮಣ್ಣು ಸಾಕಷ್ಟು ಫಲವತ್ತತೆಯಿಂದ ಕೂಡಿದೆ. ಆದ್ರೆ ಇದು ರೈತರಿಗೆ ವರದಾನವಾಗಬೇಕಾದ ಮಣ್ಣು ಕೆಲವು ದಂಧೆಕೋರರಿಗೆ ವರದಾನವಾಗುತ್ತಿದೆ. ನಿಜವಾದ ರೈತರು ಈ ಮಣ್ಣು ತರಲು ಹೋದ್ರೆ ಅವರಿಗೆ ಅವಕಾಶವೇ ನೀಡಲ್ಲ. ಇಲ್ಲಿ ರೈತರ ಹೆಸರಲ್ಲಿ ಜೆಸಿಬಿ, ಇಟಾಚಿ ಮಾಲೀಕರು ಹಣ ಮಾಡಿಕೊಳ್ತಿದ್ದಾರೆ. ಒಂದು ಟ್ರ್ಯಾಕ್ಟರ್ ಮಣ್ಣು ತುಂಬಲು ನೂರು ರೂಪಾಯಿ ವಸೂಲಿ ಮಾಡ್ತಾರೆ. ನಿತ್ಯ ಸಾವಿರಾರು ಟ್ರ್ಯಾಕ್ಟರ್ ಕೆರೆ ಮಣ್ಣು ಲೂಟಿ ಮಾಡುತ್ತಿದ್ದಾರೆ. ಕಳೆದ 20 ದಿನಗಳಿಂದ ಹೀಗೆಯೇ ಲೂಟಿ ನಡೆದಿದೆ. ಆದ್ರೆ ನಿಜವಾದ ರೈತರಿಗಾಗಲಿ, ಸರ್ಕಾರದ ಬೊಕ್ಕಸಕ್ಕಾಗಲೀ ಮಾತ್ರ ನೈಯಾಪೈಸೆ ಲಾಭವಿಲ್ಲ. ಜಿಲ್ಲಾಡಳಿತ, ಸಣ್ಣ ನೀರಾವರಿ ಇಲಾಖೆ ಹಾಗೂ ತಾಲೂಕು ಅಧಿಕಾರಿಗಳಿಗೆ ವಿಷಯ ಗೊತ್ತಿದ್ದರೂ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ರೈತರ ಹೆಸರಿನಲ್ಲಿ ಸರ್ಕಾರ ಕಣ್ಣಿಗೆ ಮಣ್ಣೆರಚುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಿದ್ದಾರೆ ರೈತರು.

ಆದ್ರೆ ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕೇಳಲು ಹೋದರೆ, ಅವರು ಕಚೇರಿಯಲ್ಲಿ ಸಿಗುತ್ತಿಲ್ಲ. ಅದೇನೇ ಇರಲಿ, ಶತಮಾನದ ಇತಿಹಾಸ ಹೊಂದಿರುವ ವಿಕ್ಟೋರಿಯಾ ಮಹಾರಾಣಿ ಕೆರೆಯ ಮಣ್ಣನ್ನು ಇಟ್ಟಿಗೆ ತಯಾರಕರು ಹಗಲು ಲೂಟಿಗೆ ಮುಂದಾಗಿದ್ದಾರೆ. ಇತ್ತ ಅಧಿಕಾರಿಗಳು ಮಾತ್ರ ಗಾಢ ನಿದ್ರೆಗೆ ಜಾರಿರುವುದು ವಿಪರ್ಯಾಸವೇ ಸರಿ..

Comments are closed.