ಉಡುಪಿ: ಬಜೆ ಡ್ಯಾಂಗೆ ನೀರು ಹರಿದು ಬರಲು ಸ್ವರ್ಣಾ ನದಿಯಲ್ಲಿ ತಡೆಯಾಗಿರುವ ಕಲ್ಲು, ಹೂಳನ್ನು ಶ್ರಮದಾನದ ಮೂಲಕ ತೆರವುಗೊಳಿಸುವ ಕಾರ್ಯವು ನಾಲ್ಕನೆ ದಿನವಾದ ಭಾನುವಾರ ಕೂಡ ಮುಂದುವರಿಯಿತು.
ಭಾನುವಾರ 50ಕ್ಕೂ ಅಧಿಕ ಮಂದಿ ಪಾಲ್ಗೊಂಡು ಹಾರೆ, ಪಿಕ್ಕಾಸುಗಳ ಮೂಲಕ ಹೂಳನ್ನು ತೆಗೆಯುವ ಕೆಲಸ ನಡೆಸಿದರು. ಹಿಟಾಚಿ ಯಂತ್ರದ ಮೂಲಕ ದೊಡ್ಡ ಬಂಡೆಗಳನ್ನು ಒಡೆಯಲಾಗುತ್ತಿದೆ.
ಶಾಸಕ ಕೆ. ರಘುಪತಿ ಭಟ್ ಅವರು ಕೂಡ ಬೆಳಗ್ಗಿನಿಂದ ರಾತ್ರಿವರೆಗೂ ಶ್ರಮದಾನದಲ್ಲಿ ಪಾಲ್ಗೊಂಡಿದ್ದು ಕಾರ್ಯಕರ್ತರು, ನಾಗರಿಕರ ಜತೆಗೆ ಸ್ಥಳದಲ್ಲಿಯೇ ಊಟ, ತಿಂಡಿ ಸೇವಿಸಿ ಶ್ರಮದಾನ ಮುಂದುವರಿಸಿದ್ದಾರೆ.