ಕರ್ನಾಟಕ

ತಹಶೀಲ್ದಾರ್ ಕಚೇರಿಯಲ್ಲೇ ನಡೆದ ಸೀಮಂತ!!

Pinterest LinkedIn Tumblr


ಸದಾ ಕರ್ತವ್ಯ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಬ್ಯುಸಿ ಇರುವ ಅಧಿಕಾರಿಗಳು ತಾಯಂದಿರ ದಿನದಂದು ತುಂಬು ಗರ್ಭಿಣಿಯೊಬ್ಬರಿಗೆ ಕಚೇರಿಯಲ್ಲೆ ಸೀಮಂತ ನೆರವೇರಿಸಿ ಸಂಭ್ರಮಿಸಿದ್ದಾರೆ.

ಈ ಎಲ್ಲಾ ದೃಶ್ಯ ಕಂಡುಬಂದದ್ದು ಶಿವಮೊಗ್ಗದ ತಹಶೀಲ್ದಾರ್ ಕಚೇರಿಯಲ್ಲಿ . ಕಚೇರಿಯಲ್ಲಿ ಶ್ವೇತ ಎಂಬ ಮಹಿಳಾ ಸಿಬ್ಬಂದಿಯೊಬ್ಬರಿಗೆ ತಮ್ಮ ಕರ್ತವ್ಯದ ನಡುವೆ ಬಿಡುವು ಮಾಡಿಕೊಂಡು ತಹಶೀಲ್ದಾರ್ ಕಚೇರಿಯಲ್ಲಿ ಭೂ ವಿಭಾಗದಲ್ಲಿ ಕೆಲಸ ಮಾಡುವ ಶ್ವೇತ ಅವರಿಗೆ ಸೀಮಂತ ಕಾರ್ಯವನ್ನು ಮಾಡಿ ಮದರ್ಸ್ ಡೇ (ಅಮ್ಮಂದಿರ ದಿನ)ದಿನವನ್ನ ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ

ಇನ್ನು ಕಚೇರಿಯ ಮಹಿಳಾ ಸಿಬ್ಬಂದಿ ಶ್ವೇತಾರಿಗೆ ಆರತಿ ಬೆಳಗಿ ಮಡಿಲಿಗೆ ಅಕ್ಕಿ, ತೆಂಗಿನ ಕಾಯಿ ಫಲತಾಂಬೂಲ ನೀಡಿ ಸೀಮಂತ ಮಾಡಿಸಿದ್ದಾರೆ.

Comments are closed.