ರಾಷ್ಟ್ರೀಯ

ಮೋದಿ ಹೆಸರು ಹೇಳಿ ಮತ ಯಾಚಿಸುತ್ತಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್!

Pinterest LinkedIn Tumblr


ಪಾಟ್ನಾ: 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳಿಗೂ ಮೋದಿಯೇ ಫೇಸ್!

ಚುನಾವಣಾ ಕಣದಲ್ಲಿರುವ ಬಿಜೆಪಿಯ ಬಹುತೇಕ ಅಭ್ಯರ್ಥಿಗಳು ಮೋದಿ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಇದೇನು ವಿಶೇಷವಲ್ಲ. ಅಚ್ಚರಿಯ ಸಂಗತಿ ಎಂದರೆ ಜೆಡಿಯು ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಈಗ ಮೋದಿ ಹೆಸರಿನಲ್ಲಿ ಮತಯಾಚನೆ ಮಾಡಲು ಪ್ರಾರಂಭಿಸಿದ್ದಾರೆ.

ಚುನಾವಣಾ ಭಾಷಣಗಳಲ್ಲಿ ಮೋದಿ ಬಗ್ಗೆ ಹೊಗಳಿಕೆಯ ಸುರಿಮಳೆಗೈಯ್ಯುತ್ತಿರುವ ನಿತೀಶ್ ಕುಮಾರ್ ಪ್ರತಿ ಬಾರಿಯೂ ಮೋದಿ ಪಾಕಿಸ್ತಾನದ ಮೇಲೆ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ನ್ನು ಉಲ್ಲೇಖಿಸುತ್ತಿದ್ದಾರೆ.

“ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ” ಎಂದು ಪ್ರತಿ ಚುನಾವಣಾ ಭಾಷಣಗಳಲ್ಲೂ ನಿತೀಶ್ ಕುಮಾರ್ ಹೇಳುತ್ತಿದ್ದಾರೆ.

ಪ್ರಧಾನಿ ಮೋದಿ ಅವರ ಕೆಲಸಗಳನ್ನು ಕೊಂಡಾಡುತ್ತಿರುವ ನಿತೀಶ್ ಕುಮಾರ್ ಹೋದಲ್ಲೆಲ್ಲಾ ಮೋದಿ ಹೆಸರಿನಲ್ಲೆ ಮತಯಾಚಿಸುತ್ತಿದ್ದಾರೆ, ತಮ್ಮ ಹೆಸರಿನಲ್ಲಿ ಮತ ಯಾಚಿಸುತ್ತಿಲ್ಲ ಎಂದು ಪಾಟ್ನಾದ ರಾಜಕೀಯ ವಿಶ್ಲೇಷಕ ಅಮಿತ್ ಕುಮಾರ್ ಹೇಳಿದ್ದಾರೆ.

Comments are closed.