ಕರ್ನಾಟಕ

K.G.F-2 ಚಿತ್ರೀಕರಣ ವಿಳಂಬಕ್ಕೆ ಕಾರಣವೇನು ಗೊತ್ತಾ..?

Pinterest LinkedIn Tumblr


ಕೆಜಿಎಫ್​​.ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಸಿನಿಮಾ. ಭಾರತೀಯ ಚಿತ್ರರಂಗವೇ ಚಂದನವನದ ಕಡೆ ತಿರುಗಿ ನೋಡುವಂತೆ ಮಾಡಿದ ಆ್ಯಕ್ಷನ್​ ಎಂಟ್ರಟ್ರೈನರ್. ಕೆಜಿಎಫ್​ ಚಾಪ್ಟರ್​ ಒನ್ ಸೂಪರ್ ಸಕ್ಸಸ್ ನಂತರ ಚಾಪ್ಟರ್ 2 ಬಗ್ಗೆ ಬೇಜಾನ್ ಹೈಪ್​ ಕ್ರಿಯೇಟ್ ಆಗಿದೆ. ಅಪ್ಪಟ ಕನ್ನಡ ಚಿತ್ರವೊಂದಕ್ಕೆ ಇಡೀ ಭಾರತೀಯ ಚಿತ್ರರಂಗ ಈ ಪಾಟಿ ವೇಯ್ಟ್​ ಮಾಡ್ತಿರೋದು ಇದೇ ಮೊದಲು ಅನ್ನಿಸುತ್ತೆ. ಇಷ್ಟೆಲ್ಲಾ ಕುತೂಹಲ ಕೆರಳಿಸಿರೋ ಕೆಜಿಎಫ್​-2 ಶೂಟಿಂಗ್​ ಶುರುವಾಗೋದು ತಡವಾಗ್ತಿದೆ.

ಕಳೆದ ಡಿಸೆಂಬರ್​ನಲ್ಲಿ ಬಂದ ಕೆಜಿಎಫ್​ ಚಿತ್ರ ಬಾಕ್ಸಾಫೀಸ್​ ಶೇಕ್​ ಮಾಡಿತ್ತು. ಅಂದಿನಿಂದಲೇ ಕೆಜಿಎಫ್ ಸೀಕ್ವೆಲ್​ ಬಗ್ಗೆ ಕುತೂಹಲ ಗರಿಗೆದರೋಕೆ ಶುರುವಾಯ್ತು. ಕಳೆದ ತಿಂಗಳು ಸಿಂಪಲ್ಲಾಗಿ ಮುಹೂರ್ತ ನೆರವೇರಿಸಿ, ಅಫೀಷಿಯಲ್ಲಾಗಿ ಚಿತ್ರಕ್ಕೆ ಚಾಲನೆ ಕೊಟ್ಟಿತ್ತು ಚಿತ್ರತಂಡ. ಯಶ್ ಮಂಡ್ಯ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದರಿಂದ, ಚುನಾವಣೆ ನಂತರ ಶೂಟಿಂಗ್​ ಶುರು ಅನ್ನೋ ಸುದ್ದಿ ಬಂದಿತ್ತು. ಅಕ್ಷಯತೃತೀಯ ಸಂಭ್ರಮದಲ್ಲೇ ಮೇ ಫಸ್ಟ್ ವೀಕ್ ಶೂಟಿಂಗ್ ಪ್ರಾರಂಭವಾಗೋ ಸುದ್ದಿ ಇತ್ತು. ಆದರೆ ಈವರೆಗೆ ಅದರ ಬಗ್ಗೆ ಮಾಹಿತಿ ಇಲ್ಲ.

ಕೆಜಿಎಫ್ ಫಸ್ಟ್ ಪಾರ್ಟ್​​​​​ ಕೇವಲ ಟ್ರೈಲರ್, ಅಸಲಿ ಪಿಕ್ಚರ್​ ಪಾರ್ಟ್​​​ ಟೂನಲ್ಲಿದೆ, ಅಂತ ಚಿತ್ರತಂಡ ಹೇಳಿದೆ. ಈಗಾಗಲೇ ಪ್ರೀಕ್ವೆಲ್​​ನಲ್ಲಿರೋ 2 ದೃಶ್ಯಗಳು ವಾಹ್​ ಅನ್ನುವಂತಿದ್ದು, ಇಡೀ ಸಿನಿಮಾ ಹೇಗಿರುತ್ತೋ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ. ದೊಡ್ಡ ಸಿನಿಮಾ ಆಗಿರೋದ್ರಿಂದ ಶೂಟಿಂಗ್​, ಪೋಸ್ಟ್​​ ಪ್ರೋಡಕ್ಷನ್​​ಗೆ ಬಹಳ ಸಮಯ ಕೇಳುತ್ತೆ. ಅದೇ ಕಾರಣಕ್ಕೆ ಆದಷ್ಟು ಬೇಗ ಶೂಟಿಂಗ್ ಶುರುವಾದರೆ, ಸಿನಿಮಾ ಅಷ್ಟೆ ಬೇಗ ಬರುತ್ತೆ ಅನ್ನೋ ಲೆಕ್ಕಾಚಾರ. ಎಲ್ಲಾ ಅಂದುಕೊಂಡಂತೆ ಆಗಿದ್ದಾರೆ, ಇಷ್ಟೊತ್ತಿಗೆಲ್ಲಾ, ಕೆಜಿಎಫ್ ಧೂಳಿನಲ್ಲಿ ರಾಕಿ ಭಾಯ್ ಅಬ್ಬರಿಸಬೇಕಿತ್ತು.

ಕೆಜಿಎಫ್​​​ನಲ್ಲಿ ಸೆಟ್​ ನಿರ್ಮಾಣ ತಡವಾಗ್ತಿದ್ದು, ಶೂಟಿಂಗ್​ ಶುರು ಮಾಡೋದಕ್ಕೆ ಹಿನ್ನಡೆಯಾಗಿದೆ. ಸೆಟ್​ ನಿರ್ಮಾಣ ತಡವಾಗ್ತಿರೋದ್ರಿಂದ ರಾಮನಗರದ ಸುತ್ತಾಮುತ್ತಾ ಒಂದಷ್ಟು ಶೂಟಿಂಗ್ ಮುಗಿಸಿ, ಆನಂತರ ಕೆಜಿಎಫ್​ ಚಿನ್ನದ ಗಣಿಗೆ ಕಾಲಿಡೋಕೆ ಚಿತ್ರತಂಡ ನಿರ್ಧರಿಸಿದೆ. ಆದರೆ, ಯಾವಾಗಿನಿಂದ ಕೆಜಿಎಫ್​ ಚಾಪ್ಟರ್​-2 ಶೂಟಿಂಗ್ ಶುರುವಾಗುತ್ತೆ ಅನ್ನೋದರ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ, ಮೊದಲ ದಿನದಿಂದಲೇ ರಾಕಿಂಗ್ ಸ್ಟಾರ್ ಯಶ್​, ಶೂಟಿಂಗ್​ನಲ್ಲಿ ಭಾಗವಹಿಸ್ತಾರಾ ಅನ್ನೋದರ ಬಗ್ಗೆ ಕೂಡ ಯಾವುದೇ ಸುಳಿವು ಸಿಕ್ತಿಲ್ಲ.

ಕೆಜಿಎಫ್​ ಸಕ್ಸಸ್ ಬೆನ್ನಲ್ಲೇ ಮುಂದಿನ ವರ್ಷಾಂತ್ಯಕ್ಕೆ ಕೆಜಿಎಫ್​ ಚಾಪ್ಟರ್ ಟೂ ತೆರೆಗೆ ಬರುತ್ತೆ ಅನ್ನೋ ಸುದ್ದಿ ಕೇಳಿಬಂದಿತ್ತು. ಈಗಾಗಲೇ ಸೀಕ್ವೆಲ್​​ನ ಒಂದಷ್ಟು ದೃಶ್ಯಗಳನ್ನ ಸೆರೆಹಿಡಿದಿದೆ ಚಿತ್ರತಂಡ. ಇನ್ನುಳಿದ ಭಾಗದ ಶೂಟಿಂಗ್​, ಪೋಸ್ಟ್ ಪ್ರೋಡಕ್ಷನ್, ಪ್ರಮೋಷನ್​​ ಎಲ್ಲಾ ಮುಗಿದು ರಾಕಿ ಭಾಯ್ ತೆರೆಮೇಲೆ ಬರಬೇಕಿದೆ. ರಾಕಿ ಭಾಯ್ ಮತ್ತು ಅಧೀರನ ಕಾಳಗ ಹೇಗಿರುತ್ತೆ ಅನ್ನೋದನ್ನು ನೋಡೋಕೆ ಇನ್ನೂ ಒಂದರಿಂದ ಒಂದೂವರೆ ವರ್ಷ ಕಾಯಲೇಬೇಕು.

Comments are closed.