ಕರ್ನಾಟಕ

ಬಳ್ಳಾರಿ: ಬಿಸಿಲಿಗೆ ಝಳದಿಂದ ಡಿಹೈಡ್ರೇಷನ್​ಗೆ ನವಜಾತ ಶಿಶುಗಳು ಸುಸ್ತು!

Pinterest LinkedIn Tumblr


ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಬಿಸಿಲಿನ ಪ್ರತಾಪ… ನವಜಾತ ಶಿಶುಗಳಿಗೆ ಬಿರುಬಿಸಿಲಿನ ಎಫೆಕ್ಟ್… ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿರುವ ನವಜಾತ ಶಿಶುಗಳು… ಹೌದು. ಗಣಿನಾಡು ಬಳ್ಳಾರಿ ಜಿಲ್ಲೆ ಹೇಳಿ ಕೇಳಿ ಬಿಸಿಲನಾಡು. ಇಲ್ಲಿ ಕನಿಷ್ಠ ಉಷ್ಣಾಂಶವೇ 42 ಡಿಗ್ರಿ. ಹೀಗಾಗಿ ಈ ವರ್ಷವಂತೂ ಉಷ್ಣಾಂಶ ದಾಖಲೆಯ ಪ್ರಮಾಣದಲ್ಲಿದೆ. ಈಗಾಗ್ಲೇ 43 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗುತ್ತದೆ. ಈ ಬಿರುಬಿಸಿಲಿಗೆ ಭೂಮಿ ಕೂಡ ಕಾದ ಕೆಂಡಂತಿದೆ. ಇನ್ನು ಹೊರಬರುತ್ತಿವ ಗಾಳಿ ಕೂಡ ಬಿಸಿಗಾಳಿ. ಹೀಗಾಗಿ ಈ ಬಿಸಿಲಿನ ಎಫೆಕ್ಟ್ ನವಜಾತ ಶಿಶುಗಳ ಮೇಲೆ ಹಾಗೂ ಚಿಕ್ಕ ಚಿಕ್ಕ ಮಕ್ಕಳ ಮೇಲೆ ಆಗುತ್ತಿದೆ. ಪೋಷಕರು ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಂಡ್ರೂ ಬಿಸಿಲಿನ ನವಜಾತ ಶಿಶುಗಳನ್ನ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಾಕಷ್ಟು ನವಜಾತ ಶಿಶುಗಳು ನಿರ್ಜಲೀಕರಣ(Dehydration) ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯೊಂದರಲ್ಲಿಯೇ ಪ್ರತಿ ನಿತ್ಯ ನಾಲ್ಕು ನವಜಾತ ಶಿಶುಗಳು ಬಿಸಿಲಿನ ಸಮಸ್ಯೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕಳೆದೊಂದು ತಿಂಗಳಿನಲ್ಲಿ 50 ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡಲಾಗಿದೆ. 2017-18ರ ಸಾಲಿನಲ್ಲಿ ವಿಮ್ಸ್​ನಲ್ಲಿ ನೂರಕ್ಕೂ ಹೆಚ್ಚು ನವಜಾತ ಶಿಶುಗಳು ನಿರ್ಜಲೀಕರಣದಿಂದ ಬಳಲುತ್ತಿದ್ರು. ಈಗ ಮತ್ತೆ ಬಿಸಿಲಿನ ಪ್ರಮಾಣ ಜಾಸ್ತಿಯಾಗಿದ್ದರಿಂದ ಇನ್ನಷ್ಟು ನವಜಾತ ಶಿಶುಗಳು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ತಾಯಂದಿರು ಅತಿಹೆಚ್ಚು ನೀರು ಕುಡಿಯಬೇಕು. ಜೊತೆಗೆ ಮಕ್ಕಳಿಗೆ ತಾಯಿಯ ಹಾಲನ್ನೇ ಕುಡಿಸಬೇಕು ಎನ್ನುತ್ತಾರೆ ವಿಮ್ಸ್ ನಿರ್ದೇಶಕರು.

ಅತಿಯಾದ ಬಿರುಬಿಸಿಲಿಗೆ ನಿರ್ಜಲೀಕರಣದಿಂದಾಗಿ ಮಕ್ಕಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಬಳ್ಳಾರಿ ನಗರದಲ್ಲಿ ವಿಮ್ಸ್ ಆಸ್ಪತ್ರೆಯಲ್ಲಿ ಕಳೆದೊಂದು ತಿಂಗಳಿನಲ್ಲಿ 50 ನವಜಾತ ಶಿಶುಗಳು ನಿರ್ಜಲೀಕರಣ ಸಮಸ್ಯೆಯಿಂದ ದಾಖಲಾಗಿವೆ. ಇದೇ ರೀತಿ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಹ 50 ನವಜಾತ ಶಿಶುಗಳು ನಿರ್ಜಲೀಕರಣದಿಂದಾಗಿ ಬಳಲುತ್ತಿರುವ ಮಕ್ಕಳು ಚಿಕಿತ್ಸೆಗಾಗಿ ದಾಖಲಾಗಿವೆ. ಈ ಬಿರುಬಿಸಿಲಿಗೆ ನವಜಾತ ಶಿಶುಗಳನ್ನ ಹೊರಗಡೆ ಕರೆತರುವಂತಿಲ್ಲ. ಯಾಕೇಂದ್ರೆ ಬಿಸಿಲಿನ ಪ್ರತಾಪ ಅಷ್ಟರ ಮಟ್ಟಿಗಿದೆ. ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ನವಜಾತ ಶಿಶುಗಳ ಸಂಖ್ಯೆ ಕೂಡ ಜಾಸ್ತಿಯಾಗುತ್ತಲೇ ಇದೆ. ಬಿಸಿಲಿನ ನವಜಾತ ಶಿಶುಗಳಿಗೆ ರಕ್ಷಣೆ ನೀಡಲು ಪೋಷಕರು ಹರಸಾಹಸ ಪಡುತ್ತಿದ್ದಾರೆ. ಆದ್ರೂ ಬಿಸಿಲಿನಿಂದ ಮಕ್ಕಳಿಗೆ ಬಾರಿ ಸಮಸ್ಯೆಯಾಗುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ ಅಂತಾರೆ ಪೋಷಕರು.

ವಿಮ್ಸ್​ನ ನವಜಾತ ಶಿಶುಗಳ ಸ್ಪೇಷಲ್ ಕೇರ್ ಘಟಕದಲ್ಲಿ ನವಜಾತ ಶಿಶುಗಳಿಗೆ ಸಮರ್ಪಕವಾದ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ ದಾಖಲಾಗುತ್ತಿರುವ ಎಲ್ಲಾ ನವಜಾತ ಶಿಶುಗಳು ಗುಣಮುಖರಾಗಿದ್ದಾರೆ. ಆದರೆ ದಿನೇ ದಿನೇ ಕೆಂಡದಂತೆ ಕಾಯುತ್ತಿರುವ ಬಳ್ಳಾರಿಯ ಬಿಸಿಲು ಮಕ್ಕಳು ಸೇರಿದಂತೆ ವೃದ್ದರ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮಗಳು ಬೀರುತ್ತಿವೆ. ಅದರಲ್ಲೂ ನವಜಾತ ಶಿಶುಗಳಂತೂ ಬಿರುಬಿಸಿಲಿಗೆ ಬಸವಳಿದಿವೆ. ಹೀಗಾಗಿ ಬೇಸಿಗೆ ಕಾಲ ಮುಗಿಯುವವರೆಗೂ ನವಜಾತ ಶಿಶುಗಳನ್ನ ಇನ್ನಷ್ಟು ಕಾಳಜಿ ವಹಿಸಲೇಬೇಕು.

Comments are closed.