ಮನೋರಂಜನೆ

ಗಾಳಿ ಸುದ್ದಿ ಕುರಿತು ಸ್ಪಷ್ಟನೆ ನೀಡಿದ ಕಿಚ್ಚ ಸುದೀಪ್

Pinterest LinkedIn Tumblr


ಬೆಂಗಳೂರು: ಗಾಳಿ ಸುದ್ದಿ ಬಗ್ಗೆ ಕಿಚ್ಚ ಸುದೀಪ್ ಕ್ಲ್ಯಾರಿಟಿ ಕೊಟ್ಟಿದ್ದು, ಪ್ರೇಮ್ ನಿರ್ದೇಶನದಲ್ಲಿ ಸಲ್ಮಾನ್ ಖಾನ್ ಸಿನಿಮಾ ಮಾಡೋದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ದಬಾಂಗ್-3 ಸೆಟ್‌ನಲ್ಲಿ ಜೋಗಿ ಪ್ರೇಮ್, ಜಾಕ್ ಮಂಜು ಸುದೀಪ್ ಜೊತೆ ಕಾಣಿಸಿಕೊಂಡಿದ್ದು, ಸಲ್ಮಾನ್ ಖಾನ್ ಜೊತೆ ನಿಂತು ಪೋಸ್ ನೀಡಿದ್ದ ಪೋಟೋಸ್ ವೈರಲ್ ಆಗಿತ್ತು.

ಈ ಫೋಟೋಗಳನ್ನ ಸುದೀಪ್ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಈ ಕಾರಣಕ್ಕೆ ಸುದೀಪ್, ಮಂಜು ನಿರ್ಮಾಣದ ಚಿತ್ರದಲ್ಲಿ ಸಲ್ಲು ನಟಿಸ್ತಾರೆ. ಆ ಚಿತ್ರವನ್ನ ಜೋಗಿ ಪ್ರೇಮ್ ನಿರ್ದೇಶನ ಮಾಡ್ತಾರೆ ಅನ್ನೋ ಸುದ್ದಿ ಕೇಳಿ ಬಂದಿತ್ತು. ಆದ್ದರಿಂದ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಇದು ಗಾಳಿ ಸುದ್ದಿ ನಂಬಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ.

Comments are closed.