ಬೆಂಗಳೂರು: ದಿನಾಂಕ ಮೇ 23ರಂದು ಚುನಾವಣಾ ಫಲಿತಾಂಶ ಬರಲಿದ್ದು, ತದನಂತರ ಜೆಡಿಎಸ್ ಖಾತೆ ಬದಲಾವಣೆ ಮಾಡುವ ಸಾಧ್ಯತೆ ಇದೆ.
10 ಖಾತೆಗಳಲ್ಲಿ ಕೆಲವು ಸಚಿವರ ಖಾತೆ ಬದಲಾವಣೆ ಸಾಧ್ಯತೆ ಇದೆ ಎನ್ನಲಾಗಿದ್ದು, ಖಾಲಿ ಉಳಿದಿರುವ ಎರಡು ಸಚಿವ ಸ್ಥಾನಗಳೂ ಭರ್ತಿಯಾಗಲಿದೆ.
ಬಸವರಾಜ ಹೊರಟ್ಟಿ ಮತ್ತು ಬಿ.ಎಂ.ಫಾರೂಖ್‌ಗೆ ಸಚಿವ ಸ್ಥಾನ ಸಿಗಬಹುದು ಎನ್ನಲಾಗಿದೆ. ಇನ್ನು ಮಂಡ್ಯ ಫಲಿತಾಂಶದ ಮೇಲೆ ಸಚಿವ ತಮ್ಮಣ್ಣ, ಸಿ.ಎಸ್.ಪುಟ್ಟರಾಜು ಭವಿಷ್ಯ ನಿಂತಿದೆ. ಇಬ್ಬರ ಕ್ಷೇತ್ರಗಳಲ್ಲೂ ಜೆಡಿಎಸ್ ಪರ ಮತಗಳು ಬಿದ್ದಿಲ್ಲವೆಂಬ ಮಾಹಿತಿ ಇದೆ . ಹೀಗಾಗಿ ಫಲಿತಾಂಶ ವ್ಯತಿರಿಕ್ತವಾಗಿ ಬಂದರೆ ಸಚಿವ ಸ್ಥಾನಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ.
ಇನ್ನು ಮಳವಳ್ಳಿ ಶಾಸಕ ಡಾ. ಅನ್ನದಾನಿ ಮತ್ತು ಸಕಲೇಶಪುರ ಹೆಚ್.ಕೆ.ಕುಮಾರಸ್ವಾಮಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದ್ದು, ಖಾಲಿ ಉಳಿದ ನಿಗಮ ಮಂಡಳಿಯನ್ನೂ ಭರ್ತಿ ಮಾಡಲು ಚಿಂತನೆ ನಡೆಸಲಾಗಿದೆ.