ಕರ್ನಾಟಕ

ಬಿಜೆಪಿ ಶಾಸಕರ ಸೆಳೆಯಲು ಮೈತ್ರಿ ಪಕ್ಷಗಳಿಂದ ಮಾಸ್ಟರ್ ಪ್ಲಾನ್!

Pinterest LinkedIn Tumblr


ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾಗಿ ಸುಮಾರು ಒಂದು ವರ್ಷ ಆಗುತ್ತಿದೆ, ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹಲವು ಸರ್ಕಸ್ ನಡೆಸಿದರೂ ಪ್ರಯೋಜನವಾಗಲಿಲ್ಲ, ಈ ನಡುವೆ ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿ ಮತ್ತೆ ಮೇ 23 ಡೆಡ್ ಲೈನ್ ನೀಡಿದೆ.ಆದರೆ ಯಾವುದೇ ಅಡೆ ತಡೆಯಿಲ್ಲದೇ ಸರ್ಕಾರ ಮುಂದುವರಿಯುತ್ತದೆ ಎಂದು ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷಗಳು ಹೇಳುತ್ತಿವೆ.

ಕಾಂಗ್ರೆಸ್ ನ ಎಲ್ಲಾ ಅಸಮಾಧಾನಿತ ಶಾಸಕರ ಜೊತೆ ನಾನು ಸಂಪರ್ಕ ಹೊಂದಿದ್ದೇನೆ, ಯಾರೂ ಕೂಡ ಪಕ್ಷ ಬಿಡುವುದಿಲ್ಲ, ಸಮ್ಮಿಶ್ರ ಸರ್ಕಾರವನ್ನು ಅವರು ಯಾರು ಅಸ್ಥಿರಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನೀವು ಕೂಡ ಶಾಸಕರನ್ನು ಸೆಳೆಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಈ ಹಂತದಲ್ಲಿ ಅದನ್ನೆಲ್ಲಾ ಹೇಳಲು ಆಗುವುದಿಲ್ಲ, ಆದರೆ ಕೆಲವು ವಿಶ್ವಸಾರ್ಹ ಮೂಲಗಳ ಪ್ರಕಾರ ಬಿಜೆಪಿ ಸಮ್ಮಿಶ್ರ ಸರ್ಕಾರದ 10 ವಿಕೆಟ್ ಗಳನ್ನು ಪಡೆದರೇ ಮೈತ್ರಿ ಪಕ್ಷಗಳು ಕೂಡ ಬಿಜೆಪಿಯ 10 ಮಂದಿಯನ್ನು ತನ್ನತ್ತ ಸೆಳೆಯಲು ಪ್ಲಾನ್ ರೂಪಿಸಿದೆ ಎಂದು ಹೇಳಲಾಗುತ್ತಿದೆ.

ಗೋಕಾಕ್ ಶಾಸಕ ರಮೇಶ್ ಅಸಮಾಧಾನಿತರನ್ನು ಬಿಜೆಪಿಗೆ ಕರೆತರುವುದಾಗಿ ಮಾಡಿದ ಪ್ರಾಮೀಸ್ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್ ನ 78 ಶಾಸಕರಿದ್ದಾರೆ, ಕಳೆದ ವರ್ಷ 80 ಶಾಸಕರಿದ್ದರು, ಸಿಎಸ್ ಶಿವಳ್ಳಿ ನಿಧನರಾದರು ಮತ್ತೊಬ್ಬ ಶಾಸಕ ಉಮೇಶ್ ಜಾಧವ್ ರಾಜೀನಾಮೆಯಿಂದಾಗಿ ಸದ್ಯ ಕಾಂಗ್ರೆಸ್ ನಲ್ಲಿ 78 ಶಾಸಕರಿದ್ದಾರೆ,ಜೆಡಿಎಸ್ 37 ಶಾಸಕರಿದ್ದರು. ಇದರ ಜೊತೆಗೆ ಇಬ್ಬರು ಪಕ್ಷೇತರ ಶಾಸಕರು ಣತ್ತು ಒಬ್ಬರು ಬಿಎಸ್ ಪಿ ಶಾಸಕರಿದ್ದರು,ಇದೆಲ್ಲಾ ಸೇರಿ ಒಟ್ಟು 118 ಶಾಸಕರಿದ್ದರು, ಬಿಜೆಪಿಯ 104 ಶಾಸಕರಿದ್ದರು.

ಕೃಷ್ಣ ಭೈರೇಗೌಡ ಮತ್ತು ಈಶ್ವರ್ ಖಂಡ್ರೆ ಲೋಕಸಭೆ ಚುನಾವಣೆಯಲ್ಲಿ ಗೆದ್ದರೇ ಬ್ಯಾಟರಾಯನಪುರ ಮತ್ತು ಭಾಲ್ಕಿ ವಿಧಾನಸಭೆ ಕ್ಷೇತ್ರಗಳು ತೆರವಾಗುತ್ತವೆ, ಇದರಿಂದ ಸಮ್ಮಿಶ್ರ ಸರ್ಕಾರಕ್ಕೆ ಸ್ವಲ್ಪ ಮಟ್ಟಿನ ಅಲುಗಾಟ ಆರಂಭವಾಗಿದೆ.

ಅವರು ಅವರ ಆಟ ಆಡಲಿ, ನಾವು ನಮ್ಮದೇ ಆದ ತಂತ್ರಗಳನ್ನು ರೂಪಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Comments are closed.