ಕರ್ನಾಟಕ

ಪತ್ನಿಯಿದ್ದೂ ಮತ್ತೊಬ್ಬಳೊಂದಿಗೆ ಪ್ರೀತಿ-ಪ್ರೇಮ-ಪ್ರಣಯವಾಡಿದವನಿಗೆ ಗೂಸಾ!

Pinterest LinkedIn Tumblr


ಬೆಂಗಳೂರು: ವಿಚ್ಛೇದನ ನೀಡದೆಯೇ ಪ್ರೇಯಸಿ ಜತೆ ಸಪ್ತಪದಿ ತುಳಿದಿದ್ದ ಕ್ಲಾಸ್​​​ ಒನ್​​​​​​​​​​ ಆಫೀಸರ್​​​​​ ಶಿವಕುಮಾರ್‌ಗೆ ಪತ್ನಿಯೇ ಥಳಿಸಿರುವ ಘಟನೆ ನಡೆದಿದೆ.

ವಿನೋದಾ ಎಂಬಾಕೆ ಜತೆ ಶಿವಕುಮಾರ್ ವಿವಾಹವಾಗಿದ್ದ. ಬಳಿಕ ರಂಜಿತಾ ಎಲಿಗಾರ್ ಎಂಬಾಕೆ ಜತೆಗೆ ಸ್ನೇಹ ಬೆಳೆಸಿಕೊಂಡಿದ್ದ ಈತ ಮೊದಲ ಪತ್ನಿ ವಿನೋದಾಗೆ ವಿಚ್ಛೇದನ ನೀಡದೆಯೇ 2ನೇ ವಿವಾಹ ಮಾಡಿಕೊಂಡಿದ್ದ. 2ನೇ ಪತ್ನಿಗೂ ಮಗುವನ್ನು ಕರುಣಿಸಿದ್ದ.

ಈ ಕುರಿತು ಪ್ರಶ್ನಿಸಿದ್ದಕ್ಕೆ ಮೊದಲ ಪತ್ನಿ, ಮಕ್ಕಳಿಗೆ ನಿತ್ಯ ಚಿತ್ರಹಿಂಸೆ ನೀಡಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ಎರಡನೇ ಪತ್ನಿಯ ಮನೆಗೆ ನುಗ್ಗಿ ಪತಿಗೆ ಗೂಸಾ ನೀಡಿದ್ದಾರೆ. ಮೊದಲ ಪತ್ನಿ ಬರುತ್ತಿದ್ದಂತೆ ಅಲರ್ಟ್ ಆದ ಶಿವಕುಮಾರ್ 2ನೇ ಪತ್ನಿಯ ತಾಳಿ ಕಿತ್ತು, ಕಿಸೆಗೆ ಹಾಕಿಕೊಂಡಿದ್ದಾನೆ.

ಜೀವನ್‌ಭೀಮಾ ನಗರ ಠಾಣೆಗೆ ಮೊದಲ ಪತ್ನಿ ದೂರು ದಾಖಲಿಸಿದ್ದಾರೆ.

Comments are closed.