
ಶ್ರೀಲಂಕಾ: ಕೊಲಂಬೊದಲ್ಲಿ ಸರಣಿ ಬಾಂಬ್ ಸ್ಟೋಟಿಸಿದ ಭಯೋತ್ಪಾದಕರು ತರಬೇತಿಗಾಗಿ ಕೇರಳ ಮತ್ತು ಕಾಶ್ಮೀರಕ್ಕೆ ಬಂದಿದ್ದರು ಎಂದು ಶ್ರೀಲಂಕಾ ಸೇನಾ ಮುಖ್ಯಸ್ಥ ಮಹೇಶ್ ಸೇನಾ ನಾಯಕ್ ಬಿಬಿಸಿ ವಲ್ಡ್ ನ್ಯೂಸ್ ನಡೆಸಿದ ಸಂದರ್ಶದಲ್ಲಿ ಹೇಳಿಕೊಂಡಿದ್ದಾರೆ.
ದಾಳಿಕೋರರು ಭಾರತದ ಕೇರಳ, ಬೆಂಗಳೂರು ಹಾಗು ಕಾಶ್ಮೀರಕ್ಕೆ ತೆರಳಿದ್ದರು. ಇದು ನಮಗೆ ಲಭ್ಯವಿರುವ ಮಾಹಿತಿ ಎಂದಿರುವ ಸೇನಾ ಮುಖ್ಯಸ್ಥರು, ತರಬೇತಿಗಾಗಿ ಇತರ ಸಂಘಟನೆಗಳನ್ನು ಸಂಪರ್ಕ ಸಾಧಿಸಲು ಯತ್ನಿಸಿರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈಸ್ಟರ್ ಚರ್ಚೆನಲ್ಲಿ ಏಪ್ರಿಲ್ 21 (ಭಾನುವಾರ) ದಿನ ಸಂಭವಿಸಿದ್ದ ಆತ್ಮಾಹುತಿ ದಾಳಿಯಲ್ಲಿ ಒಟ್ಟು 250 ಮಂದಿ ಬಲಿಯಾಗಿದ್ದರು. ಇದರಲ್ಲಿ ಕರ್ನಾಟಕದ 7 ಮಂದಿ ಕೂಡ ಪ್ರಾಣ ತೆತ್ತಿದ್ದರು. ಈ ದಾಳಿ ಬಗ್ಗೆ ಭಾರತ ರಾಷ್ಟ್ರೀಯ ತನಿಖಾ ಸಂಸ್ಥೆ ಮೂರು ಬಾರಿ ಎಚ್ಚರಿಕೆಯ ಸಂದೇಶ ರವಾನೆ ಮಾಡಿತ್ತು.
ಅಲ್ಲದೇ ಮೌಲ್ವಿ ಜಹ್ರಾನ್ ಬಿನ್ ಹಶೀಮ್ ವಿಡಿಯೋ ಮಾಹಿತಿ ಅನ್ವಯ ಸೂಕ್ಷ್ಮ ರೀತಿಯಲ್ಲಿ ಮಾಹಿತಿ ರವಾನೆ ಮಾಡಿತ್ತು. ಆದರೆ ಎಚ್ಚರಿಕೆಯ ಬಳಿಕವೂ ಶ್ರೀಲಂಕಾ ಪೊಲೀಸರು ದಾಳಿಯನ್ನ ತಡೆಯಲು ವಿಫಲರಾಗಿದ್ದರು. ಭದ್ರತೆ ವಿಫಲವಾದ ಕಾರಣ ಶ್ರೀಲಂಕಾ ಆಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಅಸಮಧಾನ ವ್ಯಕ್ತಪಡಿಸಿದ್ದರು.
Comments are closed.