ಕರ್ನಾಟಕ

ಚುನಾವಣೆ ನಂತರ​ ಕುಮಾರಸ್ವಾಮಿ ಕುಟುಂಬ ಸಮೇತ ಇಂದು ಶೃಂಗೇರಿಗೆ ಭೇಟಿ!

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ಮತದಾನ ಮುಗಿದ ಬಳಿಕ ಸಿಎಂ ಹೆಚ್​ಡಿ ಕುಮಾರಸ್ವಾಮಿ ರಿಲ್ಯಾಕ್ಸ್ ಮೂಡ್​ಗೆ ಜಾರಿದ್ದಾರೆ. ಮಾಜಿ ಪ್ರಧಾನಿ ಎಚ್​​.ಡಿ ದೇವೇಗೌಡರು ಸೇರಿದಂತೆ ಸಿಎಂ ಎಚ್​​.ಡಿ ಕುಮಾರಸ್ವಾಮಿ ಜತೆಗೆ ಇಡೀ ಕುಟಂಬವೇ ಶೃಂಗೇರಿ ಸಮೀಪದ ಹಳ್ಳಿಯೊಂದಕ್ಕೆ ತೆರಳಿತ್ತು. ಸದ್ಯ ಅಲ್ಲಿನ ಉಮಾ ಮಹೇಶ್ವರಿ ದೇವಾಲಯದಲ್ಲಿ ಹೋಮ ಮುಗಿಸಿದ ಸಿಎಂ ಕುಟುಂಬ ಬೆಂಗಳೂರಿಗೆ ವಾಪಸ್ಸಾಗಿದೆ.

ಈ ಹಿಂದೆ ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಮನುಷ್ಯರಿಗಿಂತ ದೇವರು ಕೊಡುವ ಆಶೀರ್ವಾದ ದೊಡ್ಡದು. ನಾನು ಎಷ್ಟು ದಿನ ಸಿಎಂ ಆಗಿರಬೇಕು ಎನ್ನುವುದನ್ನು ಶೃಂಗೇರಿ ಶಾರದಾಂಬೆಯೇ ನಿರ್ಧರಿಸುತ್ತಾಳೆ. ಜತೆಗೆ ನನ ಮಗ ಗೆಲ್ಲುವುದಕ್ಕೆ ಆಕೆಯೇ ಆಶೀರ್ವದಿಸುತ್ತಾಳೆ ಎಂದು ನುಡಿದಿದ್ದರು.

ಶಾರದಾಂಬೆಯ ಸನ್ನಿದಿಯಲ್ಲಿ ಪ್ರತ್ಯಂಗೀರ ಹೋಮ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಹಿಂದಿನಿಂದಲೂ ಶೃಂಗೇರಿ ಕ್ಷೇತ್ರದಲ್ಲಿ ಆಚರಣೆಗಳನ್ನು ಮಾಡುತ್ತಲೇ ಬಂದಿದ್ದೇವೆ. ಆಚರಣೆಗಳು ಮುಂದುವರೆಸಿದ್ದೇವೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪೂಜೆ ಸಲ್ಲಿಸಿರುವುದಾಗಿ ತಿಳಿಸಿದರು.

ಸಿಎಂ ಎಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ತುಸು ಹೆಚ್ಚೇ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಆದರೆ ಈ ಭೇಟಿಯ ಹಿಂದೆ ಕಾರಣ ಸಹೋದರ ಎಚ್.ಡಿ. ರೇವಣ್ಣ! ಹೌದು, ಪ್ರತಿಯೊಂದು ವಿಚಾರದಲ್ಲಿ ವಾಸ್ತು-ಜ್ಯೋತಿಷದ ಪ್ರಕಾರ ನಡೆಯುವ ರೇವಣ್ಣರ ನಿರ್ದೇಶನದಂತೆ ಕುಮಾರಸ್ವಾಮಿ ಶೃಂಗೇರಿ ಶಾರದಾಂಬೆ ದರ್ಶನ ಪಡೆಯಲು ಮುಂದಾಗುವುದು ವಾಸ್ತವ ಸಂಗತಿ.

Comments are closed.