ಕರ್ನಾಟಕ

ಯಡಿಯೂರಪ್ಪ ಸೂಚಿಸಿದವರೇ ರಾಜ್ಯ ಬಿಜೆಪಿಯ ರಾಜ್ಯಾಧ್ಯಕ್ಷರು..!?

Pinterest LinkedIn Tumblr


ಬೆಂಗಳೂರು: ಹೊಸ ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುವ ಕುರಿತು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದ್ದು, ಮಾಜಿ ಸಿಎಂ ಯಡಿಯೂರಪ್ಪ ಸೂಚಿಸುವ ಹೆಸರನ್ನೇ ಫೈನಲ್ ಮಾಡಲು ನಿರ್ಧರಿಸಿದೆ.

ಮುಂದೆ ಯಡಿಯೂರಪ್ಪ ಸಿಎಂ ಆದ್ರೆ ರಾಜ್ಯಾಧ್ಯಕ್ಷ ಸ್ಥಾನ ಬದಲಿಸಬೇಕಾಗಿದ್ದು, ಈಗಿನಿಂದಲೇ ಬಿಜೆಪಿ ಆ ಬಗ್ಗೆ ತಯಾರಿ ನಡೆಸಿದೆ. ಬಿಎಸ್‌ವೈ ಯಾರ ಹೆಸರನ್ನು ಸೂಚಿಸುತ್ತಾರೋ ಅವರನ್ನೇ ಬಿಜೆಪಿ ಹೈಕಮಾಂಡ್ ರಾಜ್ಯಾಧಕ್ಷ ಮಾಡಲು ತೀರ್ಮಾನಿಸಿದೆ.

ಅರವಿಂದ ಲಿಂಬಾವಳಿ ಪರ ಬಿ.ಎಸ್.ವೈ ಒಲವು..?
ಇನ್ನು ಯಾರ ಮೇಲೆ ಬಿಎಸ್‌ವೈ ಒಲವಿದೆ ಎಂಬ ಪ್ರಶ್ನೆ ಈಗ ಉದ್ಭವಿಸಿದ್ದು, ಅರವಿಂದ ಲಿಂಬಾವಳಿ ಹೆಸರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೇಳಬಹುದು ಎಂಬ ಅಂದಾಜಿದೆ. ಲಿಂಬಾವಳಿ ಬಿ.ಎಸ್.ವೈ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಲೀಡರ್ ಆಗಿದ್ದು, ಸಂಘಟನೆಯಲ್ಲಿ ಚುರುಕತನ ಹೊಂದಿದ್ದಾರೆ. ದಲಿತ ಸಮುದಾಯಕ್ಕೆ ಸೇರಿರುವ ನಾಯಕರಾಗಿದ್ದು, ಲಿಂಬಾವಳಿ ಅಧ್ಯಕ್ಷರಾದರೆ ದಲಿತ ಮತಗಳು ಬಿಜೆಪಿಯತ್ತ ವಾಲಬಹುದು ಎನ್ನಲಾಗಿದೆ. ಅವಕಾಶ ವಂಚಿತ ದಲಿತ ಸಮುದಾಯಕ್ಕೆ ರಾಜ್ಯಾದ್ಯಕ್ಷ ಸ್ಥಾನ ನೀಡಿದ ಕೀರ್ತಿ ಬಿಜೆಪಿಗೆ ಬರುತ್ತದೆ ಎಂಬ ಲೆಕ್ಕಾಚಾರ ಕೂಡ ಇರಬಹುದು ಎನ್ನಲಾಗಿದೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗರನ್ನು ಪರಿಗಣಿಸುತ್ತಾರಾ?
ಒಕ್ಕಲಿಗ ಮುಖಂಡರಾದ ಸಿ.ಟಿ ರವಿ, ಆರ್ ಅಶೋಕ್ ಹೆಸರುಗಳು ಮುಂಚೂಣಿಯಲ್ಲಿದೆ. ಆದರೆ ಒಕ್ಕಲಿಗರನ್ನು ರಾಜ್ಯಾದ್ಯಕ್ಷ ಸ್ಥಾನಕ್ಕೆ ಪರಿಗಣಿಸಿದರೆ ಹೆಚ್ಚು ಪ್ರಯೋಜನ ಸಿಗದಿರಬಹುದು ಸದ್ಯ ಒಕ್ಕಲಿಗರ ನಾಯಕ ಮಾಜಿ ಪ್ರಧಾನಿ ದೇವೆಗೌಡರು. ದೇವೆಗೌಡರ ನಂತರ ಒಕ್ಕಲಿಗರ ನಾಯಕನಾಗಲು ಡಿ.ಕೆ.ಶಿ ಸಿದ್ಧತೆ ನಡೆಸಿದ್ದು, ಇವರಿಗೆ ಹೋಲಿಸಿದರೆ ಸಿ.ಟಿ ರವಿ ಅಥವಾ ಅಶೋಕ್ ಒಕ್ಕಲಿಗ ನಾಯಕರಾಗಲು ವಿಫಲರಾಗಿದ್ದಾರೆ. ಹೀಗಾಗಿ ರಾಜ್ಯಾದ್ಯಕ್ಷ ಸ್ಥಾನ ಒಕ್ಕಲಿಗರಿಗೆ ನೀಡೋದ್ರಿಂದ ಪಕ್ಷಕ್ಕೆ ಅಷ್ಟು ಉಪಯೋಗ ಆಗಲಾರದು ಎನ್ನಲಾಗಿದೆ.

ಇನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಹೆಸರು ಕೇಳಿಬಂದಿತ್ತು, ಆದ್ರೆ ನಿನ್ನೆ ತಾನೇ ಕರಂದ್ಲಾಜೆ, ನಾನು ರಾಜ್ಯಾಧ್ಯಕ್ಷದ ರೇಸ್‌ನಲ್ಲಿ ಇಲ್ಲ ಎಂದು ಹೇಳಿದ್ದಾರೆ.

Comments are closed.