ಕರ್ನಾಟಕ

ರಮೇಶ್ ಜಾರಕಿಹೊಳಿ ಕಮ್‍ಬ್ಯಾಕ್!

Pinterest LinkedIn Tumblr


ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿಯಿಂದ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಇದು ಕಾಂಗ್ರೆಸ್-ಜೆಡಿಎಸ್ ನಾಯಕರ ಟೆನ್ಶನ್‍ಗೆ ಕಾರಣವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿಲಿಕಾನ್ ಸಿಟಿಗೆ ವಾಪಸ್ ಬಂದಿರುವ ಮಾಜಿ ಸಚಿವರು ಆಪ್ತರಾದ ಶಾಸಕ ಮಹೇಶ್ ಕುಮಟಳ್ಳಿ, ಶಾಸಕ ಆರ್.ಶಂಕರ್ ಜೊತೆ ರಹಸ್ಯ ಸ್ಥಳದಲ್ಲಿ ಸಭೆ ನಡೆಸಿದರು. ಈ ಮೂಲಕ ಒಟ್ಟಾಗಿ ರಾಜೀನಾಮೆ ನೀಡುವ ಕುರಿತ ಮಾತುಕತೆಗೆ ಮತ್ತೆ ಕಸರತ್ತು ಆರಂಭಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

ರಮೇಶ್ ಜಾರಕಿಹೊಳಿ ಅವರು ಏಪ್ರಿಲ್ 24ರಿಂದ ಮೇ 1ರವರೆಗೆ ಬೆಂಗಳೂರಿನಲ್ಲೇ ತಂಗಿದ್ದರು. ಆದರೆ ರಾಜೀನಾಮೆ ಕುರಿತ ಮಾತುಕತೆಗೆ ಆಪ್ತರನ್ನು ಸಂಪರ್ಕಿಸಲಾಗದೇ ಬೆಳಗಾವಿ ವಾಪಸ್ ಹೋಗಿದ್ದರು. ಈಗ ರಮೇಶ್ ಜಾರಕಿಹೊಳಿಯವರ ಕಮ್‍ಬ್ಯಾಕ್ ಮೈತ್ರಿ ಪಕ್ಷಗಳಲ್ಲಿ ಕಳವಳ ಉಂಟು ಮಾಡಿದೆ.

Comments are closed.