ರಾಷ್ಟ್ರೀಯ

ದೆಹಲಿಯ ನಡುರಸ್ತೆಯಲ್ಲೇ ಜೋಡಿಗಳ ರಾಸಲೀಲೆಯ ವಿಡಿಯೋ ವೈರಲ್!

Pinterest LinkedIn Tumblr


ನವದೆಹಲಿ : ಜೋಡಿಗಳ ರಾಸಲೀಲೆಗೆ ಮನೆಯಾದರೇನು? ಬಯಲಾದರೇನು? ಎಂಬ ಮಾತಿನಂತೆ ರಾತ್ರಿಯ ವೇಳೆ ನಡುರಸ್ತೆಯಲ್ಲಿ ಬೈಕ್​ನಲ್ಲಿ ಸಂಚರಿಸುತ್ತಲೇ ಜೋಡಿಗಳಿಬ್ಬರು ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಶುಕ್ರವಾರ ರಾತ್ರಿ ದೆಹಲಿಯ ಜನನಿಬಿಡ ರಚೌರಿ ಗಾರ್ಡನ್ ಏರಿಯಾದಲ್ಲಿ ಕಪ್ಪು ಬಣ್ಣದ ಪಲ್ಸರ್ ಬೈಕಿನಲ್ಲಿ ಯುವ ಜೋಡಿಗಳು ಹೆಲ್ಮೆಟ್​ ಸಹ ಧರಿಸದೆ ಜಿಗ್​ಜಾಗ್ ಶೈಲಿಯಲ್ಲಿ ಬೈಕ್ ಓಡಿಸಿದ್ದಾರೆ. ಈ ಸಂದರ್ಭದಲ್ಲಿ ಬೈಕಿನ ಮುಂಬದಿಯ ಪೆಟ್ರೋಲ್ ಟ್ಯಾಂಕ್​ ಮೇಲೆ ಕುಳಿತಿದ್ದ ಯುವತಿ ಹುಡುಗನ ತುಟಿಗೆ ಮುತ್ತಿಕ್ಕಿದ್ದಾಳೆ. ಕಾರ್​ನಲ್ಲಿ ಸಂಚರಿಸುತ್ತಿದ್ದ ಓರ್ವ ವ್ಯಕ್ತಿ 18 ಸೆಂಕೆಡ್​ಗಳ ಈ ದೃಶ್ಯವನ್ನು ಚಿತ್ರೀಕರಿಸಿದ್ದು ಪೊಲೀಸರಿಗೆ ದೂರು ನೀಡಿದ್ದಾನೆ.

ಈ ಕುರಿತು ದೆಹಲಿ ಪಶ್ಚಿಮ ವಿಭಾಗದ ಡಿಸಿಪಿ ಮೋನಿಕಾ ಭಾರದ್ವಾಜ್ ಪ್ರತಿಕ್ರಿಯೆ ನೀಡಿದ್ದು, “ಅಪರಿಚಿತ ವ್ಯಕ್ತಿಯೊಬ್ಬ ಈ ವಿಡಿಯೋ ಚಿತ್ರೀಕರಿಸಿ ಪೊಲೀಸರಲ್ಲಿ ದೂರು ನೀಡಿದ್ದಾರೆ. ದೂರದಾರನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ನವ ಜೋಡಿಗಳ ಈ ವರ್ತನೆ ಕಲಂ 279 ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ರಸ್ತೆಯಲ್ಲೇ ರಾಸಲೀಲೆಯಲ್ಲಿ ತೊಡಗಿದ್ದ ಜೋಡಿಯನ್ನು ಶೀಘ್ರದಲ್ಲಿ ಬಂಧಿಸಲಾಗುವುದು” ಎಂದು ತಿಳಿಸಿದ್ದಾರೆ.

18 ಸೆಕೆಂಡ್​ಗಳ ಈ ವಿಡಿಯೋವನ್ನು ಮತ್ತೊಬ್ಬ ಪೊಲೀಸ್ ಅಧಿಕಾರಿ ತನ್ನ ಖಾಸಗಿ ಟ್ವೀಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಈವರೆಗೆ ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಅಲ್ಲದೆ ರಾಸಲೀಲೆಯಲ್ಲಿ ತೊಡಗಿದ್ದ ಜೋಡಿಗಳನ್ನು ಕಟುಶಬ್ಧಗಳಿಂದ ಟೀಕಿಸಿದ್ದಾರೆ.

Comments are closed.