ಕರ್ನಾಟಕ

ಶ್ರೀರಾಮುಲುಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಡದಿದ್ದರೆ ಉ.ಕರ್ನಾಟಕದಲ್ಲಿ ಬಿಜೆಪಿ ಇರುವುದಿಲ್ಲ

Pinterest LinkedIn Tumblr

ಕೊಪ್ಪಳ: ಈಗಾಗಲೇ ಬಿಜೆಪಿ ಹೈಕಮಾಂಡ್‌ನಲ್ಲಿ ಯಡಿಯೂರಪ್ಪ ಸಿಎಂ ಆದನಂತರ ಯಾರು ಬಿಜೆಪಿ ರಾಜ್ಯಾಧ್ಯಕ್ಷರಾಗಬೇಕು ಅನ್ನೋ ಚರ್ಚೆ ನಡೆಯುತ್ತಿದೆ. ಈ ಕಾರಣಕ್ಕೆ ಕೊಪ್ಪಳದಲ್ಲಿ ಶ್ರೀರಾಮುಲು ಬಿಜೆಪಿ ರಾಜ್ಯಾಧ್ಯಕ್ಷರಾಗಬೇಕು ಎಂದು ಬಿಜೆಪಿ ನಾಯಕರು ಫೇಸ್‌ಬುಕ್‌ನಲ್ಲಿ ಅಭಿಯಾನ ಶುರು ಮಾಡಿದ್ದಾರೆ.

ಬಿ.ಶ್ರೀರಾಮುಲುರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡುವಂತೆ ಸಮರ ಸಾರಿರೋ ಬಿಜೆಪಿ ನಾಯಕರು, ರಾಜ್ಯಾಧ್ಯಕ್ಷ ಸ್ಥಾನ ನೀಡದೇ ಹೋದ್ರೆ ಉತ್ತರಕರ್ನಾಟಕದಲ್ಲಿ ಬಿಜೆಪಿ ಪಕ್ಷ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಯ ಗುರುಗೌಡ ನಾಯಕ್ ಎಂಬಾತ ಈ ರೀತಿ ಪೋಸ್ಟ್ ಹಾಕಿ ಎಚ್ಚರಿಕೆ ಕೊಟ್ಟಿದ್ದು, ರಾಮುಲುಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಡಲಿಲ್ಲವೆಂದರೆ, ಬಿಜೆಪಿಯಲ್ಲಿ ವಾಲ್ಮೀಕಿ ಸಮುದಾಯ ಇರೋದಿಲ್ಲ ಎಂದು ಹೇಳಿದ್ದಾರೆ.

Comments are closed.