ಕರ್ನಾಟಕ

ಆಟೋ ಚಾಲಕನಿಗೆ ಕೋಟಿ ಮೌಲ್ಯದ ಮನೆ ಕೊಡಿಸಿದ್ದು ವಿದೇಶಿ ಮಹಿಳೆ!

Pinterest LinkedIn Tumblr


ಬೆಂಗಳೂರು: ರಾಜಧಾನಿಯಲ್ಲಿ ಆಟೋ ಓಡಿಸುತ್ತಿದ್ದ ಸಾಮಾನ್ಯ ವ್ಯಕ್ತಿಯೊಬ್ಬ ದಿಢೀರ್​ ಶ್ರೀಮಂತನಾದ ಕಥೆಗೆ ಈಗ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಅತಿ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಆತನ ಬಳಿ ಐಷಾರಾಮಿ ವಿಲ್ಲಾ ಬಂದಿದ್ದು ಹೇಗೆ ಎನ್ನುವ ಕಥೆಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಎದುರು ಬಿಚ್ಚಿದ್ದಾನೆ.

ಆಟೋ ಚಾಲಕ ಸುಬ್ರಮಣಿ ಮನೆ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಆತ 1.60 ಕೋಟಿ ರೂ. ಮೌಲ್ಯದ ವಿಲ್ಲಾ ಹೊಂದಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ಸುಬ್ರಮಣಿ ವಿವರಣೆ ನೀಡಿದ್ದಾರೆ.

ವಿದೇಶಿ ಮಹಿಳೆಯೊಬ್ಬಳು ತನಗೆ ಈ ವಿಲ್ಲಾ ಕೊಡಿಸಿದ್ದಾರೆ ಎಂದು ಸುಬ್ರಮಣಿ ಹೇಳಿಕೊಂಡಿದ್ದಾನೆ. “ನನಗೆ ವಿದೇಶಿ ವೃದ್ಧ ಮಹಿಳೆಯೊಬ್ಬಳು ಈ ವಿಲ್ಲಾ ಕೊಡಿಸಿದ್ದಾರೆ. ನನಗೆ ಅವರು 14 ವರ್ಷಗಳಿಂದ ಪರಿಚಯ. ಆರಂಭದಲ್ಲಿ ಆ ಮಹಿಳೆ ಒಮ್ಮೆ ನನ್ನ ಆಟೋದಲ್ಲಿ ಬಂದಿದ್ದರು. ವೈಟ್​ಫೀಲ್ಡ್ ಏರಿಯಾದಲ್ಲಿ ನಡ್ಕೊಂಡು ಹೋಗುತ್ತಿದ್ದಾಗ ಅವರನ್ನು ಬಿಟ್ಟು ನಾನೇ ಡ್ರಾಪ್​ ಮಾಡಿದ್ದೆ,” ಎಂದು ಹೇಳಿಕೊಂಡಿದ್ದಾನೆ ಆತ.

ಈ ಘಟನೆ ನಂತರದಲ್ಲಿ ಸುಬ್ರಮಣಿ ಮೇಲೆ ಅವರಿಗೆ ಅಪಾರ ನಂಬಿಕೆ ಬಂತಂತೆ. “ನಾನು ಅವರನ್ನು ಎರಡು ಬಾರಿ ಡ್ರಾಪ್​ ಮಾಡಿದ ನಂತರ ಅವರಿಗೆ ನನ್ನ ಮೇಲೆ ನಂಬಿಕೆ ಬಂತು. ಅವರು ಏನಾದರು ಸಣ್ಣ ಪುಟ್ಟ ಕೆಲಸಗಳಿಗೆ ಪೋನ್ ಮಾಡುತ್ತಿದ್ದರು. ಇದೇ ವಿಶ್ವಾಸದ ಮೇಲೆ 3 ವರ್ಷಗಳ ಹಿಂದೆ ಜತ್ತಿ ದ್ವಾರಕದಲ್ಲಿ ವಿಲ್ಲಾ ಕೊಡಿಸಿದ್ದರು. ಇನ್ನೂ ಎರಡು ಆಟೋ ತೆಗಿಸಿಕೊಟ್ಟರು,” ಎಂದು ಸುಬ್ರಮಣಿ ಹೇಳಿಕೊಂಡಿದ್ದಾರೆ.

ವಿಲ್ಲಾ ಖರೀದಿ ಬಗ್ಗೆ ಸೂಕ್ತ ದಾಖಲೆಗಳನ್ನ ಐಟಿ ಇಲಾಖೆಗೆ ಸುಬ್ರಮಣಿ ನೀಡಿದ್ದಾರಂತೆ. ಏ.16ರಂದು ಬೆಳಗ್ಗೆ 11 ಕ್ಕೆ ‌ಬಂದ ಅಧಿಕಾರಿಗಳಿಂದ ಮಧ್ಯಾಹ್ನ 2:30 ರ ವರೆಗೆ ದಾಖಲೆಗಳ ಪರಿಶೀಲನೆ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ದಾಳಿ ವೇಳೆ ಸಿಕ್ಕಿರುವ ದಾಖಲೆಗಳ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.

Comments are closed.