ಕರ್ನಾಟಕ

ಎಸ್​ಎಸ್​ಎಲ್​ಸಿ ಫಲಿತಾಂಶ: ಅನುತ್ತೀರ್ಣ ಆದರೆ ಜೀವನ ಮುಗಿಯೋದಿಲ್ಲ: ಸೈಕಲ್ ಜಾಥಾ ಮೂಲಕ ಜಾಗೃತಿ

Pinterest LinkedIn Tumblr


ದೊಡ್ಡಬಳ್ಳಾಪುರ: ಇವತ್ತು ಮಧ್ಯಾಹ್ನ ಎಸ್​ಎಸ್​ಎಲ್​ಸಿ ಫಲಿತಾಂಶ ಹೊರಬಿದ್ದಿದೆ. ಶೇ. 73ಕ್ಕಿಂತ ಹೆಚ್ಚು ಫಲಿತಾಂಸ ಬಂದಿದೆ. ಆದರೆ, 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಪಾಸಾದವರಲ್ಲೂ ಹಲವರಿಗೆ ನಿರೀಕ್ಷೆ ತಕ್ಕಂತೆ ಅಂಕಗಳು ಸಿಕ್ಕಿರುವುದಿಲ್ಲ. ಇವರಲ್ಲಿ ಅನೇಕರ ಪಾಲಿಗೆ ಫಲಿತಾಂಶ ಒಂದು ರೀತಿಯಲ್ಲಿ ಮರಣ ಶಾಸನದಂತೆ ಭಾಸವಾಗಬಹುದು. ನಪಾಸಾದ ಮತ್ತು ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ವಿಪರೀತ ನಿರ್ಧಾರಕ್ಕೆ ಮಾರುಹೋಗುವ ಅಪಾಯವಿರುತ್ತದೆ. ಇಂತಹ ವಿದ್ಯಾರ್ಥಿಗಳಲ್ಲಿ ಆತ್ಮಸ್ಧೈರ್ಯ ತುಂಬುವ ಕೆಲಸವನ್ನ ಇಲ್ಲಿಯ ಯುವ ಸಂಚಲನ ತಂಡ ಮಾಡುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಯುವಸಂಚಲನ ಕಳೆದ 7 ವರ್ಷಗಳಿಂದ ಸಾಮಾಜಿಕ ಕಾರ್ಯಗಳನ್ನ ಮಾಡುತ್ತ ಬಂದಿದ್ದು. ಯುವಕರೇ ಕಟ್ಟಿಕೊಂಡ ಒಂದು ತಂಡವಾಗಿ ತಾಲೂಕಿನಾದ್ಯಂತ ಕೆಲಸ ಮಾಡುತ್ತಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಕ್ಕೂ ಮುನ್ನವೇ ಜಾಗೃತಿಯ ಕೆಲಸಕ್ಕಿಳಿದ ಈ ತಂಡವು ವಿದ್ಯಾರ್ಥಿಗಳಲ್ಲಿ ಆತ್ಮಸ್ಧೈರ್ಯ ತುಂಬಿ, ಪರೀಕ್ಷೆಯ ಅಂಕವೇ ಎಲ್ಲವೂ ಅಲ್ಲ ಎಂಬ ಸತ್ಯವನ್ನು ಮನವರಿಕೆ ಮಾಡಲು ಯತ್ನಿಸಿತ್ತು.

ಯುವ ಸಂಚಲನದ ಸದಸ್ಯರು ಇಂದು ಬೆಳಗ್ಗೆ ನಗರದ ತಾಲುಕು ಆಫೀಸ್ ಕಛೇರಿ ವೃತ್ತದಿಂದ ಕೊಂಗಾಡಿಯಪ್ಪ ಕಾಲೇಜು ಮಾರ್ಗವಾಗಿ ರೈಲ್ವೆ ಸ್ಟೇಷನ್ , ಡಿಕ್ರಾಸ್, ಕೋರ್ಟ್ ರಸ್ತೆಯಿಂದ ಹಳೇ ಬಸ್ ನಿಲ್ದಾಣದವರೆಗೂ ಸೈಕಲ್ ಜಾಥಾ ನಡೆಸಿದರು. ಈ ಮೂಲಕ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ರು. ಸಂದೇಶ ಸಾರುವ ಭಿತ್ತಿಪತ್ರಗಳ ಮೂಲಕ ನಿಮಗೂ ಬದುಕಿದೆ ಆತ್ಮಹತ್ಯೆಗೆ ಪ್ರಯತ್ನಿಸಬೇಡಿ, ಪಾಸು, ಫೇಲು ನಿಮ್ಮ ಭವಿಷ್ಯ ನಿರ್ಧಾರಿಸುವದಿಲ್ಲ. ನಿಮ್ಮ ಫಲಿತಾಂಶಕ್ಕೆ ಸಾವೊಂದೇ ಉತ್ತರವಾಗುವುದು ಬೇಡ. ಪೋಶಕರೇ ನಿಮ್ಮ ಮಕ್ಕಳ ಸಾವಿಗೆ ನೀವೇ ಕಾರಣರಾಗದಿರಿ, ಫೇಲ್ ಆದವರನ್ನು ಗೌರವಿಸಿ, ಅಪಹಾಸ್ಯ ಮಾಡಬೇಡಿಯೆಂದು ಜನರಲ್ಲಿ ಜಾಗೃತಿ ಮೂಡಿಸಿದರು.

ಇವತ್ತಿನ ಶಿಕ್ಷಣ ಪದ್ಧತಿ ವ್ಯಾಪಾರೀಕರಣವಾಗುತ್ತಿದೆ. ಅಂಕಗಳ ಮೇಲೆ ವಿದ್ಯಾರ್ಥಿಗಳ ಭವಿಷ್ಯ ಅಳೆಯುವ ಕೆಲಸವಾಗುತ್ತಿದೆ. ಪೋಷಕರು ಸಹ ತಮ್ಮ ಮಕ್ಕಳನ್ನು ಹೆಚ್ಚು ಹೆಚ್ಚು ಅಂಕಗಳಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಇದರ ಹಿಂದೆ ಟ್ಯೂಷನ್ ಮಾಫಿಯಾ, ಖಾಸಗಿ ಶಾಲೆಗಳ ಕೈವಾಡ ಇದ್ದು. ಪೋಷಕರು ಮಕ್ಕಳ ಅಂಕಗಳಿಕೆ ಹಿಂದೆ ಬೀಳದೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸಮಾಜಕ್ಕೊಬ್ಬ ಉತ್ತಮ ಪ್ರಜೆ ಮಾಡುವ ಕೆಲಸ ಮಾಡಬೇಕಿದೆ.

Comments are closed.