ಕರ್ನಾಟಕ

ಬಳ್ಳಾರಿಯಲ್ಲಿ ಮುಮ್ಮಲ ಮರುಗಿದರೂ ಸಾವಿರಾರು ಜಾನುವಾರುಗಳಿಗೆ ಸಿಗದ ಮೇವು, ನೀರು

Pinterest LinkedIn Tumblr


ಬಳ್ಳಾರಿ: ಬಿಸಿಲನಾಡು ಬಳ್ಳಾರಿಯಲ್ಲಿ ಹೊರಗಡೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದಾರೆ. 41 ಡಿಗ್ರಿ ಸುಡುಬಿಸಿಲು ಜನರನ್ನು ಅರೆ ಕ್ಷಣವೂ ಬಿಸಿಲಿನಲ್ಲಿ ನಿಲ್ಲದಂತೆ ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ನೆರೆಯ ಕೊಪ್ಪಳ ಜಿಲ್ಲೆಯ ರೈತರು ಬಳ್ಳಾರಿಗೆ ಜಾನುವಾರ ಸಮೇತ ಗುಳೆ ಬಂದಿದ್ದಾರೆ. ಸಾವಿರಕ್ಕೂ ಹೆಚ್ಚು ಜಾನುವಾರುಗಳು ಕಿಲೋಮೀಟರ್ ಉದ್ದಕ್ಕೂ ಮೇವು ಸಿಗದೆ ಪರದಾಡುತ್ತಿರುವ ದೃಶ್ಯ ನೋಡಿದರೆ ಎಂಥವರ ಮನವೂ ಕಲಕುತ್ತೆ.

ಬಳ್ಳಾರಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನದ್ದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಮಾತಾಡುವ ಜನರು ಹೆಂಗೋ ಪಕ್ಕದೂರಿನಿಂದಾದ್ರೂ ನೀರು ಹೊತ್ತು ತರುತ್ತಿದ್ದಾರೆ. ಆದರೆ ಮಾತು ಬಾರದ ಮೂಕಪ್ರಾಣಿಗಳು ಸಮರ್ಪಕವಾಗಿ ಮೇವು ಸಿಗದೆ ಜಾನುವಾರುಗಳು ಪರದಾಡುತ್ತಿವೆ. ಬಳ್ಳಾರಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನದ್ದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಮಾತಾಡುವ ಜನರು ಹೆಂಗೋ ಪಕ್ಕದೂರಿನಿಂದಾದ್ರೂ ನೀರು ಹೊತ್ತು ತರುತ್ತಿದ್ದಾರೆ. ಆದರೆ ಮಾತು ಬಾರದ ಮೂಕಪ್ರಾಣಿಗಳು ಸಮರ್ಪಕವಾಗಿ ಮೇವು ಸಿಗದೆ ಜಾನುವಾರುಗಳು ಪರದಾಡುತ್ತಿವೆ. ಬರದ ವರದಿ ಕುರಿತು ತೆರಳಿದ ನ್ಯೂಸ್ 18 ತಂಡಕ್ಕೆ ಕಿಲೋಮೀಟರ್ ಗಟ್ಟಲೆ ಕಾಲು ದಾರಿ, ಬೆಳೆಯಿಲ್ಲದೆ ಬರಡು ಭೂಮಿಯಂತಿರುವ ಹೊಲಗದ್ದೆಗಳಲ್ಲಿ ಪಯಣಿಸುತ್ತಿರುವ ಜಾನುವಾರುಗಳ ದೃಶ್ಯ ಕಂಡುಬಂದಿದೆ. ಇಂಥ ಪರಿಸ್ಥಿತಿ ನೋಡಿದರೆ ಬರಗಾಲ ಯಾವ ಮಟ್ಟಿಗಿದೆ ಎಂಬುದು ಗೊತ್ತಾಗುತ್ತದೆ. ಈ ಬಗ್ಗೆ ರೈತ ಶಿವಪ್ಪ ‘ನಮಗೇನು ಒಂದೊತ್ತು ಊಟ ಸಿಗದೆ ಹೋದರೂ ನಡೆಯುತ್ತೆ, ಆದರೆ ಮಾತು ಬಾರದ ದನಕರುಗಳಿಗೆ ಹಲವು ದಿನಗಳೇ ಕಳೆದಿವೆ. ಮೇವು ಸಿಗದೆ ಹೋದ್ರೆ ಬಹಳ ಕಷ್ಟವಾಗುತ್ತೆ ಎಂದೇಳುತ್ತಾರೆ.

ಎರಡು ಕಿಲೋಮೀಟರ್ ಗಿಂತಲೂ ಹೆಚ್ಚು ದೂರದವರೆಗೆ ದನಕರುಗಳು ಏದುಸಿರಿನಲ್ಲಿ ಓಡುತ್ತಿವೆ. ಅತ್ತ ಇತ್ತ ಮೇವೇನಾದ್ರೂ ಸಿಗುತ್ತದೆಯೇ ಎಂದು ಹುಡುಕುತ್ತಿವೆ. ಊಹುಂ. ಮೇವು ಸಿಗುತ್ತಿಲ್ಲ. ಏನೂ ಸಿಗದೆ ಬೆಳಗ್ಗೆಯಿಂದೆ ಮೇವಿಗಾಗಿ ಸುಮ್ಮನೆ ಹೆಜ್ಜೆ ಹಾಕುತ್ತಿರುವ ಸಾವಿರಕ್ಕೂ ಹೆಚ್ಚು ಜಾನುವಾರುಗಳು ಬಳ್ಳಾರಿಯ ಕಂಪ್ಲಿ ಕ್ಷೇತ್ರದ ಕುರುಗೋಡು, ಬಾದನಹಟ್ಟಿ ಗ್ರಾಮದ ಬಳಿ ಕಾಣಿಸಿದವು. ಇವನ್ನೆಲ್ಲ ಮೇವಿಗಾಗಿ ಪಕ್ಕದ ಕೊಪ್ಪಳ ಜಿಲ್ಲೆ ಕನಕಗಿರಿಯಿಂದ ರೈತರು ಇಲ್ಲಿಗೆ ಕರೆತಂದಿದ್ದಾರೆ. ಈ ವರುಷವೂ ಕೊಪ್ಪಳ ಜಿಲ್ಲೆಯಲ್ಲಿ ಸಮರ್ಪಕವಾಗಿ ಮೇವು ಸಿಗದೆ ರೈತರು ಪರದಾಡುತ್ತಿದ್ದಾರೆ.

ಮೇವು ಒಡೆದುಕೊಂಡು ಹೋಗುವ ರೈತರಿಗೆ ತಮ್ಮ ದನಕರುಗಳನ್ನು ಒಪ್ಪಿಸಿ ಕಳುಹಿಸಿಕೊಡುತ್ತಿದ್ದಾರೆ. ಈ ರೀತಿ ಒಂದು ಸಾವಿರಕ್ಕೂ ಹೆಚ್ಚು ದನಕರುಗಳನ್ನು ಕರೆದುಕೊಂಡು ಬಂದ ರೈತರಾದ ಶಿವಪ್ಪ, ರಾಜಣ್ಣಈ ಬಾರಿ ಬಳ್ಳಾರಿ ಜಿಲ್ಲೆಯಲ್ಲಿ ಸಮರ್ಪಕವಾಗಿ ನೀರು ಸಿಗದೆ ಪರದಾಡುತ್ತಿದ್ದಾರೆ. ತುಂಗಭದ್ರ ಜಲಾಶಯದ ಮೂಲಕ ಕಾಲುವೆಯ ಬಿಡುತ್ತಿದ್ದ ನೀರು ಕಟ್ ಮಾಡಿದ್ದರಿಂದ ಹೊಲಗದ್ದೆಗಳಲ್ಲಿ ಮೇವು ಸಿಗದೆ ಗುಳೆ ಬಂದೆ ಜಾನುವಾರುಗಳು ಆಹಾರಕ್ಕಾಗಿ ಸಂಕಷ್ಟ ಪಡುತ್ತಿದ್ದವು. ಸರ್ಕಾರ ಮೇವು ಬ್ಯಾಂಕ್, ಗೋಶಾಲೆ ಮಾಡುತ್ತಿವೆ ಎಂದು ಕೇಳಿದ್ದೇವೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಮೇವು ಸಿಗದೆ ಹೋದರೆ ಕಸಾಯಿಖಾನೆಗೆ ಅನಿವಾರ್ಯವಾಗಿ ಕಳುಹಿಸಬೇಕಾಗುತ್ತದೆ ಎಂದು ನೋವಿನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ತಾರೆ.

ರಾಜ್ಯದಲ್ಲಿ ಬರಗಾಲವಿದ್ದು, ಪರಿಸ್ಥಿತಿ ಹದಗೆಟ್ಟಿದ್ದರೂ ಅದನ್ನು ಕೇಳಬೇಕಾದ ಪ್ರತಿನಿಧಿಗಳು ಲೋಕಸಭೆ ಚುನಾವಣೆಯಲ್ಲಿ ಇದುವರೆಗೆ ಫುಲ್ ಬ್ಯುಸಿಯಿದ್ದರು. ಸದ್ಯ ರಿಲಾಕ್ಸ್ ಮೂಡಿನಲ್ಲಿದ್ದಾರೆ. ಇನ್ನು ಮೂಲಸೌಲಭ್ಯಗಳನ್ನು ನೀಡಬೇಕಾಗಿದ್ದ ಅಧಿಕಾರಿಗಳು ಎಲೆಕ್ಷನ್ ಮುಗಿಸಿ ಬಿಸಿಯಾರಿಸಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕುಡಿಯುವ ನೀರಿಲ್ಲದೆ ಕಂಪ್ಲಿ, ಕೂಡ್ಲಿಗಿ ಸೇರಿದಂತೆ ಜಿಲ್ಲೆಯ ಗ್ರಾಮಾಂತರ ಜನರು ದಿನನಿತ್ಯ ಪರದಾಡುತ್ತಿದ್ದಾರೆ. ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಸಿಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಗುಳೆ ಬಂದ ಕೊಪ್ಪಳ ಜಾನುವಾರುಗಳಿಗೆ ಮೇವು ಸಿಗದೆ ಹತಾಶರಾಗಿ ಹೆಜ್ಜೆ ನೂಕುತ್ತಿರುವ ಎಂಥವರನ್ನು ಮಮ್ಮಲ ಮರುಗುವಂತೆ ಮಾಡುತ್ತದೆ.

Comments are closed.