ಕರ್ನಾಟಕ

ನಟ ದರ್ಶನ್ ಮೇಲೆ ಕ್ರಮ ಕೈಗೊಳ್ಳಬೇಕು: ಉಪಮುಖ್ಯಮಂತ್ರಿ ಪರಮೇಶ್ವರ್

Pinterest LinkedIn Tumblr


ನಾಮಪತ್ರ ವಾಪಸ್ ಪಡೆಯಲು ಸಂಸದ ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ರಾಜಣ್ಣ ಅವರು 3.5 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಸಂಭಾಷಣೆ ನಡೆಸಿದ್ದ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದಕ್ಕೆ ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದು ದರ್ಶನ ಹೇಳಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ, ಮುದ್ದ ಹನಮೇಗೌಡ ಹಣ ಪಡೆದುಕ್ಕೊಂಡಿಲ್ಲ, ಅವರು ನಿಷ್ಠಾವಂತ ಕಾಂಗ್ರೆಸ್ಸಿಗರಿದ್ದಾರೆ. ದರ್ಶನ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

ಬೆಳಗಾವಿಯ ಸಾಂಬ್ರಾ ಏರಪೋರ್ಟನಲ್ಲಿ ಶುಕ್ರವಾರ ಮಾತನಾಡಿದ ಅವರು, ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ, ದರ್ಶನ್ ಮೇಲೆ ಕ್ರಮ ಕೈಗೊಳ್ಳಬೇಕು, ಅವನು ಚುಣಾವಣೆಯಲ್ಲಿ ಪ್ರಚಾರಕ್ಕೆ ನನ್ನ ಜೊತೆ ಇದ್ದ, ದರ್ಶನ ಹೇಳಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ, ಮುದ್ದ ಹನಮೇಗೌಡ ಹಣ ಪಡೆದುಕ್ಕೊಂಡಿಲ್ಲ, ಅವರು ನಿಷ್ಠಾವಂತ ಕಾಂಗ್ರೆಸ್ಸಿಗರಿದ್ದಾರೆ ಎಂದು ಡಿಸಿಎಂ ಪರಮೇಶ್ವರ್ ಸ್ಪಷ್ಟಪಡಿಸಿದರು.

ನಂತರ ಮಾತನಾಡಿದ ಅವರು, ಬೆಳಗಾವಿ ರಾಜಕಾರಣ ವಿಚಾರವಾಗಿ ಮಾತನಾಡಿದ್ದು, ಕಾಂಗ್ರೆಸ್ ಪಕ್ಷ ಸಮರ್ಥ ವಾಗಿದೆ, ಪಕ್ಷದ ಬಗ್ಗೆ ವ್ಯಕ್ತಿಗತವಾಗಿ ಮಾತನಾಡೋದು ಸರಿ ಅಲ್ಲ, ನಮ್ಮಂತವರು ಬರ್ತಾರೆ ಹೋಗ್ತಾರೆ, ನಮ್ಮ ವಯಕ್ತಿಕ ವಿಚಾರಗಳನ್ನು ಪಕ್ಷದಲ್ಲಿ ತರೋದು ಬೇಡ ಎಂದರು.

ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ನಾಲ್ಕು ವರ್ಷ ಅವಕಾಶ ಇದೆ. ಅದರ ಬಗ್ಗೆ ಚರ್ಚೆ ಮಾಡಲಾಗುವುದು. ರಮೇಶ ಜಾರಕಿಹೊಳಿ ಸಂಪರ್ಕಕ್ಕೆ ನಾವೂ ಪ್ರಯತ್ನವನ್ನು ಮಾಡುತ್ತಿದ್ದೇವೆ, ನಿನ್ನೆ ಖುದ್ದು ನಾನೇ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದೆ. ಆದರೆ ಸಾಧ್ಯವಾಗಲಿಲ್ಲ, ರಮೇಶ್ ಮನವೊಲಿಸಲಿಕ್ಕೆ ಪ್ರಯತ್ನ ನಡೆದಿದೆ. ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಟ್ಟ ಮೇಲೆ ಮುಂದಿನ ಕ್ರಮಕ್ಕೆ ಕಾಂಗ್ರೆಸ್ ವಿಚಾರ ಮಾಡಲಿದೆ ಎಂದು ತಿಳಿಸಿದರು.

ಸರಕಾರ ಸುಬದ್ರವಾಗಿದೆ, ಮುಖ್ಯಮಂತ್ರಿ ಮತ್ತು ನಾನು, ಡಿ ಕೆ ಶಿವಕುಮಾರ್ ಚರ್ಚೆ ಮಾಡಿದ್ದೇವೆ, ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ, ಇನ್ನು ನಾಲ್ಕು ವರ್ಷ ಸಮ್ಮಿಶ್ರ ಸರಕಾರ ಇರಲಿದೆ, ರಮೇಶ ವಿರುದ್ದ ಬೆಳಗಾವಿ ಕಾಂಗ್ರೆಸ್ ನಿಂದ ದೂರು ವಿಚಾರ ಕಾಂಗ್ರೆಸ್ ಶಿಸ್ತು ಕಮಿಟಿಯ ಮುಂದೆ ಇಂತಹ ದೂರುಗಳು ಬರುತ್ತವೆ, ವಿಚಾರಣೆ ಮಾಡ್ತಾರೆ ರಮೇಶ್ ಜಾರಕಿಹೊಳಿಗೆ ಜೆಡಿಎಸ್ ಆಫರ್ ವಿಚಾರ ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಡಾ. ಜಿ ಪರಮೇಶ್ವರ್ ತಿಳಿಸಿದರು.

Comments are closed.