ಚಿಕ್ಕಬಳ್ಳಾಪುರ: ಪಕ್ಷದ ಪ್ರಚಾರಕ್ಕೆ ಕರೆದೊಯ್ದು ನಂತರ ಹಣ ಕೊಡದಿದ್ದಕ್ಕೆ ರೊಚ್ಚಿಗೆದ್ದ ಮಹಿಳೆಯರು ಬಿಜೆಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಬಾಗೇಪಲ್ಲಿಯಲ್ಲಿ ನಡೆದಿದೆ.
ಹಣ ಕೊಡುವುದಾಗಿ ಹೇಳಿ ಬಿಜೆಪಿ ಮುಖಂಡರು ಚುನಾವಣಾ ಪ್ರಚಾರಕ್ಕೆಂದು ಮಹಿಳೆಯರನ್ನು ಕರೆದುಕೊಂಡು ಹೋಗಿದ್ದರು. ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಅವರ ಪರ ಮಹಿಳೆಯರು 10-13 ದಿನಗಳಿಂದ ಪ್ರಚಾರ ಮಾಡಿದ್ರು, ಅದರೆ ಪ್ರಚಾರ ಮುಗಿದ ನಂತರ ಮಹಿಳೆಯರಿಗೆ ಹಣ ಕೊಡದೆ ಬಿಜೆಪಿ ಮುಖಂಡರು ತಪ್ಪಿಸಿಕೊಂಡು ಓಡಾಡುತ್ತಿದ್ದಾರೆನ್ನಲಾಗಿದೆ. ಇದರಿಂದ ರೆಚ್ಚಿಗೆದ್ದ ಮಹಿಳೆಯರು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡರ ಪರವಾಗಿ ಪ್ರಚಾರ ಮಾಡಲು ಒಬ್ಬೊಬ್ಬರಿಗೆ ದಿನಕ್ಕೆ 200-300 ರೂಪಾಯಿ ನೀಡೋದಾಗಿ ಸ್ಥಳೀಯ ಮುಖಂಡರು ತಮಗೆ ಭರವಸೆ ನೀಡಿದ್ದರು. ಪ್ರಚಾರ ಕಾರ್ಯ ಮುಗಿದ ಬಳಿಕ ಹಣ ಕೊಡಬೇಕಾದ ಮುಖಂಡರು ನಿನ್ನೆಯಿಂದ ಕಚೇರಿಯತ್ತ ಬಾರದೆ ನಾಪತ್ತೆಯಾಗಿದ್ದಾರೆ. ಹಣ ಕೊಡುವ ತನಕ ತಾವು ಇಲ್ಲಿಂದ ಕದಲುವುದಿಲ್ಲ ಎಂದು ಈ ನಾರಿಯರು ಪಟ್ಟು ಹಿಡಿದು ಕುಳಿತಿದ್ದಾರೆ.