ಗದಗ: ಲೋಕಸಭೆ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಹೆಚ್ಚಿದೆ. ಗದಗದಲ್ಲಿ ಮತದಾರರು ಸ್ನ್ಬಾನದ ಮನೆಯಲ್ಲಿದ್ದು ಮೈತುಂಬಾ ಸೋಪ್ ಹಚ್ಚಿಕೊಂಡಿದ್ದಾಗಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಮತಯಾಚನೆಗೆ ಇದು ತೊಡಕುಂಟು ಮಾಡಿರಲಿಲ್ಲ ಎಂಬುದು ಅಚ್ಚರಿಯ ಸಂಗತಿ! ಅಲ್ಲದೆ ಸ್ನಾನದಲ್ಲಿದ್ದ ಮನುಷ್ಯ ಸ್ನಾನ ಮುಗಿಸಿ ಬರುವುದರೊಳಗೆ ಮೈತ್ರಿ ಅಭ್ಯರ್ಥಿಗೆ ಮತನೀಡಿ ಎಂಬ ಕರಪತ್ರವನ್ನು ವಿತರಿಸಿದ ಪ್ರಚಾರಕರು ಅಲ್ಲಿಂದ ಕಾಲ್ಕಿತ್ತಿದ್ದರು.
ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿನ ಪ್ರಮಾಣದ ಮತ ಗಳಿಸಿಕೊಡುವುದು ಈ ಭಾಗದ ಕಾರ್ಯಕರ್ತರ ಗುರಿಯಾಗಿದೆ.ಇದಕ್ಕಾಗಿ ಪಕ್ಷಗಳ ಕಾರ್ಯಕರ್ತರು ಏನನ್ನು ಮಾಡಲೂ ಸಿದ್ದರಾಗಿದ್ದಾರೆ. ತಾವು ಬಾತ್ ರೂಂ ನ ಸೋಪಿನ ರೀತಿಯ ಮೃದುಧೋರಣೆ ತಾಳಿದ್ದಾರೆ. ಗದಗ ಮುಂಡಗೋಡ ನಗರದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಮನೆ ಬಾಗಿಲಿಗೆ ಬಂದು ಮತಯಾಚನೆ ನಡೆಸಿದ್ದಾರೆ.ಹಾಗೆ ಒಂದು ಮನೆಗೆ ತೆರಳಿದ ಕಾರ್ಯಕರ್ತರು ಅಲ್ಲಿ ವ್ಯಕ್ತಿ ಸ್ನಾನದ ಮನೆಯಲ್ಲಿ ಮೈತುಂಬಾ ಸೋಪ್ ಹಚ್ಚಿಕೊಂಡಿದ್ದು ಸ್ನಾನಕ್ಕಾಗಿ ಸಿದ್ದವಾಗಿದ್ದರೂ ನೇರವಾಗಿ ಅವನ ಬಳಿ ಹೋಗಿ ತಮ್ಮ ಅಭ್ಯರ್ಥಿಗೆ ಮತ ಚಲಾಯಿಸಿ ಎಂದು ಕೇಳಿಕೊಂಡಿದ್ದಾರೆ.ಸ್ನಾನ ಮಾಡುತ್ತಿರುವ ವ್ಯಕ್ತಿಯ ಸಮ್ಮುಖದಲ್ಲಿ ಪ್ರಚಾರಕರು ಕರಪತ್ರ ಹಿಡಿದು ನಿಂತ ಚಿತ್ರ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
“ನನಗೆ ಅಚ್ಚರಿಯಾಗಿತ್ತು, ನಾನು ಸ್ನಾನಕ್ಕಾಗಿ ಮೈತುಂಬಾ ಸೋಪ್ ಹಚ್ಚಿಕೊಂಡಿದ್ದಾಗಲೇ ಅವರು ಆಗಮಿಸಿದರು, ಬಹುಷಃಅ ಅವರಿಗೆ ಸಮಯ ಇರಲಿಲ್ಲ ಎನಿಸುತ್ತಿದೆ. ಆದರೆ ನಾನು ಅವರು ನನ್ನೊಡನೆ ಸ್ನಾನ ಮುಗಿಯುವವರೆಗೂ ಕಾಯದೆ ಮಾತನಾಡಲಿದ್ದಾರೆ ಎಂದು ಭಾವಿಸಿಸ್ರಲಿಲ್ಲ” ಚಿತ್ರದಲ್ಲಿನ ವ್ಯಕ್ತಿ ಮುಂಡಗೋಡ, ಜಲವದಗಿ ಗ್ರಾಮದ ಶಿವಪ್ಪ ಹೊಸಮನಿ ಹೇಳಿದ್ದಾರೆ.
“ಅವರು ಯಾವ್ರನ್ನೂ ಬಿಡುತ್ತಿಲ್ಲ, ಮಾರುಕಟ್ಟೆಯಲ್ಲಿ ಎರಡೂ ಕೈಗಳಲ್ಲಿ ಬ್ಯಾಗ್ ಹಿಡಿದು ಬರುತ್ತಿದ್ದವರಿಗೂ ಅವರ ಜೇಬಿಗೆ ತಮ್ಮ ಕರಪತ್ರವನ್ನು ತುರುಕಿ ಮತಯಾಚನೆ ನಡೆಸಿದ್ದಾರೆ, ಪಾತ್ರೆ ತೊಳೆಯುತ್ತಿರುವ ಮಹಿಳೆಯರನ್ನೂ ಸಹ ಅವರು ಮಾತನಾಡಿಸಿ ಮತ ಯಾಚಿಸಿದ್ದಾರೆ. ಅವರು ತಮ್ಮಲ್ಲಿನ ಕರಪತ್ರವನ್ನು ಆಕೆಯೆಡೆಗೆ ತಳ್ಳುತ್ತಾರೆ” ಓರ್ವ ನಿವಾಸಿ ಹೇಳೀದ್ದಾರೆ, “ಅವರು ತಮ್ಮಲ್ಲಿನ ಕರಪತ್ರವನ್ನು ಕೂದಲು ಬಿಸಾಡುವಂತೆ ಬಿಸಾಡುತ್ತಿದ್ದಾರೆ, ಚವಲದ ಮನೆ (ಕಟಿಂಗ್ ಶಾಪ್) ಗಳಿಗೆ ಹೋಗಿ ಕೂದಲು ಕತ್ತರಿಸಿಕೊಳ್ಲುವಷ್ತೂ ಅವರಿಗೆ ಸಮಯವಿಲ್ಲ, ಹಾಗೆ ವರ್ತಿಸುತ್ತಿದ್ದಾರೆ” ಇನ್ನೋರ್ವ ನಿವಾಸಿ ಹೇಳಿದ್ದಾರೆ.
ಓರ್ವ ಪಕ್ಷದ ಪ್ರಚಾರ ಕಾರ್ಯಕರ್ತ ಮಾವಿನ ಮರವನ್ನೇರಿ ಪ್ರಚಾರ ನಡೆಸಿದ್ದ, ಅವನು ಮರವೇರಿದ್ದೇಕೆ ಎಂದರೆ ಅಲ್ಲೇ ಪಕ್ಕದಲ್ಲಿ ಕೇಬಲ್ ನಿರ್ವಾಹಕನೊಬ್ಬ ಯಾವುದೋ ಕೆಲಸಕ್ಕೆ ಕಂಬವನ್ನೇರಿದ್ದ. ಅವನಿಗೆ ತಮ್ಮ ಅಭ್ಯರ್ಥಿಗಳ ಪರ ಮತ ಹಾಕುವುದಕ್ಕೆ ತಿಳಿಸಿಸಲು ಈತನೂ ಮಾವಿನ ಮರವನ್ನೇರಿದ್ದಾನೆ. “ರಸ್ತೆ ಬದಿಯ ಡಾಬಾಗಳು, ಹೋಟೆಲ್ ಗಳಲ್ಲಿ ಸಹ ಮೂರು ಪಕ್ಶಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ನಡೆಸುವುದನ್ನು ಬಿಡುವುದಿಲ್ಲ” ಓರ್ವ ನಿವೃತ್ತ ಶಿಕ್ಷಕರು ಹೇಳಿದ್ದಾರೆ.
ನರಸಾಪುರದ ನಿವಾಸಿಯೊಬ್ಬರು ಹೇಳುವಂತೆ ಪ್ರಚಾರಕರು ಬಂದಾಗ ಮನೆಯವರು ಬಾಗಿಲು ತೆರೆಯದಿದ್ದರೆ ಅವರ ಫೋನ್ ನಂಬರ್ ಪಡೆದು ದೂರವಾಣಿ ಮೂಲಕ ಮತ ಯಾಚಿಸುತ್ತಾರೆ.”ನಮಗಂತೂ ಇದು ಆಘಾತಕಾರಿ ವಿಷಯವಾಗಿದೆ, ಯಾವುದೋ ಪಕ್ಷದ ಕಾರ್ಯಕರ್ತರು ಹೀಗೆ ನಮ್ಮ ಮೊಬೈಲ್ ದೂರವಾಣಿ ಸಂಖ್ಯೆ ಪಡೆದು ಮಾತನಾಡುತ್ತಾರೆ ಎಂದರೆ ಭಯವೂ ಆಗಿದೆ” ಓರ್ವ ಮಹಿಳೆ ಹೇಳಿದ್ದಾರೆ. ಕಾರ್ಯಕರ್ತರ ಈ ಪರಿಯ ಮತಬೇಟೆ ಈ ಭಾಗದ ಜನರಲ್ಲಿ ಜೆಳಿಕೊಳ್ಲಲಾಗದ ಕಷ್ಟಗಳನ್ನು ತಂದೊಡ್ಡಿದೆ.
Comments are closed.