ಬೆಂಗಳೂರು: ನಿಖಿಲ್ ಪರವಾಗಿ ದೇವೇಗೌಡರ ಕುಟುಂಬ ಹಾಗೂ ಸಚಿವರು ಪ್ರಚಾರ ಮಾಡ್ತಿದ್ದಾರೆ. ಸಮಲತಾ ಪರವಾಗಿ ದರ್ಶನ್ ,ಯಶ್ ಹಾಗೂ ಸಾಮಾನ್ಯ ಕಾರ್ಯಕರ್ತರು , ಸಾಮಾನ್ಯ ಜನ ಪ್ರಚಾರ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಮಾಧ್ಯಮದ ಮಾತನಾಡಿದ ಮಾಜಿ ಸಚಿವ ಚೆಲುವರಾಯಸ್ವಾಮಿ, ಶಿವರಾಮೇಗೌಡರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಯಾರಿಗೂ ಗೌರವವಲ್ಲ. ಪಿಟೀಲ್ ಚೌಡಯ್ಯ ಕುಟುಂಬದ ಬಗ್ಗೆ ಗೌರವವಿದೆ. ಶ್ರೀಮತಿಯವರನ್ನು ಬೇರೆ ಅನ್ನೋದಕ್ಕೆ ಆಗುತ್ತಾ. ಯಾರಾದರೂ ಮಾತಾಡಲಿ. ಮಹಿಳೆ ಬಗ್ಗೆ ಮಾತಾನಾಡೋದು ಗೌರವವಲ್ಲ. ಜನ ನೋಡ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ, ಸಚಿವರನ್ನು ನೋಡ್ತಿದ್ದಾರೆ. ವೈಯಕ್ತಿಕವಾಗಿ ಟೀಕೆ ಮಾಡೋದು ಚುನಾವಣೆಯಲ್ಲ. ನಮ್ಮ ಜಿಲ್ಲೆಗೆ ಗೌರವವಲ್ಲ ಎಂದರು.
ಎಲ್ ಆರ್ ಶಿವರಾಮೇಗೌಡರ ಮಗನ ಆಡಿಯೋ ವಿಚಾರವಾಗಿ ಮಾತನಾಡಿದ ಅವರು, ಅದರ ಬಗ್ಗೆ ಮಾಹಿತಿ ಇಲ್ಲ. ಬಹಳಷ್ಟು ನಡೀತಿದೆ ಅಂತ ಹೇಳುತ್ತಿದ್ದಾರೆ. ಮಂಡ್ಯ ಜನ ಪ್ರೀತಿ ನೋಡ್ತಾರೆ. ಕುಮಾರಸ್ವಾಮಿ ಮುಖ್ಯಂಮತ್ರಿ ಆಗಬೇಕೆಂದು ಕೂಗಿ ಹೇಳಿದ್ರು. ಉದಾಹರಣೆಗೆ ನಮ್ಮನ್ನೇ ಹೊಳೆ ಥರ ಕೊಚ್ಚಿ ಹೊರ ಹಾಕ್ತು. ಯಾರೇ ಗೆದ್ರೂ, ಅದು ಮಂಡ್ಯ ಜನರ ತೀರ್ಮಾನ. ದುಡ್ಡಿಂದ ಅಳಿಯೋದಕ್ಕೆ ಆಗಲ್ಲ. ಸುಮಲತಾ ಗೆದ್ರೂ ಅಷ್ಟೇ, ಇನ್ನೊಬ್ಬರೂ ಗೆದ್ದರೂ ಅದು ಜನರ ತೀರ್ಮಾನ ಎಂದು ಹೇಳಿದರು.
ಜನತಾದಳದವರು ನಾವು ಸೋತ ಮೇಲೆ ನಮ್ಮನ್ನು ಯಾವ್ದಕ್ಕೂ ಕರೆದಿಲ್ಲ. ಬೇರೆಯವರ ಥರ ನೋಡಿದ್ರು. ಸಭೆ ಸಮಾರಂಭಕ್ಕೆ ಹೋಗಲಿಲ್ಲ. ಏಕೆಂದರೆ ಅವರು ನಮ್ಮನ್ನ ಕರೆದಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರನ್ನು ಗೌರವಯುತವಾಗಿ ನಡೆಸಿಕೊಂಡಿಲ್ಲ. ಹೀಗೆ ಹೇಗಿದ್ದೀಯೋ, ಹಾಗೇ ಇದ್ದೀವಿ. ಜಿಲ್ಲೆಯ ಜನತೆಗೆ ಅರಿವಿದೆ. ನನ್ನ ಚುನಾವಣೆಯೇ ಸಾಕ್ಷಿ. ಅದಕ್ಕಿಂತ ಬೇಕಿಲ್ಲ ಎಂದರು.
ಪುಟ್ಟರಾಜು ಕ್ಷಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಾತಾಡಿದ್ರೆ ಹೋಯ್ತು, ಮುತ್ತು ಹೊಡೆದ್ರೆ ಹೋಯ್ತು. ಹಿಂದಿನ ನೆನಪು ಬಂದಿಲ್ಲ. ನಾನು ಸೋತಿದ್ದೀನಿ, ಅವ್ರು ಗೆದ್ದಿದ್ದಾರೆ ಎಂಬ ಅಧಿಕಾರದ ಅಮಲಿನಲ್ಲಿ ಮಾತನಾಡಿದ್ದಾರೆ. ಯಾರ ಬಗ್ಗೆಯೂ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದರು.
ಸಿದ್ದರಾಮಯ್ಯನವರು ಕರೆದರು. ಆದರೆ, ಜೆಡಿಎಸ್ ಶಾಸಕರು ಕರೆದಿಯಲ್ಲ. ಅವರಿಗೂ ನಮಗೂ ಆಗೋದಿಲ್ಲ ಅಂತ ಹೇಳಿದ್ದಾರೆ. ಆಯೋಜನೆ ಮಾಡಿದ ವ್ಯಕ್ತಿ ಕರೆಯದಿದ್ದಾಗ, ನಾನು ಹೇಗೆ ಹೋಗಲಿ. ಸಿದ್ದರಾಮಯ್ಯ ಅವರಿಗೆ ಕ್ಷಮೆ ಕೇಳಿ, ಬರೋದಕ್ಕೆ ಆಗಲ್ಲ ಅಂತೇಳಿದ್ದೆ. ನಮ್ಮಮುಖಂಡರು ಬರ್ತಾರೆ ಅಂತೇಳಿದ್ದೆ. ಸಿದ್ದರಾಮಯ್ಯನವರ ಬಗ್ಗೆ ಗೌರವವಿದೆ. ನೆನ್ನೆ ಕೆ.ಆರ್.ನಗರದಲ್ಲಿ ಜೆಡಿಎಸ್ ಆಯೋಜಿಸಿದ್ದ ಸಭೆಗೆ ರಾಹುಲ್ ಗಾಂಧಿ ಬಂದಿದ್ದರು. ನಾವು ಹೋಗಬೇಕಿತ್ತು. ತಪ್ಪಾಗಿದೆ. ಅದಕ್ಕಾಗಿ ನಾನು ದೂರದಿಂದಲೇ ಕ್ಷಮೆ ಕೇಳುತ್ತೇನೆ ಎಂದರು.
ಸುಮಲತಾಗೆ ಪರೋಕ್ಷ ಬೆಂಬಲ ವಿಚಾರವಾಗಿ ಮಾತನಾಡಿದ ಅವರು, ಅದರ ಬಗ್ಗೆ ನಾನು ಮಾತನಾಡಲ್ಲ. ಪಕ್ಷ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಪರಾಧ ಮಾಡಿಲ್ಲ. ಬೈ ಚಾನ್ಸ್ , ಯಾರಾದ್ರು ಒತ್ತಡಕ್ಕೆ ಮಾಡಿದ್ರೆ, ಪಕ್ಷದ ತೀರ್ಮಾನಕ್ಕೆ ಗೌರವ ಕೊಡಬೇಕಾಗುತ್ತೆ. ತಂದೆ ತಾಯಿ ಹೊಡೆದ್ರೆ ಬೇಜಾರು ಮಾಡಿಕೊಳ್ಳಲು ಆಗುತ್ತದೆಯೇ. ಆಗ ನೋವು ಆಗುತ್ತೆ. ಪಕ್ಷ ಬಿಡಲ್ಲ, ಕಾಂಗ್ರೆಸ್ ಬಿಡಲ್ಲ. ಅಲ್ಲೇ ಇರ್ತೀನಿ. ತಾತ್ಕಾಲಿಕ ಶಿಕ್ಷೆ ಕೊಟ್ರೆ ಸ್ವೀಕರಿಸುತ್ತೇನೆ. ಎಲ್ಲರೂ ಬೇಡ ಅಂದಾಗ ಮನೆಯಲ್ಲೇ ಇರ್ತೀನಿ. ಎಲ್ಲಾ ಮುಗಿದೋಗಿದೆ. ಪ್ರಚಾರದ ಅವಶ್ಯಕತೆ ಇಲ್ಲ ಎಂದರು.
Comments are closed.