ಕರಾವಳಿ

ಮಹಿಳೆಯರಿಗೆ ಗೌರವ ನೀಡುವ ಏಕಮಾತ್ರ ಪ್ರಧಾನಿ ನರೇಂದ್ರ ಮೋದಿ : ಬಿಜೆಪಿ ರಾಜ್ಯ ವಕ್ತಾರೆ ಸುಲೋಚನಾ ಭಟ್

Pinterest LinkedIn Tumblr

ಮಂಗಳೂರು,ಎಪ್ರಿಲ್.14: ಕಳೆದ 60ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯ ಪ್ರಗತಿ ಎಂದೂ ಆದ್ಯತೆಯಾಗಿರಲಿಲ್ಲ. ಮಹಿಳೆಯರಿಗೆ ಮೂಲ ಸೌಕರ್ಯವನ್ನೂ ಒದಗಿಸುವ ಬಗ್ಗೆ ಎಂದೂ ಚಿಂತಿಸಲಿಲ್ಲ. 5 ವರ್ಷಗಳ ಮೋದಿ ಆಡಳಿತದಲ್ಲಿ ಹೆಣ್ಣು ಮಗುವಿನ ಬಗ್ಗೆ ಇರುವ ತಾತ್ಸರ ಭಾವನೆಯನ್ನು ದೂರ ಮಾಡಿ ಮಹಿಳಾ ಸಬಲೀಕರಣದ ಹಿನ್ನಲೆಯಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಮಹಿಳಾ ನೇತೃತ್ವಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಈ ದೇಶದ ಅತ್ಯಂತ ಗೌರವದ ವಿದೇಶಾಂಗ ಮತ್ತು ರಾಷ್ಟ್ರದ ರಕ್ಷಣಾ ಸಚಿವಾಲಯ ಎರಡನ್ನೂ ಮಹಿಳೆ ಯರಿಗೆ ನೀಡಿದ ಏಕಮಾತ್ರ ಪ್ರಧಾನಿ ಈ ದೇಶದ ಭಾರತೀಯ ಜನತಾ ಪಾರ್ಟಿಯ ನೇತೃತ್ವ ಹೋದಿರತಕ್ಕಂತಹ ಪ್ರಧಾನಿ ನರೇಂದ್ರ ಮೋದಿ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುಲೋಚನಾ ಭಟ್ ತಿಳಿಸಿದ್ದಾರೆ.

ರವಿವಾರ ಮಂಗಳೂರಿನ ಜಿಲ್ಲಾ ಬಿ ಜೆ ಪಿ ಚುನಾವಣಾ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,ಭೇಟಿ ಬಚಾವೂ – ಭೇಟಿ ಪಢಾವೋ ಮೂಲಕ ಹೆಣ್ಣು ಶಿಶುಗಳನ್ನು ಹತೆಯಯನ್ನು ತಡೆಯುವ, ಹೆಣ್ಣು ಮಕ್ಕಳನ್ನು ಸುಕ್ಷಿತರನ್ನಾಗಿಸುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಇದುವರೆಗೆ 1.26ಕೋಟಿ ಖಾತೆ ತೆರೆಯಲಾಗಿದ್ದು, 20,000 ಕೋಟಿಗಿಂತಲೂ ಹೆಚ್ಚು ಠೇವಣಿ ಇಡಲಾಗಿದೆ. ಮಹಿಳೆಯರ ಸಬಲೀಕರಣದ ಹಿನ್ನಲೆಯಲ್ಲಿ ಮಹಿಳೆಯನ್ನು ಆರ್ಥಿಕ ಸ್ವಾವಲಂಭಿಯನ್ನಾಗಿಸುವ ನಿಟ್ಟಿನಲ್ಲಿ ತರಭೇತಿ ಗೊಳಿಸುವ ಸ್ಟೆಪ್ ಯೋಜನೆ ಮಹಿಳೆ ತನ್ನ ಕಾಲಮೇಲೆ ತಾನೇ ನಿಲ್ಲಲು ಸಹಕಾರಿಯಾಗಿದೆ. ಉಜ್ವಲಾ ಯೋಜನೆಯ ಮೂಲಕ ಹೊಗೆ ಮುಕ್ತ ಅಡಿಗೆ ಕೋಣೆಗೆ ನಾಂದಿ ಹಾಡಿದ ಕೀರ್ತಿ ನರೇಂದ್ರ ಮೋದಿಗೆ ಸೇರಬೇಕು. 6.8 ಕೋಟಿ ಮಹಿಳೆಯರಿಗೆ ಉಚಿತ ಎಲ್.ಪಿ.ಜಿ ಸಂಪರ್ಕ ನೀಡಲಾಗಿದೆ. ನಮ್ಮ ಜಿಲ್ಲೆಯಲ್ಲಿ ಗರಿಷ್ಠ 43,878ಸಾವಿರ ಮಹಿಳೆಯರಿಗೆ ಸಂಪರ್ಕ ನೀಡಲಾಗಿದೆ. ಇದು ನಮ್ಮ ಸಂಸದ ನಳೀನ್ ಕುಮಾರ್‍ರವರ ಸಾಧನೆ. ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಗರ್ಭಿಣಿಯರಿಗೆ 6000 ರೂ ಉತ್ತೇಜಕ ಧನ ನೀಡಿದರೆ, ಇಂದ್ರ ಧನುಷ್ ಮಿಶನ್ ಅಡಿಯಲ್ಲಿ 80 ಲಕ್ಷ ಗರ್ಭಿಣಿಯರಿಗೆ ರೋಗ ನಿರೋಧಕ ನೀಡಲಾಗಿದೆ. ತಾಯ್ತನದ ರಜೆ ಉದ್ಯೋಗದಲ್ಲಿರುವ ತಾಯಂದಿರಿಗೆ 2 ವಾರದಿಂದ 26 ವಾರಕ್ಕೆ ಏರಿಸಲಾಗಿದೆ ಎಂದರು.

ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಸಾಂತ್ವಾನ, ಆಪ್ತ ಸಲಹೆ ಪುರ್ನವಸತಿ ಕಲ್ಪಿಸುವ ಸಖಿ ಯೋಜನೆಯೂ ಮೊದಲನೆಯ ಕೇಂದ್ರ ಉಡುಪಿಯಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಮಹಿಳಾ ದೌಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ದೇಶದ 8 ದೊಡ್ಡ ದೊಡ್ಡ ನಗರಗಳಲ್ಲಿ ನಿರ್ಭಯ ನಿಧಿಯ ಮೂಲಕ ಸೇಫ್ ಸಿಟಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಬೆಂಗಳೂರು ಕೂಡಾ ಸೇರಲಾಗಿದೆ. 12 ವರ್ಷದ ಒಳಗಿನ ಹೆಣ್ಣು ಮಗುವಿನ ಅತ್ಯಾಚಾರಿಗೆ ಮರಣದಂಡನೆ, 16 ವರ್ಷದ ಒಳಗಿನ ಹೆಣ್ಣು ಮಗುವಿನ ಅತ್ಯಾಚಾರಿಗೆ ನೀಡುವ ಜೈಲು ಶಿಕ್ಷೆ 10 ರಿಂದ 20ವರ್ಷಕ್ಕೆ ಏರಿಸುವ ಕಠಿಣ ಕ್ರಮಗಳ ಮೂಲಕ ಅತ್ಯಾಚಾರಿಗೆ ಎಚ್ಚರಿಕೆಯನ್ನು ನೀಡಿರುವ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದವರು ಹೇಳಿದರು.

ಆಶಾ ಕಾರ್ಯಕರ್ತೆಯರಿಗೆ ಸಹಾಯಕರಿಗೆ 50% ಸಂಬಳ ಏರಿಕೆಯ ಜೊತೆಗೆ ಅವರನ್ನು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಮತ್ತು ಸುರಕ್ಷಾ ಭೀಮಾ ಯೋಜನೆಯ ವ್ಯಾಪ್ತಿಗೆ ತಂದಿರುವುದು ಪ್ರಧಾನಿ ಮೋದಿಯವರಿಗೆ ಮಹಿಳಾ ಕಾರ್ಯಕರ್ತರ ಬಗೆಗಿನ ಕಾಲಜಿಯನ್ನು ಎತ್ತ್ತಿ ತ್ತೋರಿಸುತ್ತದೆ. ಬಹಳ ವರ್ಷಗಳಿಂದ ಮುಸ್ಲಿಂ ಸಮುದಾಯದಲ್ಲಿದ್ದ ಅನಿಷ್ಟ ಪದ್ಧತಿ ತ್ರಿವಳಿ ತಲಾಕ್ ನಿಷೇಧ, ಸ್ವಂತ ಹಣದಲ್ಲೇ ಹಜ್ ಯಾತ್ರೆ ಮಾಡಬೇಕೆಂಬ ಮುಸ್ಲಿಂ ಬಂಧುಗಳ ಇಚ್ಚೆಯನ್ನು ಪುರಸ್ಕರಿಸಿ, ಈ ಅನುದಾನವನ್ನು ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೀಡಿದ ಕ್ರಮ, 45ವರ್ಷದ ಮುಸ್ಲಿಂ ಮಹಿಳೆಯರು ಪುರುಷರ ಸಹಾಯವಿಲ್ಲದೆ ಸ್ವತಂತ್ರವಾಗಿ ಹಜ್‍ಯಾತ್ರೆಗೆ ಅವಕಾಶ ನೀಡಿರುವುದು ಸಾಮಾಜಿಕ ಸಬಲೀಕರಣಕ್ಕೆ ಮೋದಿಯವರು ನೀಡಿರುವ ಉತ್ತೇಜನ ಎಂದು ಅವರು ತಿಳಿಸಿದರು.

18-04-2019ರಂದು ನಡೆಯುವ ಚುನಾವಣೆಯಲ್ಲಿ ಈ ಅಂಶಗಳನ್ನು ಮನಗಂಡು ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಳೀನ್ ಕುಮಾರ್ ಕಟೀಲ್‍ರವರು ಖಂಡಿತಾ ಅತ್ಯಧಿಕ ಬಹುಮತಗಳಿಂದ ಗೆದ್ದು ಬರುತ್ತಾರೆ ಎಂದು ಸುಲೋಚನಾ ಭಟ ವಿಶ್ವಾಸ ವ್ಯಕ್ತಪಡಿಸಿದರು..

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ದ .ಕ . ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತುರಿ ಪಂಜಾ, ಜಿಲ್ಲಾ ಬಿ ಜೆ ಪಿ ಕಾರ್ಯದರ್ಶಿ ಪ್ರಭಾ ಮಾಲಿನಿ ಮುಂತಾದವರು ಉಪಸ್ಥಿತರಿದ್ದರು

Comments are closed.