
ಮುಂಬೈ: ಜೆಟ್ ಏರ್ವೇಸ್ ಬಾಕಿ ವೇತವನ್ನು ಪಾವತಿ ಮಾಡದಿರುವುದರಿಂದ 1,100 ಪೈಲೆಟ್ಗಳು ನಾಳೆ ಬೆಳಗ್ಗೆಯಿಂದ ವಿಮಾನ ಹಾರಾಟ ನಿಲ್ಲಿಸಲು ನಿರ್ಧರಿಸಿದ್ದು, ಈ ಮೂಲಕ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಲಿದ್ದಾರೆ.
ಪೈಲೆಟ್ಗಳು, ಇಂಜಿನಿಯರ್ಸ್, ಹಿರಿಯ ನಿರ್ವಹಣಾಧಿಕಾರಿಗಳಿಗೆ ಜನವರಿ ತಿಂಗಳಿಂದ ವೇತನ ಸಿಕ್ಕಿಲ್ಲ. ಉಳಿದ ಕೆಲಸಗಾರರಿಗೆ ಮಾರ್ಚ್ ತಿಂಗಳಿನಿಂದಲೂ ವೇತನವನ್ನು ನೀಡಿಲ್ಲ. ಹೀಗಾಗಿ, ಇದೀಗ ಸಂಸ್ಥೆಯ ವಿರುದ್ಧ ಆಕ್ರೋಶಗೊಂಡಿರುವ ಸಿಬ್ಬಂದಿ ಕಾರ್ಯ ಮುಂದುವರೆಸದಿರಲು ನಿರ್ಧರಿಸಿದ್ದಾರೆ.
ಮೂರೂವರೆ ತಿಂಗಳಿಂದ ಸಂಬಳ ಇಲ್ಲದೆ ಕೆಲಸ ಮಾಡುತ್ತಿದ್ದೇವೆ. ಯಾವಾಗ ನಮ್ಮ ದುಡ್ಡು ನಮಗೆ ಬರುತ್ತದೆ ಎಂದು ಕೂಡ ತಿಳಿಸಿಲ್ಲ. ಹಾಗಾಗಿಯೇ ನಾವು ನಾಳೆಯಿಂದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ. ಎಲ್ಲ 1,100 ಪೈಲಟ್ಗಳು ನಾಳೆ ಬೆಳಗ್ಗೆ 10ರಿಂದ ವಿಮಾನ ಹಾರಾಟವನ್ನು ನಿಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೆಟ್ ಏರ್ವೇಸ್ನ 1,600 ಪೈಲಟ್ಗಳಲ್ಲಿ 1,100 ಪೈಲಟ್ಗಳು ಪ್ರತಿಭಟನೆಯಲ್ಲಿ ಭಾಗಿಯಾಗುವ ಮೂಲಕ ಹಾರಾಟವನ್ನು ನಿಲ್ಲಿಸಲಿದ್ದಾರೆ. ಕಳೆದ ಆಗಸ್ಟ್ನಿಂದ ಕಂಪನಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಜೆಟ್ ಏರ್ವೇಸ್, ಹಿರಿಯ ವ್ಯವಸ್ಥಾಪಕರು, ಪೈಲಟ್ ಹಾಗೂ ಇಂಜಿನಿಯರ್ಗಳಿಗೆ ವೇತನ ನೀಡಿರಲಿಲ್ಲ. ಕಳೆದ ಸೆಪ್ಟೆಂಬರ್ನಲ್ಲಿ ಅಲ್ಪ ಪ್ರಮಾಣ ವೇತನವನ್ನು ಮಾತ್ರ ಜೆಟ್ ಏರ್ವೇಸ್ ತನ್ನ ಸಿಬ್ಬಂದಿಗಳಿಗೆ ನೀಡಿತ್ತು. ಇನ್ನು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಸಂಬಳವನ್ನು ಸಂಸ್ಥೆ ನೀಡಿಲ್ಲ. ಸಾವಿರಾರು ಕೋಟಿ ರೂ. ನಷ್ಟದೊಂದಿಗೆ ಸಂಕಷ್ಟಕ್ಕೆ ಸಿಲುಕಿರುವ ಜೆಟ್ ಏರ್ವೇಸ್ ವೈಮಾನಿಕ ಸಂಸ್ಥೆಯ ಸಂಸ್ಥಾಪಕ ಹಾಗೂ ಅದರ ಚೇರ್ಮನ್ ನರೇಶ್ ಗೋಯಲ್ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ನರೇಶ್ ಮತ್ತವರ ಪತ್ನಿ ಅನಿತಾ ಅವರು ಸಂಸ್ಥೆಯ ಬೋರ್ಡ್ನಿಂದಲೂ ಹೊರಬಂದಿದ್ದಾರೆ.
ಈ ಹಿಂದೆ ಬಾಕಿ ಸಂಬಳ ಕೊಡದಿದ್ದರೆ ಏಪ್ರಿಲ್ 1 ರಿಂದ ವಿಮಾನ ಹಾರಾಟ ನಿಲ್ಲಿಸುತ್ತೇವೆ ಎಂದು ಜೆಟ್ ಏರ್ವೇಸ್ ಪೈಲಟ್ಗಳು ಎಚ್ಚರಿಕೆ ನೀಡಿದ್ದರು. ಕಳೆದ ಏಳು ತಿಂಗಳಿಂದ ವೇತನ ಸಿಕ್ಕಿಲ್ಲ. ಕೆಲವರಿಗೆ ಕಳೆದ ಮೂರು ತಿಂಗಳಿಂದ ಒಂದೇ ಒಂದು ರೂಪಾಯಿಯೂ ಖಾತೆಗೆ ಬಿದ್ದಿಲ್ಲ. ಇದರಿಂದ ಕೆಲಸ ಮಾಡುವ ಸ್ಥಳದಲ್ಲಿ ಶಾಂತಿಯೇ ಇಲ್ಲದಂತಾಗಿದೆ,” ಎಂದಿದ್ದಾರೆ ಪೈಲಟ್ಗಳು. ಅಲ್ಲದೆ, ವೇತನ ಸರಿಯಾಗಿ ಪಾವತಿ ಆಗದೆ ಇದ್ದಲ್ಲಿ ಏಪ್ರಿಲ್ನಿಂದ ತಾವು ಕಾರ್ಯ ನಿರ್ವಹಿಸುವುದಿಲ್ಲ ಎಂದು ಪೈಲಟ್ಗಳು ಹೇಳಿದ್ದರು. ಅದರಂತೆ ಇದೀಗ ಕಾರ್ಯ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.
ಜೆಟ್ ಏರ್ವೇಸ್ ಸಂಸ್ಥೆಯ ಸ್ವತಂತ್ರ ನಿರ್ದೇಶಕರಾದ ರಾಜಶ್ರೀಪತಿ ರಾಜೀನಾಮೆ ನೀಡಿದ್ದು, ಏಪ್ರಿಲ್ 13ರಿಂದ ತಮ್ಮ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಇಂದು ಏರ್ಲೈನ್ಸ್ ಘೋಷಿಸಿದೆ. ಇನ್ನೊಂದು ಮೂಲದ ಪ್ರಕಾರ, ನಾಳೆ ಜೆಟ್ ಏರ್ವೇಸ್ ಅಧಿಕಾರಿಗಳು ಉನ್ನತ ಮಟ್ಟದ ಸಭೆ ನಡೆಸಲಿದ್ದು, ಆ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನದ ಮೇಲೆ ಪೈಲಟ್ಗಳ ನಿರ್ಧಾರವೇನೆಂದು ಅವಲಂಬಿತವಾಗಲಿದೆ.
Comments are closed.