ಕರ್ನಾಟಕ

ನಿಂಬೆ ಹಣ್ಣಿನ ಸಮೇತ ರೇವಣ್ಣನನ್ನೇ ನುಂಗುತ್ತೇನೆ: ಈಶ್ವರಪ್ಪ

Pinterest LinkedIn Tumblr


ಕಲಬುರ್ಗಿ: ಈಶ್ವರಪ್ಪಗೂ ಒಂದು ನಿಂಬೆ ಹಣ್ಣು ಕೊಡೋದಾಗಿ ಸಚಿವ ಹೆಚ್.ಡಿ. ರೇವಣ್ಣ ನೀಡಿರುವ ಹೇಳಿಕೆಗೆ ಮಾಜಿ ಡಿಸಿಎಂ ತಿರುಗೇಟು ಕೊಟ್ಟಿದ್ದಾರೆ. ನಿಂಬೆ ಹಣ್ಣು ಕೊಟ್ಟರೆ ರೇವಣ್ಣನೇ ನುಂಗಿ ಹಾಕುತ್ತೇನೆಂದು ಈಶ್ವರಪ್ಪ ಎಚ್ಚರಿಕೆ ನೀಡಿದ್ಧಾರೆ.

ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪ, “ರೇವಣ್ಣ ನನಗೆ ನಿಂಬೆಹಣ್ಣು ಕೊಡೋದಾದ್ರೆ ಕೊಡಲಿ. ನಮ್ಮನೇಲಿ ನಾನ್ ವೆಜ್ ಚೆನ್ನಾಗಿ ಮಾಡ್ತಾರೆ. ನಾನ್ ವೆಜ್​ಗೆ ನಿಂಬೆ ಹಣ್ಣು ಸೇರಿಸಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ. ನಿಂಬೆಹಣ್ಣು ಸಮೇತ ರೇವಣ್ಣನನ್ನೇ ನುಂಗಿಬಿಡ್ತೇನೆ. ಜೆಡಿಎಸ್​ನವರಿಗೆ ಬಿಜೆಪಿ ಬಗ್ಗೆ ಗೊತ್ತಿಲ್ಲ. ಚಾನ್ಸ್ ಕೊಟ್ಟರೆ ಎಲ್ಲರನ್ನೂ ನುಂಗಿ ಹಾಕ್ತೇವೆ” ಎಂದು ಈಶ್ವರಪ್ಪ ಅಬ್ಬರಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ ಮತ್ತು ರೇವಣ್ಣಗೆ ಸುಳ್ಳು ಹೇಳಿ ಅಭ್ಯಾಸವಾಗಿದೆ ಎಂದ ಈಶ್ವರಪ್ಪ, ಕಳೆದ ಚುನಾವಣೆಯಲ್ಲಿ ಮೋದಿ ಪ್ರಧಾನಿಯಾದ್ರೆ ದೇಶ ಬಿಡೋದಾಗಿ ಹೇಳಿದ್ದರು. ಈಗ ಅವರ ಪುತ್ರ ರೇವಣ್ಣ ಕಾಂಗ್ರೆಸ್-ಜೆಡಿಎಸ್ 22 ಸ್ಥಾನ ಗೆಲ್ಲದಿದ್ದಲ್ಲಿ ರಾಜಕೀಯ ಸನ್ಯಾಸ ಸ್ವೀಕರಿಸೋದಾಗಿ ಹೇಳ್ತಾರೆ. ದೇವೇಗೌಡರು ದೇಶ ಬಿಟ್ಟಿದ್ದಾರೆಯೇ? ರೇವಣ್ಣ ಕಥೆಯೂ ಅಷ್ಟೇ ಆಗುತ್ತದೆ ಎಂದು ಟೀಕಿಸಿದ್ದಾರೆ.

ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನ ಖಚಿತ. ಹಲವಾರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ. ಸಮ್ಮಿಶ್ರ ಸರ್ಕಾರ ನೆಗೆದುಬೀಳಲಿದೆ ಎಂದು ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

Comments are closed.