ಧಾರವಾಡ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿಯಾದರೆ ಅವರು ಹೇಳಿದ್ದೇ ಸೀರೆ ಉಡಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಪ್ರಭಾಕರ್ ಕೋರೆ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ನಡೆದ ಗಣ್ಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ವೇಳೆ ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ನಾಯಕಿ ಮಾಯಾವತಿ ಅವರು ಪ್ರಧಾನಿಯಾದರೆ ಏನಾಗುತ್ತದೆ ಗೊತ್ತಾ? ಧಾರವಾಡಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬಸವೇಶ್ವರ ಮೂರ್ತಿ ಹಾಗೂ ಪ್ರತಿಮೆಗಳು ಗಾಯಬ್ ಆಗಿ ಎಲ್ಲಾ ಕಡೆ ಆನೆಗಳೇ ಬರುತ್ತವೆ. ಪಶ್ಚಿಮ ಬಂಗಾಳದ ಸಿಎಂ ದೀದಿ ಅವರು ಹೆಸರಿನಂತೆ ಮಮತಾ ಅಲ್ಲವೇ ಅಲ್ಲ ಎಂದು ಹೇಳಿದರು.
ಸಿಎಂ ಕುಮಾರಸ್ವಾಮಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್, ಜೆಡಿಎಸ್, ಎಸ್‍ಪಿ, ಬಿಎಸ್‍ಪಿ, ಟಿಎಂಸಿ, ಟಿಡಿಪಿ ನಾಯಕರು ಕೈ ಕೈ ಹಿಡಿದು ಒಂದಾದರು. ಆದರೆ ಅವರು ಒಂದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವುಕ್ಕಾಗಿಯೇ ಹೊರತು ದೇಶದ ಅಭಿವೃದ್ಧಿಗಾಗಿ ಅಲ್ಲ ಎಂದು ಮಹಾಮೈತ್ರಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿಯಾಗುವೆ ಎನ್ನುವ ಯುವರಾಜನಿಗೆ ದೇಶದ ಬಗ್ಗೆ ಏನೂ ಗೊತ್ತಿಲ್ಲ. ಅವರ ಭಾಷಣವನ್ನು ನೀವು ಕೇಳಿದ್ದೀರಿ. ದೇಶದಲ್ಲಿ ಎಷ್ಟು ಜಾತಿ, ಧರ್ಮ ಇವೇ ಎನ್ನುವುದೇ ಅವರಿಗೆ ಗೊತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ಲೇವಡಿ ಮಾಡಿದರು.
Comments are closed.