ಕರ್ನಾಟಕ

ಜಮೀರ್ ಅಹಮದ್ ಗೆ ಸಭೆಯಲ್ಲಿಯೇ ದೊಡ್ಡ ಜವಾಬ್ದಾರಿ ವಹಿಸಿದ ದೇವೇಗೌಡ!

Pinterest LinkedIn Tumblr


ತುಮಕೂರು: ತುಮಕೂರು ನಗರದ ಗ್ರಂಥಾಲಯದ ಆವರಣದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ, ತುಮಕೂರು ಜೆಡಿಎಸ್ ಅಭ್ಯರ್ಥಿ ಎಚ್‌.ಡಿ.ದೇವೇಗೌಡ ಮಾತನಾಡಿದ್ದಾರೆ.

ಬಿಜೆಪಿ, ಶಿವಸೇನೆ, ‌ಅಕಾಲಿದಳ ಬಿಟ್ಟರೆ ಎಲ್ಲರೂ ಮಹಾಘಟಬಂಧನ್ ಗೆ ಬಂದಿದ್ದಾರೆ. ಜೆಡಿಎಸ್ ಗೆ ಶಕ್ತಿ ಕಡಿಮೆ ಇರಬಹುದು. ಕಾಂಗ್ರೆಸ್ ಗೆ ಹೆಚ್ಚು ಶಕ್ತಿ ಇರಬಹದು.ಎರಡೂ ಶಕ್ತಿಯನ್ನೂ ಒಟ್ಟು ಗೂಡಿಸಿ ಬಿಜೆಪಿಯನ್ನ ಕುಗ್ಗಿಸಬಹುದು. ಬಿಜೆಪಿಯದ್ದು ಒಂದಂಕಿಯಲ್ಲೆ ಇರಬಹುದು. ಎರಡಂಕಿ ತಲುಪಲು ಕೊಡಬಾರದು ಎಂದು ಹೇಳಿದರು.

ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡುತ್ತಾ, ಈ ಸಾಧನೆ ಮಾಡಲು ನಿಮ್ಮೆಲ್ಲಾ ಸಹಕಾರ ಬೇಕು. ನಾನು ಹೆಚ್ಚಿಗೆ ಮಾತನಾಡಲ್ಲ. ನನ್ನ ಬದಲಾಗಿ ಜಮೀರ್ ಅಹಮದ್ ಮಾತಾಡ್ತಾರೆ ಎಂದು ಗೌಡರು ಜಮೀರ್‌ಗೆ ಮಾತನಾಡುವಂತೆ ತಾವೇ ಮುಂದಾಗಿ ಕರೆದರು.

Comments are closed.