ಕರ್ನಾಟಕ

ಹಾವೇರಿ-ಗದಗ ಕ್ಷೇತ್ರ ಗೆಲ್ಲಲು ಕಾಂಗ್ರೆಸ್​ ಭಾರೀ ರಣತಂತ್ರ!

Pinterest LinkedIn Tumblr


ಹಾವೇರಿ: ಹಾವೇರಿ-ಗದಗ ಲೋಕಸಭಾ ಕಣ ರಂಗೇರಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್​​​​.ಕೆ ಪಾಟೀಲ್​​​​​​​ ಸಹೋದರ ಡಿ.ಆರ್. ಪಾಟೀಲ್ ಕಣಕಿಳಿದಿದ್ದು, ಎದುರಾಳಿಯಾಗಿ ಬಿಜೆಪಿಯ ಹಾಲಿ ಸಂಸದ ಶಿವಕುಮಾರ್ ಉದಾಸಿ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಈ ಚುನಾವಣೆ ಎರಡು ಪಕ್ಷಗಳಿಗೆ ಪ್ರತಿಷ್ಠೆ ಕಣವಾಗಿದ್ದು, ಶತಾಯಗತಾಯ ಸಹೋದರನನ್ನು ಗೆಲ್ಲಿಸಲು ಎಚ್​​​.ಕೆ ಪಾಟೀಲ್​ ಭಾರೀ ರಣತಂತ್ರ ಹೆಣೆದಿದ್ದಾರೆ. ಹೀಗಾಗಿಯೇ ತಮ್ಮದೇ ಸಮುದಾಯದ ಗೌಡನನ್ನು ಗೆಲ್ಲಿಸಲು ಗೌಡ್ತಿಯರನ್ನು ಪ್ರಚಾರದ ಅಖಾಡಕ್ಕಿಳಿಸಿದ್ಧಾರೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿ​​ ಡಿ.ಆರ್. ಪಾಟೀಲ್​ರನ್ನು ಗೆಲ್ಲಿಸಲು ಗೌಡ್ತಿಯರೇ ಅಖಾಡಕ್ಕಿಳಿದ್ದಿದ್ದಾರೆ. ಬರದನಾಡಿಗೆ ನೀರು ಕೊಟ್ಟ ನಾಯಕನನ್ನು ಗೆಲ್ಲಿಸಿ ಎಂದು ಮನೆ ಮನೆಗೆ ಹೋಗಿ ಪ್ರಚಾರ ನಡೆಸಿದ್ದಾರೆ. ಹೀಗಾಗಿಯೇ ಕ್ಷೇತ್ರದಲ್ಲಿ ದಿನೇ ದಿನೇ ಚುನಾವಣಾ ಕಾವು ಬಿಸಿಲಿನಂತೆ ಏರತೊಡಗಿದೆ.

ಈ ಹಿಂದೆಯೂ ಅಭಿವೃದ್ಧಿ ಕುರಿತು ಚರ್ಚೆಗೆ ಬರುವಂತೆ ಬಿಜೆಪಿ ಅಭ್ಯರ್ಥಿಗೆ ಕಾಂಗ್ರೆಸ್ ಅಭ್ಯರ್ಥಿ ಪಂಥಾಹ್ವಾನ ನೀಡಿದ್ದಾರೆ. ಈ ಆಹ್ವಾನ ಸ್ವೀಕರಿಸಿರೋ ಬಿಜೆಪಿ ಅಭ್ಯರ್ಥಿ, ತಾವು ಅಭಿವೃದ್ಧಿ ಕುರಿತು ಚರ್ಚೆ ಮಾಡಲು ಮುಂದಾಗಿದ್ದರು. ಅಲ್ಲದೇ ನಾನು ಚರ್ಚೆ ಮಾಡುತ್ತೇನೆ, ಜತೆಗೆ ನೀವು ಮಾಡರೋ ಅಭಿವೃದ್ಧಿ ಕುರಿತು ಬಗ್ಗೆಯೂ ಮಾತಾಡೋಣ ಎಂದು ತಿರುಗೇಟು ನೀಡಿದ್ದರು.

ಇನ್ನು 40 ವರ್ಷಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಹಾವೇರಿ-ಗದಗ ಕ್ಷೇತ್ರ ಸದ್ಯ ಕೇಸರಿ ಪಾಲಾಗಿದೆ‌. ಹೀಗಾಗಿ ಈ ಬಾರಿ ಕೇಸರಿ ಕೋಟೆ ಕೆಡವಿ ಕೈ ಕೋಟೆ ಕಟ್ಟಲು ಕಾಂಗ್ರೆಸ್​ ನಾಯಕರು ತಂತ್ರ ರೂಪಿಸಿದ್ಧಾರೆ. ಕಾಂಗ್ರೆಸ್​ ಅಭ್ಯರ್ಥಿ ಪರವಾಗಿ ಗೌಡ್ತಿಯರೇ ಪ್ರಚಾರಕ್ಕೆ ಮುಂದಾಗಿದ್ದು, ಜಿಲ್ಲಾದ್ಯಂತ ಮನೆ ಮನೆಗೆ ತೆರಳಿ ಮಹಿಳೆಯರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಇನ್ನು ಎಚ್​​.ಕೆ ಪಾಟೀಲರ ಈ ತಂತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಆದರಿಂದಲೇ ಜಿಲ್ಲೆಯ ಜನತೆಯಲ್ಲಿ ಈ ಬಾರಿ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಗೌಡ್ತಿಯರು ಕೇವಲ ಮತ ಕೇಳದೆ ಸ್ಥಳೀಯ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಿದ್ಧಾರೆ. ನಿಮ್ಮ ಸಮಸ್ಯೆಗಳಿಗೆ ನಾವು ಸ್ಪಂದಿಸುತ್ತೇವೆ ಎಂದು ಹೇಳುತ್ತಿದ್ಧಾರೆ.

ಕಾಂಗ್ರೆಸ್​​ ಮತ್ತು ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಏನೋ ಮಾಡುತ್ತಿದ್ದಾರೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಮತದಾರ ಪ್ರಭು ಯಾರಿಗೆ ಮತ ನೀಡಿ ಗೆಲ್ಲಿಸುತ್ತಾರೆ ಎಂದು ಕಾದು ನೋಡಬೇಕಿದೆ.

Comments are closed.