ರಾಷ್ಟ್ರೀಯ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿಲ್ಲ- ಶರದ್ ಪವಾರ್

Pinterest LinkedIn Tumblr


ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ.ಆದರೆ ಅದು ಪ್ರಧಾನಿ ನರೇಂದ್ರ ಮೋದಿ ಎರಡನೇ ಭಾರಿಗೆ ಪ್ರಧಾನಿಯಾಗುವ ಸಾಧ್ಯತೆಯಲ್ಲ ಎಂದು ಎನ್ಸಿಪಿ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಹೇಳಿದರು.

“ಬಿಜೆಪಿ ಸ್ಪಷ್ಟವಾದ ಬಹುಮತವನ್ನು ಪಡೆಯದಿದ್ದಲ್ಲಿ, ಅವರು ತಮ್ಮದೇ ಆದ ಸರ್ಕಾರವನ್ನು ರಚಿಸುವುದಿಲ್ಲ ಎನ್ನುವ ಖಾತ್ರಿಯಿದೆ. ಈ ಪರಿಸ್ಥಿತಿಯಲ್ಲಿ ಬೇರೆ ಯಾರಾದರೂ ಸರ್ಕಾರದ ರಚಿಸುವ ಸಾಧ್ಯತೆಯಿದೆ.ಒಂದು ವೇಳೆ ಬಿಜೆಪಿ ಇತರ ಪಕ್ಷಗಳ ಸಹಾಯದಿಂದ ಸರ್ಕಾರ ರಚಿಸುವ ಸನ್ನಿವೇಶ ಎದುರಾದರೆ ನರೇಂದ್ರ ಮೋದಿ ಹೊರತುಪಡಿಸಿ ಬೇರೆಯವರು ನಾಯಕರಾಗಿರುತ್ತಾರೆ ಎಂದು ಪವಾರ್ ತಿಳಿಸಿದರು.

ಮೋದಿ ಅವರನ್ನು ಸೋಲಿಸಲು ಗ್ರಾಮೀಣ ಭಾರತ ಪ್ರಾಯೋಗಿಕವಾಗಿ ಕಾರ್ಯನಿರತವಾಗಿದೆ, ಅವರು ಮೋದಿ ಸರಕಾರಕ್ಕೆ ವಿರುದ್ಧವಾಗಿದ್ದಾರೆ ಮತ್ತು ಅತೃಪ್ತಿ ಹೊಂದಿದ್ದಾರೆ” ಎಂದು ಪವಾರ್ ಭವಿಷ್ಯ ನುಡಿದಿದ್ದಾರೆ.ಇತ್ತೀಚಿಗಷ್ಟೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದಿಂದ ಶರದ್ ಪವಾರ ಹಿಂದೆ ಸರಿದು ಪಾರ್ಥ್ ಪವಾರ್ ಗೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಈ ನಡೆಯನ್ನು ಕೆಲವರು ಕೌಟುಂಬಿಕ ಕಲಹ ಎಂದೇ ಬಿಂಬಿಸಿದ್ದರು.

Comments are closed.