ರಾಷ್ಟ್ರೀಯ

ರಾಜಕೀಯಕ್ಕೆ ಸೇರಿದರೆ 2024ರಲ್ಲಿ ವಡೋದರಾದಿಂದ ಸ್ಪರ್ಧೆ: ನಟ ವಿವೇಕ್ ಒಬೆರಾಯ್

Pinterest LinkedIn Tumblr


ನವದೆಹಲಿ: ತಮ್ಮ ರಾಜಕೀಯ ಆಕಾಂಕ್ಷೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದ ಬಾಲಿವುಡ್ ನಟ ವಿವೇಕ್ ಒಬೆರಾಯ್ ಒಂದು ವೇಳೆ ರಾಜಕೀಯ ಸೇರಿದರೆ 2024ರಲ್ಲಿ ಗುಜರಾತಿನಿಂದ ಸ್ಪರ್ಧಿಸಲು ತಾವು ಚಿಂತನೆ ನಡೆಸಿರುವುದಾಗಿ ಹೇಳಿದರು.

“ಒಂದು ವೇಳೆ ನಾನು ರಾಜಕೀಯಕ್ಕೆ ಸೇರಿದರೆ, ನಾನು ವಡೋದರಾದಿಂದ ಸ್ಪರ್ಧಿಸಲು ಇಚ್ಚಿಸುತ್ತೇನೆ. ಏಕೆಂದರೆ ಇಲ್ಲಿ ನರೇಂದ್ರ ಮೋದಿ ಸ್ಪರ್ಧಿಸಿದಾಗ ಇಲ್ಲಿನ ಜನರು ತೋರಿಸಿದ ಪ್ರೀತಿ ಮತ್ತು ವಿಶ್ವಾಸ ಅನೂನ್ಯವಾದುದು “ಎಂದು ಒಬೆರಾಯ್ ಹೇಳಿದರು.

ವಿವೇಕ್ ಒಬೆರಾಯ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕುರಿತ ಚಿತ್ರದಲ್ಲಿ ಮೋದಿಯವರ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಈ ಚಿತ್ರದ ಪ್ರಚಾರಕ್ಕಾಗಿ ಪಾರುಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಿರುವ ಸಂದರ್ಭದಲ್ಲಿ ಒಬೆರಾಯ್ ಅವರು ಈ ಹೇಳಿಕೆ ನೀಡಿದರು.

ಇದೆ ವೇಳೆ ಈ ಚಿತ್ರದ ಕುರಿತು ಮಾತನಾಡಿದ ಅವರು “ಇದು ನಿಜಕ್ಕೂ ಸ್ಪೂರ್ತಿದಾಯಕ ಸಿನಿಮಾ ಯಾವುದೇ ಜಾತಿ ರಾಜಕಾರಣದ ಬೆಂಬಲವಿಲ್ಲದೆ ಜಗತ್ತಿನ ನಾಯಕನಾದ ವ್ಯಕ್ತಿಯ ಕಥೆ” ಎಂದರು. ಶುಕ್ರವಾರದಂದು ಈ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಲೋಕಸಭಾ ಚುನಾವಣೆ ಮುಗಿಯುವವರೆಗೆ ಈ ಚಿತ್ರದ ಬಿಡುಗಡೆಯನ್ನು ಮುಂದೂಡಬೇಕು. ಏಕೆಂದರೆ ಈ ಚಿತ್ರವೂ ಮತದಾರರ ಮೇಲೆ ಪ್ರಭಾವ ಬೀರಲಿದೆ ಎಂದು ಅರ್ಜಿದಾರರು ವಾದಿಸಿದ್ದರು.

Comments are closed.