ಕರ್ನಾಟಕ

ಸಂತೆಗೂ ಬಂದ ರೇವಣ್ಣನ ನಿಂಬೆಹಣ್ಣು

Pinterest LinkedIn Tumblr


ಮಂಡ್ಯ: ಬನ್ರೀ, ತಕಳ್ರೀ ನಾಟಿ ನಿಂಬೆಹಣ್ಣು, ರೇವಣ್ಣನ ನಿಂಬೆಹಣ್ಣು, 10 ರೂಪಾಯಿಗೆ ಮೂರು-ನಾಲ್ಕು ಎಂದು ನಿನ್ನೆ ವ್ಯಾಪಾರಿಯೊಬ್ಬ ಕೂಗುತ್ತ ನಿಂಬೆಹಣ್ಣು ಮಾಡುತ್ತಿದ್ದ ವಿಡಿಯೋ ವೈರಲ್​ ಆಗಿದೆ.

ರೇವಣ್ಣನವರು ಕೈತುಂಬ ನಿಂಬೆ ಹಣ್ಣು ಹಿಡಿದು ಕಾರ್ಯಕರ್ತರ ಸಭೆಗೆ ಬಂದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಆಗುತ್ತಿದ್ದಾರೆ. ಅಲ್ಲದೆ ಹಲವು ಕಾರ್ಟೂನ್​ಗಳನ್ನೂ ರಚಿಸಿ ವ್ಯಂಗ್ಯವಾಡಲಾಗಿದೆ. ಇದೀಗ ಏ.5ರಂದು ಮಂಡ್ಯದ ಶ್ರೀರಂಗಪಟ್ಟನದಲ್ಲಿ ನಡೆದ ಸಂತೆಯಲ್ಲಿ ನಿಂಬೆಹಣ್ಣು ವ್ಯಾಪಾರಿಯೊಬ್ಬ ಗ್ರಾಹಕರನ್ನು ಸೆಳೆಯುತ್ತಿದ್ದ ರೀತಿ ವಿಭಿನ್ನವಾಗಿತ್ತು. ಬನ್ನಿ, ರೇವಣ್ಣನವರ ನಿಂಬೆಹಣ್ಣು ತೆಗೆದುಕೊಳ್ಳಿ ಎಂದು ಕೂಗುತ್ತಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

Comments are closed.