ಮನೋರಂಜನೆ

ಬಾಲಿವುಡ್ ಗೆ ಕನ್ನಡದ ಕಿರಿಕ್ ಪಾರ್ಟಿ ರಿಮೇಕ್: ಕರ್ಣನ ಪಾತ್ರದಲ್ಲಿ ಮಿಂಚಲು ನಟ ರೆಡಿ

Pinterest LinkedIn Tumblr


ಮುಂಬೈ: 2016ರಲ್ಲಿ ತೆರೆಕಂಡು ಇಡೀ ಚಂದನವನದಲ್ಲಿ ಹೊಸ ದಾಖಲೆಯನ್ನು ಬರೆದ ಸಿನಿಮಾ ಕಿರಿಕ್ ಪಾರ್ಟಿ. ಸಿನಿಮಾ ಬಿಡುಗಡೆಗೊಂಡು ಎರಡು ವರ್ಷಗಳೇ ಕಳೆದಿವೆ. ಆದ್ರೂ ಇಂದಿಗೂ ಸಿನಿಮಾದ ಹಾಡುಗಳು ಅಚ್ಚಳಿಯದೇ ಉಳಿದುಕೊಂಡಿದೆ. ಕಿರಿಕ್ ಪಾರ್ಟಿ ಹಿಂದಿಗೆ ರಿಮೇಕ್ ಆಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ರಕ್ಷಿತ್ ಶೆಟ್ಟಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟ ಯಾರೆಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

‘ಸೋನು ಕೇ ಟಿಟು ಸ್ವೀಟ್’ ಬಳಿಕ ಲುಕಾ ಚುಪ್ಪಿ ಸಿನಿಮಾದ ಮೂಲಕ ತನ್ನ ಹೆಜ್ಜೆ ಗುರುತು ಮೂಡಿಸಿರುವ ಕಾರ್ತಿಕ್ ಆರ್ಯನ್ ಹಿಂದಿಯ ಕಿರಿಕ್ ಪಾರ್ಟಿ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ. ಹಿಂದಿಯಲ್ಲಿ ಅಭಿಷೇಕ್ ಜೈನ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಕನ್ನಡ ಭಾಷೆಯಂತೆ ಸ್ಕ್ರಿಪ್ಟ್ಸ್ ಸಿದ್ಧಗೊಳಿಸಲು ಅಭಿಷೇಕ್ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಕನ್ನಡದಂತೆ ಪ್ರತಿಯೊಂದು ಸಂಭಾಷಣೆಯಲ್ಲಿ ಕಾಮಿಡಿ ಕಚಗುಳಿ ತರಲು ನಿರ್ದೇಶಕರೂ ಪ್ರಯತ್ನಿಸುತ್ತಿದ್ದಾರೆ.

ಕಾರ್ತಿಕ್ ಆರ್ಯನ್ ಸದ್ಯ ‘ಇಮ್ತಿಯಾಜ್’ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ, ದೆಹಲಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಸಾರಾ ಅಲಿಖಾನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಿರಿಕ್ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ ಸಾನ್ವಿ ಪಾತ್ರಕ್ಕೆ ಜಾಕ್ವೇಲಿನ್ ಫರ್ನಾಂಡೀಸ್ ಹೆಸರು ಕೇಳಿ ಬರುತ್ತಿದೆ.

Comments are closed.