ಮನೋರಂಜನೆ

ಮದುವಣಗಿತ್ತಿಯಾದ ವಿಶ್ವ ಸುಂದರಿ ಮಾನುಷಿ ಚಿಲ್ಲರ್

Pinterest LinkedIn Tumblr


ಮುಂಬೈ: 2017ರಲ್ಲಿ ವಿಶ್ವ ಸುಂದರಿ ಪಟ್ಟವನ್ನು ಗೆದ್ದ ಮಾನುಷಿ ಚಿಲ್ಲರ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಫೋಟೋದಲ್ಲಿ ಮಾನುಷಿ ಮದುಮಗಳಾಗಿ ಮಿಂಚಿದ್ದಾರೆ.

ಮಾನುಷಿ ಸಬ್ಯಾಸಾಚಿ ವಿನ್ಯಾಸದ ಡಿಸೈನರ್ ಲೆಹೆಂಗಾ ಧರಿಸಿ ಡೆಸ್ಟಿನೇಶನ್ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಸಮುದ್ರದ ದಡದಲ್ಲಿ ಹೂಗಳಿಂದ ಅಲಂಕಾರ ಮಾಡಿದ ಸೈಕಲ್ ಬಳಿ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ಸುಂದರವಾದ ಲೆಹೆಂಗಾಗೆ ಮಾನುಷಿ ಡೀಪ್ ನೆಕ್ ಗೋಲ್ಡನ್ ಬ್ಲೌಸ್ ಧರಿಸಿ ಮಿಂಚಿದ್ದರು.

ಮತ್ತೊಂದು ಫೋಟೋದಲ್ಲಿ ಮಾನುಷಿ, ಪಿಂಕ್ ಕಲರ್ ಫ್ಲೋರಲ್ ಲಾಂಗ್ ಥೈ ಸಿಲ್ಟ್ ಉಡುಪು ಧರಿಸಿದ್ದಾರೆ. ಈ ಉಡುಪಿಗೆ ಅವರು ಸಬ್ಯಾಸಾಚಿ ವಿನ್ಯಾಸ ಮಾಡಿದ ಎಂಬ್ರಾಡೈರಿ ಬೆಲ್ಟ್ ಕೂಡ ಹಾಕಿದ್ದಾರೆ. ಸದ್ಯ ಮಾನುಷಿ ಅವರ ಈ ಲುಕ್‍ಗೆ ಜನರು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ಮಾನುಷಿ ಅವರ ಮದುಮಗಳ ಲುಕ್‍ಗೆ ಎಲ್ಲರೂ ಫಿದಾ ಆಗಿದ್ದರು. ಆದರೆ ಅವರು ಥೈ ಸಿಲ್ಟ್ ಉಡುಪು ಧರಿಸಿ ಫೋಟೋಶೂಟ್ ಮಾಡಿಸಿದ್ದು, ಜನರಿಗೆ ಇಷ್ಟವಾಗಿಲ್ಲ. ಹಾಗಾಗಿ ಜನರು ನೀವು ಪ್ಯಾಂಟ್ ಹಾಕಲು ಮರೆತಿದ್ದೀರಾ ಎಂದು ಪ್ರಶ್ನಿಸುವ ಮೂಲಕ ಅವರನ್ನು ಟ್ರೋಲ್ ಮಾಡಿದ್ದಾರೆ.

2017ರಲ್ಲಿ ಚೀನಾದ ಸನ್ಯಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ 108 ದೇಶಗಳ ಸುಂದರಿಯರನ್ನು ಹಿಂದಿಕ್ಕುವ ಮೂಲಕ ಮಾನುಷಿ ಮಿಸ್ ವಲ್ರ್ಡ್ ಆಗಿದ್ದರು. ಮಿಸ್ ಇಂಗ್ಲೆಂಡ್ ಸ್ಟೆಫನಿ ಹಿಲ್ ಮೊದಲ ರನ್ನರ್ ಅಪ್ ಆದರೆ, ಮೆಕ್ಸಿಕೋ ಸುಂದರಿ ಆಂಡ್ರೆಜಾ ಮೆಜಾ ಎರಡನೇ ರನ್ನರ್ ಅಪ್ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದರು.

Comments are closed.