ಕರ್ನಾಟಕ

ತಮ್ಮ ಪಾದಗಳಿಗೆ ನಮಸ್ಕಾರ…. ದಯವಿಟ್ಟು ವೋಟ್ ಮಾಡಿ: ನಟ ದರ್ಶನ್ 

Pinterest LinkedIn Tumblr


ಮಂಡ್ಯ: ತಮ್ಮ ಪಾದಗಳಿಗೆ ನಮಸ್ಕಾರ ದಯವಿಟ್ಟು ವೋಟ್ ಮಾಡಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಜನರಲ್ಲಿ ಮನವಿ ಮಾಡಿಕೊಂಡರು.

ಇಂದು ಮಂಡ್ಯದಲ್ಲಿ ದರ್ಶನ್ ಪ್ರಚಾರ ಆರಂಭಿಸಿದ್ದಾರೆ. ಈ ವೇಳೆ ಅವರು “ಸುಮಲತಾ ಎ ನೆನಪಿರಲಿ” ಅಂತ ಪದೇ ಪದೇ ಒತ್ತಿ ಹೇಳಿದರು. ಅಲ್ಲದೆ ತಮ್ಮ ಪಾದಗಳಿಗೆ ನಮಸ್ಕಾರ ಮಾಡುತ್ತೇನೆ ದಯವಿಟ್ಟು ವೋಟ್ ಮಾಡಿ ಎಂದು ದರ್ಶನ್ ಮನವಿ ಮಾಡಿಕೊಂಡರು. ವಯಸ್ಸಾದವರನ್ನು ಕರೆದು ಕೊಂಡು ಹೋಗಿ ಸುಮಲತಾ ಅವರಿಗೆ ವೋಟು ಮಾಡುವಂತೆ ದರ್ಶನ್ ಹೇಳಿದರು. ಪ್ರಚಾರದ ವೇಳೆ ದರ್ಶನ್ ಸ್ಥಳೀಯ ಮುಖಂಡನನ್ನು ಗಾಡಿಗೆ ಹತ್ತಿಸಿಕೊಂಡರು. ಬಳಿಕ ವಿಡಿಯೋ ಕಾಲ್ ಮೂಲಕ ತನ್ನ ಅಭಿಮಾನಿಯ ಜೊತೆ ಮಾತನಾಡಿದರು.

ದರ್ಶನ್ ಪ್ರಚಾರದ ವೇಳೆ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಹೆಸರು ಬಳಸಿದರು. ಚಿತ್ರರಂಗದಲ್ಲಿ ಈ ನಾಲ್ಕು ದಿಗ್ಗಜರ ಹೆಸರು ಮರೆಯುವ ಹಾಗಿಲ್ಲ. ಈ ಪಟ್ಟಿಯಲ್ಲಿ ಅಪ್ಪಾಜೀ ಅಂಬರೀಶ್ ಅವರ ಹೆಸರು ಕೂಡ ಇದೆ. ದಯಮಾಡಿ ಅಂಬರೀಶ್ ಅವರಿಗಾಗಿ ಸುಮಮ್ಮನಿಗೆ ವೋಟ್ ಮಾಡಿ ಎಂದು ಕೇಳಿಕೊಂಡರು.

ಕೆಆರ್‍ಎಸ್ ಅರಳಿಕಟ್ಟೆಗೆ ದರ್ಶನ್ ಆಗಮಿಸಿದಾಗ ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ದರ್ಶನ್, ರೆಬಲ್ ಸ್ಟಾರ್ ಅಂಬರೀಶ್ ಅವರ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಸುಮಲತಾ ಪರ ಪ್ರಚಾರವನ್ನು ಆರಂಭಿಸಿದರು.

Comments are closed.