ಕರ್ನಾಟಕ

ಮಂಡ್ಯದಲ್ಲಿ ಸುಮಲತಾ ಪರ ಮತ್ತೆ ಪ್ರಚಾರ ಕಣಕ್ಕಿಳಿಯಲಿರುವ ನಟ ದರ್ಶನ್-ಯಶ್

Pinterest LinkedIn Tumblr

ಮಂಡ್ಯ: ಹೈ ವೋಲ್ಟೆಟ್ ಕಣವಾಗಿ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಮುಂದಿನ ತಿಂಗಳು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಪ್ರಚಾರಕ್ಕೆ ಧಮುಕ್ಕಲಿದ್ದು, ಪ್ರಚಾರದ ಕಣ ಮತ್ತಷ್ಟು ರಂಗುಪಡೆದುಕೊಳ್ಳಲಿದೆ.

ಸ್ಟಾರ್ ನಟರ ಪ್ರಚಾರದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 2 ರಿಂದ ಏ. 15 ರ ತನಕ ಸುಮಲತಾ ಪರ ಪ್ರಚಾರದ ಕಣಕ್ಕಿಳಿಯಲಿರುವ ದರ್ಶನ್, ಹಾಗೂ ಯಶ್, ಪ್ರತ್ಯೇಕವಾಗಿ ಪ್ರಚಾರ ಹಾಗೂ ರೋಡ್ ಶೋ ನಡೆಸಲಿದ್ದಾರೆ.
ಏಪ್ರಿಲ್ 16 ರಂದು ಚುನಾವಣಾ ಪ್ರಚಾರದ ಕಡೆಯ ದಿನವಾಗಿದ್ದು, ಆ ದಿನ ಮಂಡ್ಯ ನಗರದಲ್ಲಿ ಬೃಹತ್ ಸಮಾವೇಶ ನಡೆಸಿ ಸುಮಲತಾ ಅಂಬರೀಷ್ ಪರ ಶಕ್ತಿ ಪ್ರದರ್ಶನ ಮಾಡಲು ಯೋಜನೆ ರೂಪಿಸಿದ್ದಾರೆ.

ಜೆಡಿಎಸ್ ಪ್ರಚಾರಕ್ಕೆ ಸೆಡ್ಡು ಹೊಡೆಯಲು ಮೂವರು ಪ್ರತ್ಯೇಕವಾಗಿ ಪ್ರಚಾರ, ರೋಡ್ ಶೋ ನಡೆಸಲು ಮುಂದಾಗಿದ್ದು, ಒಟ್ಟು 13 ದಿನ ಸಕ್ಕರೆ ನಾಡಲ್ಲಿ ಭರ್ಜರಿ ಪ್ರಚಾರ ನಡೆಸಲು ಸ್ಯಾಂಡಲ್ ವುಡ್ ಸ್ಟಾರ್ ಗಳನ್ನು ಹೊಂದಾಗಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ

Comments are closed.