ಕರ್ನಾಟಕ

‘ಐಪಿಎಲ್‘ ಪಂದ್ಯ​ ವೀಕ್ಷಣೆಗೆ ಬಿಎಸ್​ಎನ್​ಎಲ್​ ಉಚಿತ ಡೇಟಾ!

Pinterest LinkedIn Tumblr


ಇಂಡಿಯನ್​ ಪ್ರೀಮಿಯರ್​ ಲೀಗ್ (ಐಪಿಎಲ್​) ಪಂದ್ಯಾಟ​ ಆರಂಭವಾಗಿದೆ. ಈಗಾಗಲೇ ಮೊದಲ ಸಮರದಲ್ಲಿ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಮತ್ತು ಚೆನೈ ನಡುವಿನ ಜಿದ್ದಾ ಜಿದ್ದಿಯು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಐಪಿಎಲ್​ ಪಂದ್ಯ ವೀಕ್ಷಿಸುತ್ತಿರುವ ಕ್ರಿಕೆಟ್​ ಪ್ರೇಮಿಗಳಿಗಾಗಿ ಭಾರತ ಸರ್ಕಾರದ ಸಾಮ್ಯದಲ್ಲಿರುವ ಬಿಎಸ್​ಎನ್​ಎಲ್​ ಸಂಸ್ಥೆ ಹೊಸ ಅನ್ನು ಪ್ಲಾನ್​ ವಿತರಣೆ ಮಾಡಿದೆ.

ಮೊದಲ ಪಂದ್ಯವಾದ ರಾಯಲ್​ ಚಾಲೆಜಂರ್ಸ್​ ಬೆಂಗಳೂರು ಮತ್ತು ಚೆನೈ ಸೂಪರ್​ ಕಿಂಗ್​ ಪಂದ್ಯವನ್ನು ವೀಕ್ಷಿಸುವ ಸಲುವಾಗಿ ಬಿಎಸ್​ಎನ್​ಎಲ್​ ಸಂಸ್ಥೆ ಕ್ರಿಕೆಟ್​ ಪ್ರೇಮಿಗಳಿಗೆ ಉಚಿತ ಡೇಟಾ ಮತ್ತು ಉಚಿತ ಕರೆಯನ್ನು ಒಳಗೊಂಡ ಎರಡು ಭರ್ಜರಿ ಪ್ಲಾನ್​ ಅನ್ನು ಬಿಡುಗಡೆ ಮಾಡಿದೆ. 149 ರೂ ಮತ್ತು 499 ರೂ.ಗಳ ದರದಲ್ಲಿ ಉಚಿತ ಪ್ಲಾನ್​ಗಳು ಲಭ್ಯವಾಗಲಿದೆ.

ಐಪಿಎಲ್​ ಎಸ್​ಎಮ್​ಎಸ್​ ಅಲರ್ಟ್​

ಐಪಿಎಲ್​ ಪಂದ್ಯಾವಳಿಯ ಕ್ಷಣ ಕ್ಷಣದ ಮಾಹಿತಿಗಾಗಿ ಬಿಎಸ್​ಎನ್​ಎಲ್​ ನೀಡುತ್ತಿರುವ ಹೊಸ ಪ್ಲಾನ್​ನಲ್ಲಿ ಉಚಿತ ಎಸ್​ಎಮ್​ಎಸ್​ ಅಲರ್ಟ್​ ಸೌಲಭ್ಯ ನೀಡಿದೆ. ಈ ಹೊಸ ಪ್ಲಾನ್​ ಹಾಕಿಸಿಕೊಳ್ಳುವ ಗ್ರಾಹಕರು ಎಸ್​​ಎಮ್​ಎಸ್​ ಮೂಲಕ ಐಪಿಎಲ್ ಪ್ರತಿ ಪಂದ್ಯದ ಕ್ರಿಕೆಟ್​ ಮಾಹಿತಿಯನ್ನು ಪಡೆಯಬಹುದು.

ಉಚಿತ ಡೇಟಾ ಪ್ಲಾನ್​

ಗ್ರಾಹಕರಿಗಾಗಿ ಬಿಎಸ್​ಎನ್​ಎಲ್​ ನೀಡುತ್ತಿರುವ 149ರೂ​.ಗಳ ಈ ಪ್ಲಾನ್​​ನಲ್ಲಿ ಪ್ರತಿದಿನ 1GB ಡೇಟಾವನ್ನು ಉಚಿತವಾಗಿ ಪಡೆಯಬಹುದು. ಇದರ ಜೊತೆ ಐಪಿಎಲ್​ ಪ್ರತಿ ಪಂದ್ಯಗಳ ಮಾಹಿತಿಯನ್ನು ಎಸ್​ಎಮ್​ಎಸ್​​ ಮೂಲಕ ಪಡೆಯಬಹುದು. ಈ ಪ್ಲಾನ್​ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಐಪಿಎಲ್​ ಪ್ರೇಮಿಗಳಿಗಾಗಿ ಬಿಎಸ್​ಎನ್ಎಲ್​ ನೀಡುತ್ತಿರುವ​ 499 ರೂ.ಗಳ ಪ್ಲಾನ್​ನಲ್ಲಿ ಪ್ರತಿದಿನ 1GB ಡೇಟಾ ಉಚಿತವಾಗಿ ದೊರೆಯಲಿದೆ. ಇದರೊಂದಿಗೆ ಅನಿಯಮಿತ ಕರೆಯ ಸೌಲಭ್ಯವಿದೆ. ಜೊತೆಗೆ ಎಸ್​ಎಮ್​ಎಸ್​ ಅಲರ್ಟ್​ ಸಹ ಪಡೆಯಬಹುದು.

Comments are closed.