ಇಸ್ಲಮಾಬಾದ್: ತಪ್ಪು ಮಾಡಿದರೇ ಮನುಷ್ಯರಿಗೆ ಶಿಕ್ಷೆ ಕೊಡುತ್ತಾರೆ, ಬಂಧನದಲ್ಲಿ ಇಡುತ್ತಾರೆ. ಆದ್ರೆ ಪಾಕಿಸ್ತಾನದಲ್ಲಿ ಒಂದು ಆಲದ ಮರಕ್ಕೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಸುಮಾರು 121 ವರ್ಷದಿಂದ ಆ ಮರ ಶಿಕ್ಷೆ ಅನುಭವಿಸುತ್ತಿದೆ.
ಹೌದು, ವಿಚಿತ್ರ ಅನಿಸಿದರೂ ಇದು ಸತ್ಯ. ಪಾಕಿಸ್ತಾನದ ಖೆಬರ್ ಏಜೆನ್ಸಿಯಲ್ಲಿರುವ ಆಲದ ಮರಕ್ಕೆ ಶತಮಾನದ ಹಿಂದೆ ಇದ್ದ ಒಬ್ಬ ಬ್ರಿಟಿಷ್ ಅಧಿಕಾರಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಬ್ರಿಟಿಷ್ ಸೇನಾಧಿಕಾರಿ ಮಾಡಿದ ಎಡವಟ್ಟಿನಿಂದ ಇಂದಿಗೂ ಆ ಆಲದ ಮರಕ್ಕೆ ಸರಪಳಿಗಳನ್ನು ಕಟ್ಟಿ ಬಂಧಿಸಿಡಲಾಗಿದೆ. ಸುಮಾರು 121 ವರ್ಷಗಳಿಂದ ಈ ಮರವನ್ನು ಬಂಧಿಸಿಡಲಾಗಿದ್ದು, ಅದರ ಮುಂದೆ “ಐ ಯಮ್ ಅಂಡರ್ ಅರೆಸ್ಟ್” ಎಂಬ ಬೋರ್ಡ್ ನ್ನು ಕೂಡ ನೇತು ಹಾಕಲಾಗಿದೆ.
ಇದನ್ನು ನೋಡಿದಾಗ ವಿಚಿತ್ರ ಅನಿಸೋದು ಸಾಮಾನ್ಯ. ತಪ್ಪು ಮಾಡಿದ ಮನುಷ್ಯರಿಗೆ ಜೀವಾವಧಿ ಶಿಕ್ಷೆ ನೀಡುತ್ತಾರೆ. ಆದ್ರೆ ಯಾವ ತಪ್ಪಿಗೆ ಮರಕ್ಕೆ ಈ ಶಿಕ್ಷೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. 1898ನೇ ವರ್ಷದಲ್ಲಿ ಈ ಮರ ಇನ್ನೂ ಗಿಡವಾಗಿತ್ತು. ಆಗ ಜೇಮ್ಸ್ ಸಕ್ವಿಡ್ ಎಂಬ ಬ್ರಿಟಿಷ್ ಸೈನ್ಯಾಧಿಕಾರಿ ಒಂದು ದಿನ ಕುಡಿದ ನಶೆಯಲ್ಲಿ ಗಿಡದ ಮುಂದು ಹೋಗುತ್ತಿದ್ದಾಗ, ಆತನಿಗೆ ಗಿಡ ತನ್ನ ಕಡೆಗೆ ನಡೆದು ಬರುತ್ತಿದಂತೆ ಕಾಣಿಸಿದೆ. ಆದರಿಂದ ತನ್ನ ಮೇಲೆ ಈ ಗಿಡ ದಾಳಿ ಮಾಡಲು ಯತ್ನಿಸುತ್ತಿದೆ ಎಂದು ತಕ್ಷಣ ಅದನ್ನು ಬಂಧಿಸಿ ಅಂತ ಸೈನಿಕರಿಗೆ ಆದೇಶಿಸಿದ. ಆದರಿಂದ ಅಂದಿನಿಂದಲೂ ಈ ಮರ ಪಾಕ್ ಸೇನಾ ಕಂಟೋನ್ಮೆಂಟ್‍ನಲ್ಲಿ ಬಂಧನದಲ್ಲಿದೆ.
ಕಬ್ಬಿಣದ ಸರಪಳಿಗಳಿಂದ ಮರವನ್ನು ಬಂಧಿಸಿಟ್ಟಿರುವುದನ್ನು ನೋಡಿದ ಜನರು ಇದು ತುಂಬಾ ಅನ್ಯಾಯ, ಆ ಮರಕ್ಕೆ ಬಿಡುಗಡೆ ಕೊಡಿ ಎಂದು ಪಾಕ್ ಸೇನಾ ಕಂಟೋನ್ಮೆಂಟ್‍ನಲ್ಲಿರುವ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಆದರೆ ಅಲ್ಲಿನ ಅಧಿಕಾರಿಗಳು ಮಾತ್ರ ಬ್ರಿಟಿಷ್ ಅಧಿಕಾರಿಯ ಮೂರ್ಖತನದ ಸಾಕ್ಷಿಯಾನ್ನಾಗಿ ಅದನ್ನು ಹಾಗೆಯೇ ಬಂಧನದಲ್ಲಿ ಇಟ್ಟಿದ್ದಾರೆ.
Comments are closed.