ಕರ್ನಾಟಕ

ಬಹುತೇಕ ಅಂತಿಮವಾಗಿರುವ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧ?

Pinterest LinkedIn Tumblr


ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಎಲ್ಲ ಪಕ್ಷಗಳ ಅಭ್ಯರ್ಥಿ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿದ್ದು, ಇನೇನು ಅಧಿಕೃತವಾಗಿ ಬಿಡುಗಡೆಗೊಳಿಸಲಿವೆ. ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್​ ಕೂಡ ಅಭ್ಯರ್ಥಿ ಪಟ್ಟಿ ಸಿದ್ಧ ಮಾಡಿದೆ. ಕೆಲ ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ತುಮಕೂರು ಕ್ಷೇತ್ರವನ್ನು ಖಾಲಿ ಬಿಡಲಾಗಿದ್ದು, ದೇವೇಗೌಡರ ನಿರ್ಧಾರದ ಮೇಲೆ ಈ ಕ್ಷೇತ್ರದಿಂದ ಅಭ್ಯರ್ಥಿ ಹಾಕಲಾಗುತ್ತದೆ. ಸಂಭಾವ್ಯರ ಪಟ್ಟಿಯಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಬಿ.ಕೆ‌ ಹರಿಪ್ರಸಾದ್, ರೋಷನ್ ಬೇಗ್ ಗೆ ಭಾರೀ ಮುಖಭಂಗವಾಗಿದೆ.

ಕೋಲಾರದಲ್ಲಿ ಮುನಿಯಪ್ಪಗೆ ಟಿಕೆಟ್ ನೀಡದಂತೆ ಶಾಸಕರಾದ ರಮೇಶ್ ಕುಮಾರ್, ನಾರಾಯಣಸ್ವಾಮಿ ಸೇರಿ ಇತರ ಜಿಲ್ಲಾ ಮುಖುಂಡರು ವಿರೋಧಿಸಿದ್ದರು. ಆದರೂ ಮುನಿಯಪ್ಪ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಗೆ ದಕ್ಷಿಣ ಕನ್ನಡದಲ್ಲಿ ಮಾಜಿ ಸಚಿವ ರಮಾನಾಥ್ ರೈ, ವಿನಯಕುಮಾರ್ ಸೊರಕೆ, ರಾಜೇಂದ್ರಕುಮಾರ್, ಬಿ.ಕೆ. ಹರಿಪ್ರಸಾದ್ ನಡುವೆ ಪೈಪೋಟಿ ಇತ್ತು. ಆದರೆ, ಇವರನ್ನು ಹೊರತುಪಡಿಸಿ, ಕೈ ಹೈಕಮಾಂಡ್ ಮಿಥುನ್ ರೈಗೆ ಮಣೆ ಹಾಕಿದೆ.

ಬೆಂಗಳೂರು ಸೆಂಟ್ರಲ್ ನಿಂದ ರೋಷನ್ ಬೇಗ್ ಟಿಕೆಟ್​ಗಾಗಿ ಪ್ರಯತ್ನ ನಡೆಸಿದ್ದರು. ಮಾಜಿ ಸಚಿವ ರಾಮಲಿಂಗಾರೆಡ್ಡಿಯಿಂದಲೂ ರೋಷನ್ ಬೇಗ್ ಪರ ಲಾಬಿ ನಡೆದಿತ್ತು. ಕೊನೆಗೆ ರಿಜ್ವಾನ್​ ಅರ್ಷದ್​ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್​ ಸಂಭಾವ್ಯ ಪಟ್ಟಿ
ಬೀದರ್​- ಈಶ್ವರ್ ಖಂಡ್ರೆ
ದಾವಣಗೆರೆ- ಶಾಮನೂರು ಶಿವಶಂಕರಪ್ಪ
ಬೆಂ- ದಕ್ಷಿಣ – ಗೋವಿಂದರಾಜ್
ಕೊಪ್ಪಳ- ರಾಜಶೇಖರ ಹಿಟ್ನಾಳ್ (ಸಿದ್ದ ಆಪ್ತ)
ಬಾಗಲಕೋಟೆ- ವೀಣಾ ಕಾಶಪ್ಪನವರ್
ತುಮಕೂರು- ಖಾಲಿ
ಧಾರವಾಡ – ಶಾಕಿರ್ ಸನದಿ/ ಸದಾನಂದ ಡಂಗಣ್ಣನವರ್
ದಕ್ಷಿಣ ಕನ್ನಡ – ಮಿಥುನ್‌ ರೈ
ಬೆಳಗಾವಿ- ಸಾದನವರ್
ಹಾವೇರಿ- ಡಿ.ಆರ್. ಪಾಟೀಲ್
ಮೈಸೂರು- ಸಿ.ಎಚ್. ವಿಜಯಶಂಕರ್
ಬೆಂಗಳೂರು ಸೆಂಟ್ರಲ್ – ರಿಜ್ವಾನ್ ಹರ್ಷದ್
ಕೋಲಾರ- ಕೆ.ಎಚ್.ಮುನಿಯಪ್ಪ

Comments are closed.