ಕರ್ನಾಟಕ

ಕ್ಯಾಂಟರ್, ಕ್ರೂಸರ್ ಭೀಕರ ಅಪಘಾತ; 9 ಮಂದಿ ಸಾವು

Pinterest LinkedIn Tumblr


ವಿಜಯಪುರ: ಕ್ರೂಸರ್ ಹಾಗೂ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಚಿಕ್ಕಸಿಂದಗಿ ಬಳಿ ಶುಕ್ರವಾರ ಮುಂಜಾನೆ ನಡೆದಿದೆ.

ಘಟನೆಯಲ್ಲಿ ಮೃತಪಟ್ಟವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ಜಿಲ್ಲೆಯವರು ಎಂದು ಪ್ರಾಥಮಿಕ ಮಾಹಿತಿ ತಿಳಿಸಿತ್ತು. ಸಿಂದಗಿ ಮೂಲಕ ವಿಜಯಪುರಕ್ಕೆ ಕ್ಯಾಂಟರ್ ಬರುತ್ತಿದ್ದು, ಗೋವಾದಿಂದ ಪಾರ್ಟಿ ಮುಗಿಸಿ ಕ್ರೂಸರ್ ನಲ್ಲಿ ಬರುತ್ತಿದ್ದಾಗ ಅಪಘಾತ ನಡೆದಿದೆ.

ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 9 ಮಂದಿ ಸಾವನ್ನಪ್ಪಿದ್ದು, ಉಳಿದವರನ್ನು ಸಿಂದಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕ್ರೂಸರ್ ನಲ್ಲಿ ಒಟ್ಟು 9 ಮಂದಿ ಇದ್ದಿದ್ದರು ಎಂದು ವರದಿ ತಿಳಿಸಿದೆ.

ಅಪಘಾತದಲ್ಲಿ ಸಾಗರ್(25), ಚಾಂದಬಾಶಾ(26), ಅಜೀಮ್(25), ಅಂಬರೀಶ್(27), ಶಕೀರ್(28), ಗುರು(32), ಶ್ರೀನಾಥ(ಕ್ರೂಸರ್‌ ಡ್ರೈವರ್ 30), ಯುನೂಸ್(27), ಮಂಗಸಾಬ್(27) ಮೃತಪಟ್ಟಿದ್ದಾರೆ.

Comments are closed.