ರಾಷ್ಟ್ರೀಯ

ಪುಲ್ವಾಮಾ ದಾಳಿ ಸೂತ್ರಧಾರ ಆಪ್ತನನ್ನು ಬಂಧಿಸಿದ ದೆಹಲಿ ಪೊಲೀಸ್

Pinterest LinkedIn Tumblr

ನವದೆಹಲಿ: ಪುಲ್ವಾಮಾ ದಾಳಿಯ ಮುಖ್ಯಸ್ಥ ಮುದಸಿರ್ ಅಹ್ಮದ್ ಖಾನ್ ಅವರ ನಿಕಟವರ್ತಿ ಜೈಶ್ ಎ ಮೊಹಮ್ಮದ್ (ಜೆಎಂ) ಭಯೋತ್ಪಾದಕ ಸಜ್ಜದ್ ಖಾನ್ ನನ್ನು ದೆಹಲಿ ಸ್ಪೆಷಲ್ ಸೆಲ್ ಪೊಲೀಸ್ ಅಧಿಕಾರಿಗಳು ಗುರುವಾರ ರಾತ್ರಿ ಕೆಂಪು ಕೋಟೆ ಪ್ರದೇಶದಲ್ಲಿ ಬಂಧಿಸಿದ್ದಾರೆ.

ಸಜ್ಜದ್ ಗೆ ಪುಲ್ವಾಮಾ ದಾಳಿಯ ಬಗ್ಗೆ ಜ್ಞಾನವಿತ್ತು. ಈತ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟ ಪುಲ್ವಾಮಾ ಮಾಸ್ಟರ್ಮೈಂಡ್ ಮುದಾಸಿರ್ ನೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ಸಜ್ಜದ್ ಖಾನ್ ಮುದಾಸ್ಸಿರ್ – ಅಲಿಯಾಸ್ ಮೊಹದ್ ಭಾಯಿ ಅವರ ಸಹಾಯಕನಾಗಿದ್ದ ಎನ್ನಲಾಗಿದೆ. ಈತ ಈ ತಿಂಗಳ ಆರಂಭದಲ್ಲಿ ಭಾರತೀಯ ಸೇನೆಯಿಂದ ಹೊರಹಾಕಲ್ಪತ್ತಿದ್ದ. ಖಾನ್ ನನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಎನ್ಕೌಂಟರ್ನಲ್ಲಿ ತೆಗೆದುಹಾಕಲಾಯಿತು.

ಪುಲ್ವಾಮಾ ಆತ್ಮಹತ್ಯೆ ಬಾಂಬ್ದಾಳಿ ಮತ್ತು ಸ್ಫೋಟಕಗಳಲ್ಲಿ ಬಳಸಿದ ವ್ಯಾನ್ ಅನ್ನು ಆದಿಲ್ ಅಹಮದ್ ದಾರ್ ಗೆ ಖಾನ್ ಒದಗಿಸಿದ್ದ ಎಂದು ವರದಿಗಳಿಂದ ತಿಳಿದುಬಂದಿದೆ. ಅಷ್ಟೇ ಅಲ್ಲದೆ ಕಣಿವೆ ರಾಜ್ಯದಲ್ಲಿ ನಡೆದಿರುವ ಹಲವು ಸ್ಪೋಟಗಳಲ್ಲಿ ಈತನ ಪಾತ್ರವಿತ್ತು ಎನ್ನಲಾಗಿದೆ.

Comments are closed.