ಕರ್ನಾಟಕ

ಧಾರವಾಡ: ಕಟ್ಟಡ ಕುಸಿತ ದುರಂತದಲ್ಲಿ ಮೂವರನ್ನು ಕಾಪಾಡಿ ಸಾವನ್ನೇ ಗೆದ್ದು ಬಂದ ಕಾರ್ಮಿಕ

Pinterest LinkedIn Tumblr


ಧಾರವಾಡ: ಕುಮಾರೇಶ್ವರ ಬಡಾವಣೆಯಲ್ಲಿ ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ಈ ಅವಘಡ ಸಂಭವಿಸುವ ವೇಳೆ ಮೂರನೇ ಮಹಡಿಯಲ್ಲಿದ್ದ ಕಾರ್ಮಿಕರೊಬ್ಬರು ತನ್ನ ಜೊತೆ ಇನ್ನೂ ಮೂವರ ಜೀವವನ್ನು ಕಾಪಾಡಿ, ಸಾವನ್ನೇ ಗೆದ್ದು ಬಂದಿದ್ದಾರೆ.

ಮೂರನೇ ಅಂತಸ್ತಿನಲ್ಲಿ ಪೇಂಟಿಗ್ ಕೆಲಸ ಮಾಡ್ತಿದ್ದ ಶಿವಾನಂದ ತನ್ನ ಜೊತೆಗಿದ್ದ ಇಬ್ಬರನ್ನು ಬದುಕಿಸಿ, ಹೀರೋ ಆಗಿದ್ದಾರೆ. ನಾನು ಆರಾಮಗಿದ್ದೀನಿ. ನನಗೇನು ಆಗಿಲ್ಲ ನಾನು ಮೂರನೇ ಅಂತಸ್ತಿನಲ್ಲಿ ಪೇಟಿಂಗ್ ಮಾಡುತ್ತಿದ್ದಾಗ ಉರುಳಿ ಬಿತ್ತು. ನಾನು ಇಬ್ಬರನ್ನು ಕಾಪಾಡಿದ್ದೇನೆ ಎಂದು ಹೇಳಿದ್ದಾರೆ.

ಮಧ್ಯಾಹ್ನ 3.40ರ ವೇಳೆಗೆ ಜನ ನೋಡುತ್ತಿದ್ದಂತೆ 3 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಕಟ್ಟಡ ಕುಸಿದು ಬಿದ್ದಿದೆ. ಈ ಕಟ್ಟಡ ಕಾಮಗಾರಿಯಲ್ಲಿ ಇವತ್ತು 100ಕ್ಕೂ ಹೆಚ್ಚು ಮಂದಿ ಇದ್ದರು ಅಂತ ಹೇಳಲಾಗಿದೆ. ಈ ಪೈಕಿ 40ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ. 27 ಮಂದಿಯನ್ನು ಜಿಲ್ಲಾಸ್ಪತ್ರೆ, 13 ಮಂದಿಗೆ ಕಿಮ್ಸ್, 6 ಮಂದಿಗೆ ಎಸ್‍ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಸುದ್ದಿ ತಿಳಿದು ಭಾರೀ ಸಂಖ್ಯೆಯಲ್ಲಿ ಜನ ಸ್ಥಳದತ್ತ ಹರಿದು ಬರುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಒಳಗಿನಿಂದ ರಕ್ಷಣೆಗಾಗಿ ಕಿರುಚಾಡುತ್ತಿರುವ ಧನಿಯೂ ಕೇಳಿ ಬರುತ್ತಿದೆ. ಹೀಗಾಗಿ ಅಮ್ಲಜನಕವನ್ನು ಪೂರೈಕೆ ಮಾಡಲಾಗುತ್ತಿದೆ.

ಸ್ಥಳಕ್ಕೆ ರಕ್ಷಣಾ ಪಡೆ ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಸಮರೋಪಾದಿಯಲ್ಲಿ ಶ್ರಮಿಸುತ್ತಿದ್ದಾರೆ. ಈ ಕಟ್ಟಡ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮಾವ ಅವರಿಗೆ ಸೇರಿದ್ದು ನಾಲ್ವರು ಪಾಲುದಾರರು ಬಂಡವಾಳ ಹೂಡಿದ್ದಾರೆ. ಕಳಪೆ ಕಾಮಗಾರಿಯಿಂದಲೇ ಕಾಂಪ್ಲೆಕ್ಸ್ ಕುಸಿದಿದೆ ಎನ್ನುವ ಆರೋಪ ಕೇಳಿಬಂದಿದೆ.

Comments are closed.